ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಬೆನ್ನಲ್ಲೇ ಕೋಚ್‌ಗಳ ತಲೆದಂಡವಾಗಿದೆ. ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಕುತೂಹಲ ಇನ್ನಷ್ಟು ಹೆಚ್ಚಳವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಲಾಹೋರ್(ಆ.10): ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಪಾಕ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಹಾಗೂ ನ್ಯೂಜಿಲೆಂಡ್‌ನ ಮಾಜಿ ಕೋಚ್ ಮೈಕ್ ಹೆಸ್ಸನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ವಿಶ್ವಕಪ್ ಸೋಲು: ಪಾಕ್ ಕೋಚ್‌ಗೆ ಗೇಟ್‌ಪಾಸ್
undefined
ಇತ್ತೀಚೆಗೆ ಐಪಿಎಲ್‌ನ ಕಿಂಗ್ಸ್ ಇಲೆವನ್ ಪಂಜಾಬ್ ಕೋಚ್ ಹುದ್ದೆಗೆ ಹೆಸ್ಸನ್ ರಾಜೀನಾಮೆ ನೀಡಿದ್ದರು. ಅಲ್ಲದೇ ಭಾರತ ತಂಡದ ಕೋಚ್ ಹುದ್ದೆಗೂ ಅವರು ಅರ್ಜಿ ಸಲ್ಲಿಸಿದ್ದಾರೆ. ಮಿಸ್ಬಾ ಉಲ್ ಹಕ್ ಪಾಕಿಸ್ತಾನ ಪರ 75 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಏಕದಿನ ವಿಶ್ವಕಪ್ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಧಾನ ಕೋಚ್ ಮಿಕಿ ಆರ್ಥರ್, ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಹಾಗೂ ಬೌಲಿಂಗ್ ಕೋಚ್ ಅಜರ್ ಮೆಹಮೂದ್‌ರನ್ನು ವಜಾಗೊಳಿಸಿತ್ತು.