ಏಷ್ಯಾ ವಾಲಿಬಾಲ್‌: ಸೆಮೀಸ್ ಪ್ರವೇಶಿಸಿದ ಭಾರತ

By Kannadaprabha News  |  First Published Aug 10, 2019, 2:13 PM IST

ಏಷ್ಯನ್‌ ಅಂಡರ್‌-23 ಪುರುಷರ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ನಾಲ್ಕರಘಟ್ಟದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಮ್ಯಾನ್ಮಾರ್‌(ಆ.10): ಏಷ್ಯನ್‌ ಅಂಡರ್‌-23 ಪುರುಷರ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಭಾರತ ತಂಡ ಇತಿಹಾಸ ಬರೆದಿದೆ. 

A landmark victory that marks India's arrival into Asian Volleyball's elite!Boys were RELENTLESS, especially after losing the first set.India bounced back and how!Three straight sets victory to seal a place in the first Semi Final in u-23 Asian 🏐 history! pic.twitter.com/Mmgx0B6HB5

— Pro Volleyball (@ProVolleyballIN)

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ 3-1 ಸೆಟ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ, ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಉಪಾಂತ್ಯ ತಲುಪಿತು. ಶನಿವಾರ ನಡೆಯಲಿರುವ ಸೆಮೀಸ್‌ನಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. 

Latest Videos

ಆಸೀಸ್‌ ವಿರುದ್ಧ ಮೊದಲ ಸೆಟ್‌ ಅನ್ನು 16-25ರಿಂದ ಸೋತಿದ್ದ ಭಾರತ, ನಂತರದ 3 ಸೆಟ್‌ಗಳಲ್ಲಿ 25-19, 25-21, 27-25ರಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡಿತು. ಪಾಕಿಸ್ತಾನ ಕಜಕಸ್ತಾನವನ್ನು ಸೋಲಿಸಿ ಸೆಮೀಸ್‌ಗೇರಿತು. ಚೈನೀಸ್‌ ತೈಪೆ ಹಾಗೂ ಜಪಾನ್‌ ಮತ್ತೊಂದು ಸೆಮೀಸ್‌ನಲ್ಲಿ ಸೆಣಸಲಿವೆ.
 

click me!