ಟೀಂ ಇಂಡಿಯಾ ಯುವ ವೇಗಿ ನವದೀಪ್ ಸೈನಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಸೈನಿ ಟೀಂ ಇಂಡಿಯಾ ಪ್ರತಿನಿಧಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಆ.20): ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ಭರವಸೆ ಮೂಡಿಸಿದ ವೇಗಿ ನವದೀಪ್ ಸೈನಿ ಅವರನ್ನು ಭವಿಷ್ಯಕ್ಕೆ ಸಿದ್ಧಪಡಿಸುವ ಉದ್ದೇಶದಿಂದ ಟೆಸ್ಟ್ ಸರಣಿ ವೇಳೆ ನೆಟ್ ಬೌಲರ್ ಆಗಿ ಉಳಿಸಿಕೊಳ್ಳಲು ಭಾರತ ತಂಡದ ಆಡಳಿತ ನಿರ್ಧರಿಸಿದೆ.
ಹೇಗಿದ್ದ, ಹೇಗಾದ ಗೊತ್ತಾ ನವದೀಪ್ ಶೈನಿ..?
undefined
ಭಾರತ ಪರ ಟಿ20ಯಲ್ಲಿ ಎಸೆದ ಮೊದಲ ಓವರ್‌ನಲ್ಲೇ 2 ವಿಕೆಟ್ ಕಬಳಿಸುವ ಮೂಲಕ ಸೈನಿ ಮಿಂಚಿದ್ದಲ್ಲದೆ, ಪಂದ್ಯದಲ್ಲಿ 17 ರನ್‌ಗೆ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡುವ ಸೈನಿ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸೈನಿ ಗಾಡ್ ಫಾದರ್ ಗಂಭೀರ್ ಆಕ್ರೋಶಗೊಂಡಿದ್ದೇಕೆ..?
ನವದೀಪ್ ಸೈನಿ 2019ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಇದುವರೆಗೂ 43 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕರ್ನಲ್ ಮೂಲದ 26 ವರ್ಷದ ವೇಗಿ 120 ವಿಕೆಟ್ ಕಬಳಿಸಿ ಮಿಂಚಿದ್ದಾರೆ.