
ಅನಾಹೀಮ್(ಯುಎಸ್): ಭಾರತದ ಸ್ಟಾರ್ ಶಟ್ಲರ್ ಪಿ. ಕಶ್ಯಪ್ ಮತ್ತು ಎಚ್.ಎಸ್. ಪ್ರಣಯ್, ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಕ್ವಾರ್ಟರ್'ಫೈನಲ್'ನಲ್ಲಿ ಭಾರತದವರೇ ಆದ ಸಮೀರ್'ರನ್ನು 21-13,21-16 ನೇರ ಗೇಮ್'ಗಳಿಂದ ಸೋಲಿಸುವ ಮೂಲಕ ಕಶ್ಯಪ್ ಸೆಮೀಸ್‌ಗೇರಿದರು. ಮುಂದಿನ ಹಂತದಲ್ಲಿ ಕಶ್ಯಪ್, ಕೊರಿಯಾದ ಕ್ವಾಂಗ್ ಹೀ ಹಿಯೊ ಸವಾಲನ್ನು ಎದುರಿಸಲಿದ್ದಾರೆ.
ಇನ್ನು ಮತ್ತೊಂದು ಕ್ವಾರ್ಟರ್'ಫೈನಲ್'ನಲ್ಲಿ ಜಪಾನ್'ನ ಕಾಂಟಾ ತ್ಸುನಿಯಮಾ ವಿರುದ್ಧ 10-21, 21-15, 21-18 ಗೇಮ್'ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ರಣಯ್ ನಾಲ್ಕರ ಘಟ್ಟ ಪ್ರವೇಶಿಸಿದರು. ಸೆಮೀಸ್'ನಲ್ಲಿ ಪ್ರಣಯ್, ವಿಯೆಟ್ನಾಂನ ತೈನ್ ಮಿಗ್ ಗುಯೆನ್ ವಿರುದ್ಧ ಸೆಣಸಲಿದ್ದಾರೆ.
ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದಲ್ಲಿ ಜಪಾನ್'ನ ಹಿರೊಕಿ ಒಕುಮುರ ಹಾಗೂ ಮಾಸಾಯುಕಿ ಒನೊಡೆರಾ ಜೋಡಿಯನ್ನು 21-18, 22-20 ಗೇಮ್'ಗಳಿಂದ ಮಣಿಸಿದ ಭಾರತದ ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಜೋಡಿ ಸಹ ಸೆಮಿಫೈನಲ್ ಪ್ರವೇಶಿಸಿತು. ನಾಲ್ಕರ ಘಟ್ಟದಲ್ಲಿ ಭಾರತದ ಜೋಡಿ ಚೈನಾ ತೈಪೆಯ ಅಗ್ರ ಶ್ರೇಯಾಂಕಿತ ಜೋಡಿ ಲೂ ಚಿಂಗ್ ಯೂ ಹಾಗೂ ಯಂಗ್ ಪೂ ಹ್ಯುನ ಎದುರು ಸೆಣಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.