ವಿನಯ್'ಕುಮಾರ್ ದಾಳಿಗೆ ಮಹಾರಾಷ್ಟ್ರ ಖತಂ; ಮೊದಲ ದಿನ ಕರ್ನಾಟಕ ಮೇಲುಗೈ

Published : Nov 01, 2017, 05:52 PM ISTUpdated : Apr 11, 2018, 12:55 PM IST
ವಿನಯ್'ಕುಮಾರ್ ದಾಳಿಗೆ ಮಹಾರಾಷ್ಟ್ರ ಖತಂ; ಮೊದಲ ದಿನ ಕರ್ನಾಟಕ ಮೇಲುಗೈ

ಸಾರಾಂಶ

* ಪುಣೆಯಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ-ಕರ್ನಾಟಕ ರಣಜಿ ಪಂದ್ಯ * ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ 245 ರನ್'ಗೆ ಆಲೌಟ್; ಕರ್ನಾಟಕ 117/0 * ಮಹಾರಾಷ್ಟ್ರದ ರಾಹುಲ್ ತ್ರಿಪಾಠಿ ಭರ್ಜರಿ ಶತಕ; ಕರ್ನಾಟಕದ ವಿನಯ್'ಕುಮಾರ್ ಭರ್ಜರಿ ಬೌಲಿಂಗ್

ಪುಣೆ(ನ. 01): ಈ ಬಾರಿಯ ರಣಜಿ ಋತುವಿನಲ್ಲಿ ಹ್ಯಾಟ್ರಿಕ್ ಗೆಲುವಿಗೆ ಕಣ್ಣುಹಾಕಿರುವ ಕರ್ನಾಟಕ ಕ್ರಿಕೆಟ್ ತಂಡ ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮೊದಲ ಹೆಜ್ಜೆಯನ್ನಿಟ್ಟಿದೆ. ಇಂದು ಆರಂಭಗೊಂಡ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ದಿನದ ಗೌರವ ಸಂಭವಿಸಿದೆ. ಮಹಾರಾಷ್ಟ್ರ ಮೊದಲ ಇನ್ನಿಂಗ್ಸಲ್ಲಿ 245 ರನ್'ಗೆ ಆಲೌಟ್ ಆಗಿದೆ. ಕರ್ನಾಟಕ ತಂಡ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 117 ರನ್ ಪೇರಿಸಿ ಉತ್ತಮ ಸ್ಥಿತಿಯಲ್ಲಿದೆ.

ಟಾಸ್ ಸೋತು ಮೊದಲ ಪಾಳಿ ಆರಂಭಿಸಿದ ಆತಿಥೇಯ ಮಹಾರಾಷ್ಟ್ರ ತಂಡ ತನ್ನ ಮೊದಲ ಇನ್ನಿಂಗ್ಸಲ್ಲಿ 245 ರನ್'ಗೆ ಆಲೌಟ್ ಆಗಿದೆ. ರಾಹುಲ್ ತ್ರಿಪಾಠಿ ಮತ್ತು ನೌಷದ್ ಶೇಖ್ ಅವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಬ್ಯಾಟುಗಾರರಾರೂ ಡಜನ್ ಮೊತ್ತದ ಗಡಿ ಕೂಡ ದಾಟಲಿಲ್ಲ. ಒಂದು ಹಂತದಲ್ಲಿ 28 ರನ್'ಗೆ 5 ವಿಕೆಟ್ ಕಳೆದುಕೊಂಡು ಮೂರಂಕಿ ಮೊತ್ತ ಕೂಡ ಬರೋದಿಲ್ಲ ಎಂಬಂತಿದ್ದ ಸ್ಥಿತಿಯಲ್ಲಿ ಜೊತೆಯಾದ ನೌಷಾದ್ ಶೇಖ್ ಮತ್ತು ರಾಹುಲ್ ತ್ರಿಪಾಠಿ 6ನೇ ವಿಕೆಟ್'ಗೆ 147 ರನ್ ಜೊತೆಯಾಟ ಆಡಿ ತಂಡದ ಮಾನ ಕಾಪಾಡಿದರು.

ಅದ್ಭುತ ಆಟವಾಡಿದ ರಾಹುಲ್ ತ್ರಿಪಾಠಿ ಭರ್ಜರಿ ಶತಕ ಭಾರಿಸಿದರು. ಕೇವಲ 114 ರನ್'ಗಳಲ್ಲಿ 3 ಸಿಕ್ಸರ್ ಮತ್ತು 13 ಬೌಂಡರಿ ಒಳಗೊಂಡಂತೆ 120 ರನ್ ಗಳಿಸಿದರು. ನೌಷಾದ್ ಅವರು 69 ರನ್ ಗಳಿಸಿದರು.

ಇನ್ನು, ನಾಯಕ ವಿನಯ್ ಕುಮಾರ್ 59 ರನ್'ಗೆ 6 ವಿಕೆಟ್ ಕಬಳಿಸಿ ಮಹಾರಾಷ್ಟ್ರೀಯರಿಗೆ ಮಾರಕವಾದರು. ಅಭಿಮನ್ಯು ಮಿಥುನ್ ಕೇವಲ 1 ವಿಕೆಟ್ ಕಿತ್ತರಾದರೂ ನಾಯಕನೊಂದಿಗೆ ಒಳ್ಳೆಯ ಬೌಲಿಂಗ್ ಜೋಡಿಯಾಗಿ ಎದುರಾಳಿಗಳನ್ನು ಕಂಗೆಡಿಸಿದರು.

ಮಹಾರಾಷ್ಟ್ರದ ಇನ್ನಿಂಗ್ಸ್ ಮುಕ್ತಾವಾದ ಬಳಿಕ ಕರ್ನಾಟಕ ಯಾವುದೇ ಅವಘಡವಿಲ್ಲದೇ ದಿನಾಂತ್ಯಗೊಳಿಸಿತು. ಆರ್.ಸಮರ್ಥ್ ಮತ್ತು ಮಯಂಕ್ ಅಗರ್ವಾಲ್ ಇಬ್ಬರೂ ಮೊದಲ ವಿಕೆಟ್'ಗೆ ಮುರಿಯದ 117 ರನ್ ಜೊತೆಯಾಟ ನೀಡಿದ್ದಾರೆ ಮಯಂಕ್ ಅಜೇಯ ಅರ್ಧಶತಕ ಗಳಿಸಿದರೆ, ಸಮರ್ಥ್ ಅಜೇಯ 47 ರನ್ ಭಾರಿಸಿದ್ದಾರೆ.

ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ 55 ಓವರ್ 245 ರನ್ ಆಲೌಟ್
(ರಾಹುಲ್ ತ್ರಿಪಾಠಿ 120, ನೌಷಾದ್ ಶೇಖ್ 69 ರನ್ - ಆರ್.ವಿನಯ್'ಕುಮಾರ್ 59/6, ಪವನ್ ದೇಶಪಾಂಡೆ 38/2)

ಕರ್ನಾಟಕ ಮೊದಲ ಇನ್ನಿಂಗ್ಸ್ 31 ಓವರ್ 117/0
(ಮಯಂಕ್ ಅಗರ್ವಾಲ್ ಅಜೇಯ 50, ಆರ್.ಸಮರ್ಥ್ ಅಜೇಯ 47 ರನ್)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎರಡು ಮ್ಯಾಚ್ ಬಾಕಿ ಇರುವಂತೆಯೇ ಆ್ಯಶಸ್ ಕಿರೀಟ ಗೆದ್ದ ಆಸ್ಟ್ರೇಲಿಯಾ! ಇಂಗ್ಲೆಂಡ್‌ಗೆ ರೋಚಕ ಸೋಲು
ಅಂಡರ್-19 ಏಷ್ಯಾಕಪ್‌: ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!