ಭಾರತ ಫುಟ್ಬಾಲ್‌ ತಂಡದ ಕೋಚ್‌ ಹುದ್ದೆಗೆ 250 ಮಂದಿ ಅರ್ಜಿ!

Published : Apr 04, 2019, 04:57 PM IST
ಭಾರತ ಫುಟ್ಬಾಲ್‌ ತಂಡದ ಕೋಚ್‌ ಹುದ್ದೆಗೆ 250 ಮಂದಿ ಅರ್ಜಿ!

ಸಾರಾಂಶ

ಭಾರತ ಫುಟ್ಬಾಲ್ ತಂಡದ ಖಾಲಿ ಇರುವ ಪ್ರಧಾನ ಕೋಚ್‌ ಹುದ್ದೆಗೆ ಬರೋಬ್ಬರಿ 250 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಯುರೋಪ್‌ನ ಕೆಲ ಹೆಸರಾಂತ ಕೋಚ್‌ಗಳು ಸಹ ಭಾರತ ತಂಡದ ಮಾರ್ಗದರ್ಶಕರಾಗಲು ಆಸಕ್ತಿ ತೋರಿರುವುದು ವಿಶೇಷ.

ನವದೆಹಲಿ[ಏ.04]: ಭಾರತ ಪುರುಷರ ಫುಟ್ಬಾಲ್‌ ತಂಡದ ಆಕರ್ಷಕ ಪ್ರದರ್ಶನ ವಿಶ್ವದ ಗಮನ ಸೆಳೆದಿದ್ದು, ಖಾಲಿ ಇರುವ ಪ್ರಧಾನ ಕೋಚ್‌ ಹುದ್ದೆಗೆ ಬರೋಬ್ಬರಿ 250 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಯುರೋಪ್‌ನ ಕೆಲ ಹೆಸರಾಂತ ಕೋಚ್‌ಗಳು ಸಹ ಭಾರತ ತಂಡದ ಮಾರ್ಗದರ್ಶಕರಾಗಲು ಆಸಕ್ತಿ ತೋರಿರುವುದು ವಿಶೇಷ.

ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಭಾರತ ತಂಡ ಕ್ವಾರ್ಟರ್‌ ಫೈನಲ್‌ಗೇರಲು ವಿಫಲವಾದ ಹಿನ್ನೆಲೆಯಲ್ಲಿ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಪ್ರಧಾನ ಕೋಚ್‌ ಹುದ್ದೆ ಖಾಲಿ ಇದ್ದು, ಆ ಸ್ಥಾನಕ್ಕೆ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅರ್ಜಿ ಆಹ್ವಾನಿಸಿತ್ತು.

ಅರ್ಜಿ ಸಲ್ಲಿಸಿರುವವರ ಪೈಕಿ ಐಎಸ್‌ಎಲ್‌ ಹಾಗೂ ಐ-ಲೀಗ್‌ ಕ್ಲಬ್‌ಗಳ ಕೋಚ್‌ಗಳೂ ಇದ್ದಾರೆ. ಬೆಂಗಳೂರು ಎಫ್‌ಸಿ ತಂಡದ ಮಾಜಿ ಕೋಚ್‌ ಆಲ್ಬರ್ಟ್‌ ರೋಕಾ ಸಹ ಕೋಚ್‌ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ. ಇಟಲಿಯ ಗಿಯೊವಾನಿ ಡೆ ಬಿಯಾಸಿ, ಸ್ವೀಡನ್‌ನ ಹಾಕನ್‌ ಎರಿಕ್ಸನ್‌, ಫ್ರಾನ್ಸ್‌ನ ರೇಮಂಡ್‌ ಡಾಮ್ನೆಕ್‌ ಹಾಗೂ ಇಂಗ್ಲೆಂಡ್‌ನ ಸ್ಯಾಮ್‌ ಅಲ್ಲಾರ್‌ಡೈಸ್‌ ಅರ್ಜಿ ಸಲ್ಲಿಸಿರುವ ಯುರೋಪ್‌ ಪ್ರಮುಖ ಕೋಚ್‌ಗಳೆನಿಸಿದ್ದಾರೆ. ಮಾ.29ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿತ್ತು. ಸದ್ಯದಲ್ಲೇ ಹೊಸ ಕೋಚ್‌ ನೇಮಕಗೊಳ್ಳಲಿದೆ ಎಂದು ಎಐಎಫ್‌ಎಫ್‌ ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ
ಮೆಸ್ಸಿ ಕಿಕ್ ಮಾಡಿದ ಚೆಂಡಿಗಾಗಿ ಕಿತ್ತಾಡಿದ ಅಭಿಮಾನಿಗಳು: ವೀಡಿಯೋ ಭಾರಿ ವೈರಲ್