
ನವದೆಹಲಿ[ಏ.04]: ಕಿಂಗ್ಸ್ ಇಲೆವೆನ್ಸ್ ಪಂಜಾಬ್ ವಿರುದ್ಧ 8 ರನ್‌ಗೆ 7 ವಿಕೆಟ್ ಕಳೆದುಕೊಂಡು ಕೈಯಲ್ಲಿದ್ದ ಪಂದ್ಯವನ್ನು ಬಿಟ್ಟುಕೊಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್, ಆ ಆಘಾತದಿಂದ ಹೊರಬರುವ ಮೊದಲೇ ಸನ್‌ರೈಸರ್ಸ್ ಹೈದರಾಬಾದ್‌ನಂತಹ ಬಲಿಷ್ಠ ತಂಡ ಎದುರಾಗಲಿದೆ. ಗುರುವಾರ ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಪ್ರತಿಭಾವಂತ ಆಟಗಾರರಿಂದ ಕೂಡಿರುವ ಡೆಲ್ಲಿ, ಗೆಲುವಿನ ಹಳಿಗೆ ಮರಳಲು ಕಾತರಿಸುತ್ತದೆ.
ಎಬಿಡಿ, ಕೊಹ್ಲಿ ಬಗ್ಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಹೇಳಿದ್ದಿಷ್ಟು..!
4 ಪಂದ್ಯಗಳಲ್ಲಿ ತಲಾ 2 ಗೆಲುವು, ಸೋಲು ಕಂಡಿರುವ ಡೆಲ್ಲಿ, ಆರಂಭಿಕ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನು ಮತ್ತೊಮ್ಮೆ ತೋರಲು ಸಾಧ್ಯವಾಗುತ್ತಿಲ್ಲ. ಬ್ಯಾಟಿಂಗ್ ಕೈಹಿಡಿದಾಗ ಬೌಲರ್‌ಗಳು ವಿಫಲರಾಗುತ್ತಿದ್ದಾರೆ. ಬೌಲರ್‌ಗಳು ಯಶಸ್ಸು ಕಂಡರೆ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನದಿಂದ ನಿರಾಸೆ ಮೂಡಿಸಿದ್ದಾರೆ. ಸಾಂಘಿಕ ಪ್ರದರ್ಶನ ತೋರಿದರೆ ಮಾತ್ರ ಸನ್‌ರೈಸರ್ಸ್ ವಿರುದ್ಧ ಗೆಲುವು ಸಾಧ್ಯ.
ಸನ್‌ರೈಸರ್ಸ್ ಪ್ರಚಂಡ ಲಯ: ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಸತತ ಗೆಲುವುಗಳೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಮೂರೂ ಪಂದ್ಯಗಳಲ್ಲಿ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋ ಶತಕದ ಜೊತೆಯಾಟವಾಡಿದ್ದಾರೆ. ಇವರಿಬ್ಬರ ಅಬ್ಬರದಿಂದಾಗಿ ಮಧ್ಯಮ ಕ್ರಮಾಂಕ ಹೆಚ್ಚಿನ ಪರೀಕ್ಷೆಗೆ ಒಳಪಟ್ಟಿಲ್ಲ.
ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!
ಒಂದೊಮ್ಮೆ ವಾರ್ನರ್ ಹಾಗೂ ಬೇರ್‌ಸ್ಟೋವ್ ವಿಕೆಟ್ ಅನ್ನು ಬೇಗನೆ ಉರುಳಿಸಿದರೆ ಡೆಲ್ಲಿ ಪಂದ್ಯ ಗೆಲ್ಲುವ ಸಾಧ್ಯತೆ ಹೆಚ್ಚಾಗಲಿದೆ. ಕಗಿಸೋ ರಬಾಡ ಹಾಗೂ ಕ್ರಿಸ್ ಮೋರಿಸ್ ಮೇಲೆ ಡೆಲ್ಲಿ ಹೆಚ್ಚಿನ ನಿರೀಕ್ಷೆ ಇಡಲಿದೆ. ಕೇನ್ ವಿಲಿಯಮ್ಸನ್ ಲಭ್ಯತೆ ಬಗ್ಗೆ ಮಾಹಿತಿ ಇಲ್ಲ. ಭುವನೇಶ್ವರ್ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ರಶೀದ್ ಖಾನ್ ಪ್ರಮುಖ ಅಸ್ತ್ರವೆನಿಸಿದ್ದು ಪ್ರತಿ ಪಂದ್ಯದಲ್ಲೂ ಪರಿಣಾಮಕಾರಿಯಾಗುತ್ತಿದ್ದಾರೆ. ಸನ್‌ರೈಸರ್ಸ್ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ಸ್ಥಳ: ನವದೆಹಲಿ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.