ಟಾಫ್ಸ್‌ನಿಂದ ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಔಟ್‌!

By Kannadaprabha News  |  First Published Oct 5, 2019, 10:02 AM IST

ರಿಯೋ ಪದಕ ವಿಜೇತೆ ಸಾಕ್ಷಿ ಮಲಿಕ್ ಟಾಪ್ಸ್ ಯೋಜನೆಯಿಂದ ಹೊರಬಿದ್ದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ದಾಖಲೆ ಬರೆದಿದ್ದ ಸಾಕ್ಷಿಗೀಗ ಅಘಾತ ಎದುರಾಗಿದೆ.ಈ ಕುರಿತಾದ ವರದಿ ಇಲ್ಲಿದೆ ನೋಡಿ...  


ನವ​ದೆ​ಹ​ಲಿ[ಅ.05]: 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕುಸ್ತಿ​ಪಟು ಸಾಕ್ಷಿ ಮಲಿಕ್‌ರನ್ನು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆ (ಟಾಫ್ಸ್‌)ಯಿಂದ ಕೈಬಿ​ಡ​ಲಾ​ಗಿದೆ. ಭಾರ​ತೀಯ ಕ್ರೀಡಾ ಪ್ರಾಧಿ​ಕಾರ (ಸಾಯ್‌)ದ ಮಿಷನ್‌ ಒಲಿಂಪಿಕ್‌ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಹೇಳದೆ ಕೇಳದೆ ಶಿಬಿರ ತೊರೆದ ಸಾಕ್ಷಿಗೆ ಕುಸ್ತಿ ಫೆಡರೇಷನ್‌ ಚಾಟಿ! 

Tap to resize

Latest Videos

ಇತ್ತೀ​ಚೆಗೆ ಕಜ​ಕಿಸ್ತಾನದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ನಲ್ಲಿ ಸಾಕ್ಷಿ ಮೊದಲ ಸುತ್ತಿ​ನಲ್ಲೇ ಸೋಲುಂಡು ಹೊರ​ಬಿ​ದ್ದಿ​ದ್ದರು. ರಿಯೋ ಗೇಮ್ಸ್‌ ಬಳಿಕ ಅವರ ಪ್ರದರ್ಶನ ತೀರಾ ಕಳಪೆಯಾಗಿದ್ದು, 2020ರ ಒಲಿಂಪಿಕ್ಸ್‌ನ ಪದಕ ಭರ​ವಸೆಗಳ ಪಟ್ಟಿ​ಯಿಂದ ಅವ​ರನ್ನು ತೆಗೆ​ದು​ಹಾ​ಕ​ಲಾ​ಗಿದೆ.

ವಿಶ್ವ ಕುಸ್ತಿ ಕೂಟ: ಭಜರಂಗ್‌ಗೆ ಕಂಚು, ಸುಶೀ​ಲ್‌ಗೆ ಶಾಕ್..!

ಸಾಕ್ಷಿ ಬದ​ಲಿಗೆ ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಯುವ ಕುಸ್ತಿ​ಪಟು ರವಿ ದಹಿಯಾರನ್ನು ಟಾಪ್‌ ಯೋಜನೆಗೆ ಸೇರ್ಪಡೆಗೊಳಿ​ಸ​ಲಾ​ಗಿದೆ. ಟಾಪ್‌ ಯೋಜನೆಯಲ್ಲಿ ಸ್ಥಾನ ಪಡೆ​ದಿ​ರುವ ಕ್ರೀಡಾ​ಪ​ಟು​ಗ​ಳ ತರ​ಬೇ​ತಿಗೆ ಕೇಂದ್ರ ಸರ್ಕಾರ ಮಾಸಿಕ 50,000 ರುಪಾಯಿ ನೆರವು ನೀಡ​ಲಿದೆ.

ವಾಸೀಂ ಅಕ್ರಂ, ರಂಗನಾ ಹೆರಾತ್ ದಾಖಲೆ ಮುರಿದ ಜಡೇಜಾ!

ಕೆಲವು ದಿನಗಳ ಹಿಂದಷ್ಟೇ ಸಾಕ್ಷಿ ಹೇಳದೇ-ಕೇಳದೇ ಲಖನೌದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಹೊರಹೋಗಿ ಸುದ್ದಿಯಾಗಿದ್ದರು.

click me!