
ಮುಂಬೈ: ಟೆಸ್ಟ್ ಪಂದ್ಯವನ್ನ ಮತ್ತಷ್ಟು ಸ್ಪರ್ಧಾತ್ಮಗೊಳಿಸುವ ನಿಟ್ಟಿನಲ್ಲಿ ಟಾಸ್ ಕೈಬಿಡುವ ಪ್ರಸ್ತಾಪನ್ನ ಐಸಿಸಿ ತಳ್ಳಿಹಾಕಿದೆ. ಮುಂಬೈನಲ್ಲಿ ಸಭೆ ಸೇರಿದ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಈ ನಿರ್ಧಾರ ಪ್ರಕಟಿಸಿದೆ. ಟಾಸ್ ಟೆಸ್ಟ್ ಪಂದ್ಯದ ಅವಿಭಾಜ್ಯ ಅಂಗ, ಹಿಂದಿನಂತೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಪ್ರಕ್ರೀಯೆ ಮುಂದುವರಿಯಲಿದೆ ಎಂದು ಐಸಿಸಿ ಸಮಿತಿ ಸ್ಪಷ್ಟಪಡಿಸಿದೆ. ಆತಿಥೇಯ ತಂಡಗಳು ತವರಿನ ಮೈದಾನಗಳ ಲಾಭ ಪಡೆಯೋದನ್ನ ತಪ್ಪಿಸಲು ಟೆಸ್ಟ್ ಪಂದ್ಯದಲ್ಲಿ ಟಾಸ್ ಪ್ರಕ್ರೀಯೆ ಕೈಬಿಡಲು ಮನವಿ ಮಾಡಲಾಗಿತ್ತು. ಟಾಸ್ ರದ್ದಾದರೆ ಪ್ರವಾಸಿ ತಂಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ತವರಿನ ತಂಡಗಳು ತಮಗೆ ಬೇಕಾದ ಪಿಚ್ ಸಿದ್ಧಪಡಿಸಿ ಅನೂಕೂಲ ಪಡೆಯುವುದು ತಪ್ಪುತ್ತದೆ ಅನ್ನೋದು ಒಂದು ವಾದ.
1877ರಲ್ಲಿ ಟೆಸ್ಟ್ ಆರಂಭವಾದಗಿನಿಂದಲೂ ಟಾಸ್ ಪ್ರಕ್ರೀಯ ಪಂದ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಇಂಗ್ಲೀಷ್ ಕೌಂಟಿ ಕ್ರಿಕೆಟ್‌ನಲ್ಲಿ 2016ರಿಂದಲೇ ಟಾಸ್ ಪ್ರಕ್ರೀಯೆಯನ್ನ ಕೈಬಿಡಲಾಗಿದೆ. ಆದರೆ ನೂತನ ನಿಯಮದಿಂದ ಇಂಗ್ಲೀಷ್ ಕೌಂಟಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಟಾಸ್ ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ. ಇದರೊಂದಿಗೆ ಮೈದಾನದಲ್ಲಿ ಅನುಚಿತವಾಗಿ ವರ್ತಿಸುವ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.