ನನ್ನ ಕೋಚಿಂಗ್‌ ಜೀವನದಲ್ಲಿಯೇ ಅತ್ಯುತ್ತಮ ಫೈನಲ್‌: ಏಷ್ಯಾನೆಟ್‌ ಜೊತೆ ಗೋಪಿಚಂದ್‌ ಮಾತು!

Published : Jun 18, 2023, 04:47 PM ISTUpdated : Jun 18, 2023, 04:49 PM IST
ನನ್ನ ಕೋಚಿಂಗ್‌ ಜೀವನದಲ್ಲಿಯೇ ಅತ್ಯುತ್ತಮ ಫೈನಲ್‌: ಏಷ್ಯಾನೆಟ್‌ ಜೊತೆ ಗೋಪಿಚಂದ್‌ ಮಾತು!

ಸಾರಾಂಶ

Indonesia open Championship: ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೇಲ ಗೋಪಿಚಂದ್ ಇಂಡೋನೇಷ್ಯಾ ಓಪನ್‌ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯ ತಮ್ಮ ಕೋಚಿಂಗ್ ವೃತ್ತಿಜೀವನದಲ್ಲಿ ಅತ್ಯುತ್ತಮ ಫೈನಲ್‌ ಎಂದು ಹೇಳಿದ್ದಾರೆ.

ನವದೆಹಲಿ (ಜೂ.18): ಭಾರತದ ಪುರುಷರ ಶಟ್ಲರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾನುವಾರ ಇತಿಹಾಸ ನಿರ್ಮಿಸಿದ್ದಾರೆ. ಅವರು ಇಂಡೋನೇಷ್ಯಾ ಓಪನ್ 1000 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.  ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪುರುಷರ ಷಟ್ಲರ್ ಜೋಡಿ ಗೆದ್ದಿರುವುದು ಇದೇ ಮೊದಲು. ಭಾನುವಾರ ನಡೆದ ಫೈನಲ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಮಲೇಷ್ಯಾದ ವಿಶ್ವ ಚಾಂಪಿಯನ್ ಜೋಡಿ ಆರೋನ್ ಚಿಯಾ ಮತ್ತು ಸೊಹ್ ವೀ ಇಕ್ ಜೋಡಿಯನ್ನು ರೋಚಕ ಹೋರಾಟದಲ್ಲಿ ಮಣಿಸಿತು. ಸೂಪರ್‌ 1000 ಫೈನಲ್‌ ಮಾತ್ರವಲ್ಲದೆ, ಮಲೇಷ್ಯಾದ ಅನುಭವಿ ಜೋಡಿಯ ವಿರುದ್ಧ ಗೆದ್ದಿರುವುದು ಕೂಡ ಇದೇ ಮೊದಲು. ಇದಕ್ಕೂ ಮುನ್ನ ಭಾರತದ ಜೋಡಿ 8 ಪಂದ್ಯಗಳಲ್ಲಿ ಚಿಯಾ ಮತ್ತು ಇಕ್‌ ಜೋಡಿಯ ವಿರುದ್ಧ ಸೋಲು ಕಂಡಿತ್ತು. 9ನೇ ಮುಖಾಮುಖಿಯಲ್ಲಿ ಗೆಲುವು ಸಾಧಿಸಿದ್ದು ಮಾತ್ರವಲ್ಲದೆ, ಐತಿಹಾಸಿಕ ಪ್ರಶಸ್ತಿಯನ್ನೂ ಜಯಿಸಿತು. ಪಂದ್ಯದಲ್ಲಿ ಭಾರತದ ಜೋಡಿಸ 21-17, 21-18 ರಿಂದ ಮಲೇಷ್ಯಾದ ಜೋಡಿಯನ್ನು ಮಣಿಸಿತು. ಅಮೋಘ ಹೋರಾಟದ ಮೂಲಕ ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಜೋಡಿ ಗೆಲುವು ಕಂಡಿತು. ಮಲೇಷ್ಯಾದ ಜೋಡಿ 4 ಬಾರಿ ಮ್ಯಾಚ್ ಪಾಯಿಂಟ್ ಉಳಿಸುವಲ್ಲಿ ಯಶ ಕಂಡಿತಾದರೂ, ಕೊನೆಗೂ ಭಾರತದ ಜೋಡಿ ಗೆಲುವು ಕಾಣುವಲ್ಲಿ ಯಶ ಕಂಡಿತು.

ಲಂಕಾ ಪ್ರವಾಸಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ; ಮಾರಕ ವೇಗಿಗೆ ಬುಲಾವ್

ಮೊದಲ ಬಾರಿಗೆ ಮಲೇಷ್ಯಾ ಜೋಡಿ ವಿರುದ್ಧ ಜಯ: ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಅವರು ಮಲೇಷ್ಯಾದ ವಿಶ್ವ ಚಾಂಪಿಯನ್ ಜೋಡಿ ಆರೋನ್ ಚಿಯಾ ಮತ್ತು ಸೋಹ್ ವೀ ಇಕ್ ಅವರನ್ನು ಸೋಲಿಸಿತು. ಈ ಮಲೇಷ್ಯಾ ಜೋಡಿ ವಿರುದ್ಧ ಮೊದಲ ಬಾರಿಗೆ ಗೆಲುವು ದಾಖಲಿಸಿದಂತಾಗಿದೆ. ಇದಕ್ಕೂ ಮೊದಲು ಭಾರತದ ಜೋಡಿ ಎಂಟು ಪಂದ್ಯಗಳಲ್ಲಿ ಚಿಯಾ ಮತ್ತು ಇಕ್‌ ವಿರುದ್ಧ ಸೋತಿತ್ತು.  ಇದಕ್ಕೂ ಮುನ್ನ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯ ಸೆಮಿಫೈನಲ್‌ನಲ್ಲಿ ಸ ತ್ವಿಕ್‌ಸಾಯಿರಾಜ್-ಚಿರಾಗ್ ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಅವರನ್ನು ಸೋಲಿಸಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 17-21, 21-19, 21-18 ರಿಂದ ಗೆಲುವು ಕಂಡಿತ್ತು.

ಈ ಕನ್ನಡಿಗನನ್ನು CSK ತಂಡದೊಳಗೆ ಆಡಿಸಲು ಧೋನಿಗೆ ಪರ್ಮಿಷನ್ ಕೊಟ್ಟಿದ್ದೇ ಸುರೇಶ್ ರೈನಾ..!

ಗೆಲುವಿಗಿಂತ ಅವರು ಆಡಿದ ಆಟದ ರೀತಿಯೇ ಖುಷಿ ಕೊಟ್ಟಿದೆ: ಸಾತ್ವಿಕ್‌ಸಾಯಿರಾಜ್-ಚಿರಾಗ್ ಗೆಲುವಿನ ನಂತರ ಭಾರತ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಏಷ್ಯಾನೆಟ್ ನ್ಯೂಸ್‌ ಎಕ್ಸ್‌ಕ್ಲೂಸಿವ್‌ ಆಗ ಮಾತನಾಡಿದ್ದಯ,  ಇದು ನನ್ನ ಕೋಚಿಂಗ್ ವೃತ್ತಿಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಈ ಗೆಲುವಿನಿಂದ ನನಗೆ ತೃಪ್ತಿ ಇದೆ. ಗೆಲುವು ಅದ್ಭುತವಾಗಿದೆ, ಆದರೆ ನಾನು ಆಟದಿಂದ ಹೆಚ್ಚು ಖುಷಿಯಾಗಿದ್ದೇನೆ. ಈ ಟೂರ್ನಿಯಲ್ಲಿ ಹುಡುಗರು ಆಡಿದ ರೀತಿ ನನಗೆ ಇಷ್ಟವಾಯಿತು. ಅವರು ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವದ ನಂಬರ್ ಒನ್ ಜೋಡಿಯನ್ನು ಅಷ್ಟು ಸುಲಭವಾಗಿ ಸೋಲಿಸಿದ್ದು ಖುಷಿ ನೀಡಿದೆ.  ಇದು ಭಾರತೀಯ ಬ್ಯಾಡ್ಮಿಂಟನ್‌ ಅದ್ಭುತ ದಿನ. ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!