ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಿಂದ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ತವರಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಇವರಿಬ್ಬರ ಸ್ಥಾನಕ್ಕೆ ಶುಭ್‌ಮಾನ್ ಗಿಲ್ ಹಾಗೂ ತಮಿಳುನಾಡಿನ ವಿಜಯ್ ಶಂಕರ್ ಸ್ಥಾನ ಪಡೆದಿದ್ದಾರೆ.
ನವದೆಹಲಿ(ಜ.13): ಅಮಾನತುಗೊಂಡಿರುವ ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಬದಲಿಗೆ ಅಂಡರ್ 19 ತಂಡದಲ್ಲಿ ಮಿಂಚಿದ ಶುಭ್‌ಮಾನ್ ಗಿಲ್ ಹಾಗೂ ತಮಿಳುನಾಡಿನ ವಿಜಯ್ ಶಂಕರ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಇಬ್ಬರೂ ತಂಡ ಕೂಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಪಾಂಡ್ಯ, ರಾಹುಲ್ ಸಸ್ಪೆಂಡ್: ಸರಣಿಯಿಂದ ಗೇಟ್’ಪಾಸ್
undefined
ಇದೇ ಮೊದಲ ಬಾರಿಗೆ ಶುಭ್‌ಮಾನ್ ಗಿಲ್ ಭಾರತ ಸೀಮಿತ ಓವರ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಂಡರ್ 19 ಹಾಗೂ ಪ್ರಸಕ್ತ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ನ್ಯೂಜಿಲೆಂಡ್ ಪ್ರವಾಸಕ್ಕೂ ಈ ಇಬ್ಬರು ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಪಾಂಡ್ಯ-ರಾಹುಲ್ ವಿಚಾರಣೆ: ಬಿಸಿಸಿಐ ಆಡಳಿತ ಸಮಿತಿಯಲ್ಲಿ ಒಡಕು
ಆಸ್ಟ್ರೇಲಿಯಾ ವಿರುದ್ದದ ಏಕದಿನದಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಖಾಸಗಿ ಟಿವಿ ಶೋನಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ಅಮಾನತಾಗಿದ್ದಾರೆ. ಇದೀಗ ಪಾಂಡ್ಯ ಹಾಗೂ ರಾಹುಲ್ ವಿಚಾರಣೆಯನ್ನ ಬಿಸಿಸಿಐ ಕೈಗೆತ್ತಿಕೊಂಡಿದೆ.