ಆಸ್ಟ್ರೇಲಿಯನ್ ಓಪನ್: ಆಲ್ಕರಜ್ ಮಣಿಸಿ 25ನೇ ಗ್ರಾನ್‌ಸ್ಲಾಂನತ್ತ ಜೋಕೋವಿಚ್ ದಾಪುಗಾಲು

Published : Jan 22, 2025, 10:07 AM IST
ಆಸ್ಟ್ರೇಲಿಯನ್ ಓಪನ್: ಆಲ್ಕರಜ್ ಮಣಿಸಿ 25ನೇ ಗ್ರಾನ್‌ಸ್ಲಾಂನತ್ತ ಜೋಕೋವಿಚ್ ದಾಪುಗಾಲು

ಸಾರಾಂಶ

ಜೋಕೋವಿಚ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆಲ್ಕರಜ್‌ರನ್ನು ಸೋಲಿಸಿ 25ನೇ ಗ್ರ್ಯಾನ್ ಸ್ಲಾಮ್‌ಗೆ ಇನ್ನೆರಡು ಹೆಜ್ಜೆ ಹತ್ತಿರವಾಗಿದ್ದಾರೆ. ಸಬಲೆಂಕಾ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಭಾರತದ ಬೋಪಣ್ಣ-ಝಾಂಗ್ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಸೋತು ಹೊರಬಿದ್ದಿದೆ.

ಮೆಲ್ಬರ್ನ್: ಟೆನಿಸ್ ಮಾಂತ್ರಿಕ ಸರ್ಬಿಯಾದ ನೋವಾಕ್ ಜೋಕೋವಿಚ್ ಐತಿಹಾಸಿಕ 25ನೇ ಗ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಜೋಕೋ, ಪ್ರಶಸ್ತಿಗೆ ಇನ್ನೆರಡೇ ಹೆಜ್ಜೆ ದೂರವಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ ವಿರುದ್ಧ 4-6, 6-4, 6-3, 6-4 ಸೆಟ್‌ಗಳಲ್ಲಿ ಗೆದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ 12ನೇ, ಒಟ್ಟಾರೆ ಗ್ಯಾನ್ ಸ್ಲಾಂ ನಲ್ಲಿ 50ನೇ ಸೆಮಿಫೈನಲ್ ಪ್ರವೇಶಿಸಿದರು. ಶುಕ್ರವಾರ ಸೆಮೀಸ್‌ನಲ್ಲಿ ಜೋಕೋಗೆ ಜರ್ಮನಿಯ ಜೈರವ್ ಸವಾಲು ಎದುರಾಗಲಿದೆ.  ಕ್ವಾರ್ಟರ್‌ನಲ್ಲಿ ಅಲೆಕ್ಸಾಂಡರ್‌ ಜ್ವೆರೆವ್ ಅಮೆರಿಕದ ಟಾಮಿ ಪಾಲ್ ವಿರುದ್ಧ 7-6, 7-6, 2-6, 6-1ರಲ್ಲಿ ಗೆದ್ದರು. 

ನಡೆದಾಡಲೂ ಕಷ್ಟಪಡುವ ವಿನೋದ್ ಕಾಂಬ್ಳಿ ಕೈಹಿಡಿದು ವಾಂಖೇಡೆ ಮೈದಾನಕ್ಕೆ ಕರೆತಂದ ಪತ್ನಿ ಆಂಡ್ರಿಯಾ!

ಕೊನೆಗೂ ಆಲ್ಕರಜ್‌ ಸವಾಲು ಗೆದ್ದ ಜೋಕೋ!

ಈ ಬಾರಿ ಟೂರ್ನಿಯ ಅತ್ಯಂತ ಪ್ರಮುಖ ಪಂದ್ಯ ಪೈನಲ್‌ಗೂ ಮುನ್ನವೇ ನಡೆಯಿತು. ಮಂಗಳವಾರ 10 ಬಾರಿ ಚಾಂಪಿಯನ್‌, ಸರ್ಬಿಯಾದ ಜೋಕೋವಿಚ್‌ ಹಾಗೂ ಅವರ ಪ್ರಮುಖ ಎದುರಾಳಿ, ಟೆನಿಸ್‌ ಲೋಕದ ಹೊಸ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾದರು. 37 ವರ್ಷದ ಜೋಕೋ ಹಾಗೂ 21ರ ಆಲ್ಕರಜ್‌ ಈ ಪಂದ್ಯಕ್ಕೂ ಮುನ್ನ ಈ ವರೆಗೂ 7 ಬಾರಿ ಪರಸ್ಪರ ಸೆಣಸಾಡಿದ್ದರು. ಈ ಪೈಕಿ ಜೋಕೋ 4ರಲ್ಲಿ ಗೆದ್ದಿದ್ದರೆ, ಉಳಿದ 3 ಪಂದ್ಯಗಳಲ್ಲಿ ಆಲ್ಕರಜ್‌ ಜಯಗಳಿಸಿದ್ದರು. ಕಳೆದೆರಡು ವಿಂಬಲ್ಡನ್‌ ಟೂರ್ನಿ ಫೈನಲ್‌ನಲ್ಲೂ ಜೋಕೋವಿಚ್‌ರನ್ನು ಆಲ್ಕರಜ್‌ ಸೋಲಿಸಿದ್ದರು.

ಚಾಂಪಿಯನ್ಸ್ ಟ್ರೋಫಿಯಿಂದ ಸಿರಾಜ್ ಕೈಬಿಟ್ಟಿದ್ದೇಕೆ? ಮೌನ ಮುರಿದ ಕ್ಯಾಪ್ಟನ್ ರೋಹಿತ್ ಶರ್ಮಾ

ಸೆಮೀಸ್‌ಗೆ ಸಬಲೆಂಕಾ: ಆಸ್ಟ್ರೇಲಿಯನ್ ಓಪನ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬೆಲಾರುಸ್‌ನ ಅರೈನಾ ಸಬಲೆಂಕಾ, ಸೆಮೀಸ್‌ಗೇರಿದ್ದಾರೆ. ಕ್ವಾರ್ಟರ್‌ನಲ್ಲಿ ರಷ್ಯಾದ ಅನಸ್ತಾಸಿಯಾಪಾವು ಚೆಂಕೊ ವಿರುದ್ಧ 6-2, 2-6, 6-3ರಲ್ಲಿ ಗೆದ್ದರು. ಮತ್ತೊಂದು ಕ್ವಾರ್ಟರಲ್ಲಿ ಅಮೆರಿಕದ ಕೊಕೊ ಗಾಫ್‌ರನ್ನು 7-5, 6-4ರಲ್ಲಿ ಸೋಲಿಸಿ ಸ್ಪೇನ್‌ನ ಪೌಲಾ ಬಡೋಸಾ ಸೆಮೀಸ್‌ಗೇರಿದರು. ಫೈನಲ್‌ನಲ್ಲಿ ಸ್ಥಾನಕ್ಕೆ ಸಬಲೆಂಕಾ-ಬಡೋಸಾ ಸೆಣಸಲಿದ್ದಾರೆ. 

ಇದೇ ವೇಳೆ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ರೋಹನ್ ಬೋಪಣ್ಣ- ಚೀನಾದ ಶ್ಯುಯಿ ಝಾಂಗ್‌ಗೆ ಸೋಲು ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.
ಎದುರಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ