Australian Open 2024: ನೋವಾಕ್ ಜೋಕೋವಿಚ್‌ 3ನೇ ಸುತ್ತಿಗೆ

By Kannadaprabha News  |  First Published Jan 18, 2024, 10:01 AM IST

ಕಳೆದ ಬಾರಿ ರನ್ನರ್‌-ಅಪ್‌, ಗ್ರೀಕ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌, ರಷ್ಯಾದ ಆ್ಯಂಡ್ರೆ ರುಬ್ಲೆವ್‌, ಇಟಲಿಯ ಜಾನಿಕ್‌ ಸಿನ್ನರ್‌, 15ನೇ ಶ್ರೇಯಾಂಕಿತ, ರಷ್ಯಾದ ಕರೇನ್‌ ಕಚನೋವ್‌ ಕೂಡಾ 2ನೇ ಸುತ್ತಿನ ಗೆಲುವು ಸಾಧಿಸಿ, ಮುಂದಿನ ಸುತ್ತಿಗೇರಿದರು.


ಮೆಲ್ಬರ್ನ್‌(ಜ.18): 10 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ವಿಶ್ವ ನಂ.1 ಜೋಕೋ ಬುಧವಾರ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್‌ ವಿರುದ್ಧ 6-3, 4-6, 7-6(7/4), 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ಬಾರಿ ರನ್ನರ್‌-ಅಪ್‌, ಗ್ರೀಕ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌, ರಷ್ಯಾದ ಆ್ಯಂಡ್ರೆ ರುಬ್ಲೆವ್‌, ಇಟಲಿಯ ಜಾನಿಕ್‌ ಸಿನ್ನರ್‌, 15ನೇ ಶ್ರೇಯಾಂಕಿತ, ರಷ್ಯಾದ ಕರೇನ್‌ ಕಚನೋವ್‌ ಕೂಡಾ 2ನೇ ಸುತ್ತಿನ ಗೆಲುವು ಸಾಧಿಸಿ, ಮುಂದಿನ ಸುತ್ತಿಗೇರಿದರು.

ಜಬುರ್‌ಗೆ ಸೋಲು

Tap to resize

Latest Videos

undefined

ಮಹಿಳಾ ಸಿಂಗಲ್ಸ್‌ನಲ್ಲಿ 3 ಬಾರಿ ಗ್ರ್ಯಾನ್‌ಸ್ಲಾಂ ರನ್ನರ್‌-ಅಪ್‌, 6ನೇ ಶ್ರೇಯಾಂಕಿತೆ ಒನ್ಸ್‌ ಜಬುರ್‌ಗೆ ಆಘಾತಕಾರಿ ಸೋಲು ಎದುರಾಯಿತು. ಟ್ಯುನೀಶಿಯಾದ ಜಬುರ್‌ ರಷ್ಯಾದ 16 ವರ್ಷದ ಮಿರ್ರಾ ಆ್ಯಂಡ್ರೀವಾ ವಿರುದ್ಧ 0-6, 2-6 ಸೆಟ್‌ಗಳಲ್ಲಿ ಸೋಲನುಭವಿಸಿದರು. 2018ರ ಚಾಂಪಿಯನ್‌, ಡೆನ್ಮಾರ್ಕ್‌ನ ಕ್ಯಾರೊಲಿನಾ ವೋಜ್ನಿಯಾಕಿ ರಷ್ಯಾದ ಮರಿಯಾ ಟೊಮಫೀವಾ ವಿರುದ್ಧ ಸೋಲನಭವಿಸಿದರು. ಆದರೆ 2ನೇ ಶ್ರೇಯಾಂಕಿತೆ ಅರೈನಾ ಸಬಲೆಂಕಾ, 4ನೇ ಶ್ರೇಯಾಂಕಿತೆ ಕೊಕೊ ಗಾಫ್‌, 9ನೇ ಶ್ರೇಯಾಂಕಿತೆ ಬಾರ್ಬೊರಾ ಕ್ರೆಜಿಕೋವಾ 3ನೇ ಸುತ್ತಿಗೇರಿದರು.

ಎರಡು ಬಾರಿ ಸೊನ್ನೆಗೆ ಔಟ್ ಆಗಿದ್ದೇನೆ, ಅಂಪೈರ್ ಬಳಿ ರೋಹಿತ್ ಶರ್ಮಾ ಫನ್ನಿ ಟಾಕ್ ವೈರಲ್!

ಟೆನಿಸ್: ಪ್ರಿ ಕ್ವಾರ್ಟರ್‌ಗೆ ಭಾರತದ ಮೂವರು ಲಗ್ಗೆ

ಬೆಂಗಳೂರು: ಬೆಂಗಳೂರು ಓಪನ್‌ ಮಹಿಳಾ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಭಾರತ ಮೂವರು ಆಟಗಾರ್ತಿಯರಾದ ವೈದೇಹಿ ಚೌದರಿ, ಅಂಕಿತಾ ರೈನಾ, ಋುತುಜಾ ಭೋಸಲೆ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಅಂಕಿತಾ ಸ್ಲೊವೇಕಿಯಾದ ವಿಕ್ಟೋರಿಯಾ ಮರ್ವಯೊವಾ ವಿರುದ್ಧ 1-6, 7-5, 6-1ರಿಂದ ಗೆದ್ದರೆ, ಋುತುಜಾ ಜಪಾನ್‌ನ ಎರ್ರಿ ಶಿಮಿಜು ವಿರುದ್ಧ 0-6, 7-5, 7-5ರಿಂದ ಜಯ ಸಾಧಿಸಿದರು. ವೈದೇಹಿ ಚೌಧರಿ ಗ್ರೀಕ್‌ನ ಸಪ್ಫೋ ಸಕೆಲ್ಲರಿಡಿ ವಿರುದ್ಧ 6-4, 6-2 ನೇರ ಸೆಟ್‌ಗಳಿಂದ ಗೆದ್ದು ಬೀಗಿದರು.

ಧರ್ಮಸ್ಥಳ, ಸೌತಡ್ಕ, ಕುಕ್ಕೆ ದೇವಾಸ್ಥಾನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಭೇಟಿ!

ರಾಷ್ಟ್ರೀಯ ನೆಟ್‌ಬಾಲ್‌: ರಾಜ್ಯ ವನಿತೆಯರಿಗೆ ಬೆಳ್ಳಿ

ಮೆಹಬೂಬ್‌ ನಗರ್‌(ತೆಲಂಗಾಣ): ರಾಷ್ಟ್ರೀಯ ಹಿರಿಯರ 2ನೇ ಪಾಸ್ಟ್‌5 ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ ನಲ್ಲಿ ಕರ್ನಾಟಕದ ಮಹಿಳೆಯರ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ತೆಲಂಗಾಣದ ಮೆಹಬೂಬ್‌ ನಗರದ ಡಿಎನ್‌ಎಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಹರ್ಯಾಣ ವಿರುದ್ಧ 26-46 ರಿಂದ ಸೋತ ರಾಜ್ಯ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಟೂರ್ನಿಯಲ್ಲಿ ಒಟ್ಟು 27 ತಂಡಗಳು ಪಾಲ್ಗೊಂಡಿದ್ದವು.

click me!