ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂನಲ್ಲಿ ಶುಭಾರಂಭ ಮಾಡಿದ ಜೋಕೋವಿಚ್
ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಆಟಗಾರ
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಕೊವಸಿವಿಚ್ ವಿರುದ್ಧ ಜಯಭೇರಿ
ಪ್ಯಾರಿಸ್(ಮೇ.30): 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ 2023ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಟೂರ್ನಿಯ 2 ಬಾರಿ ಚಾಂಪಿಯನ್, ಸರ್ಬಿಯಾದ ಜೋಕೋ ಸೋಮವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಕೊವಸಿವಿಚ್ ವಿರುದ್ಧ 6-3, 6-2, 7-6(7-1) ಸುಲಭ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಜೋಕೋ ಹಂಗೇರಿಯ ಮಾರ್ಟೊನ್ ಫುಸ್ಕೋವಿಕ್ಸ್ ವಿರುದ್ಧ ಆಡಲಿದ್ದಾರೆ.
ಇದೇ ವೇಳೆ ಮಹಿಳಾ ಸಿಂಗಲ್ಸ್ನಲ್ಲಿ 2018ರ ರನ್ನರ್-ಅಪ್, 2017ರ ವಿಂಬಲ್ಡನ್ ವಿಜೇತೆ ಅಮೆರಿಕಾದ ಸ್ಲೋನ್ ಸ್ಟೀಫನ್ಸ್, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 6-0, 6-4 ಅಂತರದಲ್ಲಿ ಜಯಗಳಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಕೆನಡಾದ ಡೆನಿಸ್ ಶಪೋವಲೊವ್ ಅಮೆರಿಕದ ಬ್ರೆಂಡನ್ ನಕಶಿಮಾ ವಿರುದ್ಧ ಜಯಗಳಿಸಿದರೆ, ವಿಶ್ವ ನಂ.13, ಬ್ರಿಟನ್ನ ಕ್ಯಾಮರೂನ್ ನೋರಿ ಫ್ರಾನ್ಸ್‌ನ ಬೆನೋಟ್ ಪೈರ್ ವಿರುದ್ಧ ಗೆಲುವು ಸಾಧಿಸಿ 2ನೇ ಸುತ್ತು ತಲುಪಿದರು.
⏮️ Comme chaque soir, on t'a préparé le récap' de la journée à Roland-Garros 👀 https://t.co/aIIVjAp2GM pic.twitter.com/nuvkMbPq7u
— Roland-Garros (@rolandgarros)
undefined
ನೀರಜ್‌ಗೆ ಗಾಯ: ಡಚ್ ಅಥ್ಲೆಟಿಕ್ಸ್ ಕೂಟಕ್ಕೆ ಗೈರು
ನವದೆಹಲಿ: ಒಲಿಂಪಿಕ್ ಚಾಂಪಿಯನ್, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮುಂದಿನ ತಿಂಗಳು ನೆದರ್ಲೆಂಡ್್ಸನ ಹೆಂಗೆಲೋದಲ್ಲಿ ನಡೆಯಲಿರುವ ಎಫ್ಬಿಕೆ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ‘ತರಬೇತಿ ವೇಳೆ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದು, ವೈದ್ಯರ ಸೂಚನೆಯಂತೆ ಮುಂಜಾಗೃತಾ ಕ್ರಮವಾಗಿ ಗೇಮ್ಸ್ಗೆ ಗೈರಾಗಲಿದ್ದೇನೆ’ ವಿಶ್ವ ನಂ.1 ಚೋಪ್ರಾ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
Will be back soon! 🙏 🇮🇳 pic.twitter.com/xJE86ULv5X
— Neeraj Chopra (@Neeraj_chopra1)ಅಥ್ಲೆಟಿಕ್ಸ್: ಭಾರತಕ್ಕೆ 2 ಚಿನ್ನ
ವೈನ್ಹೈಮ್(ಜರ್ಮನಿ): ಭಾರತದ ತಾರಾ ಅಥ್ಲೀಟ್ಗಳಾದ ಜ್ಯೋತಿ ಯರ್ರಾಜಿ ಹಾಗೂ ಅಮ್ಲನ್ ಬೊರ್ಗೊಹೈನ್ ಇಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 100 ಮೀ. ಹರ್ಡಲ್ಸ್ನಲ್ಲಿ 23 ವರ್ಷದ ಜ್ಯೋತಿ 12.84 ಸೆಕೆಂಡ್ಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಪಡೆದರು. ಪುರುಷರ 200 ಮೀ. ರೇಸ್ನಲ್ಲಿ ಅಮ್ಲನ್ 20.66 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ತಮ್ಮದಾಗಿಸಿಕೊಂಡರು.
Wrestlers Protest ಪಾರ್ಲಿಮೆಂಟ್ ಮುತ್ತಿಗೆಗೆ ಯತ್ನಿಸಿದ್ದ ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್!
ಕಿರಿಯರ ಹಾಕಿ ವಿಶ್ವಕಪ್ಗೆ ಅರ್ಹತೆ ಪಡೆದ ಭಾರತ
ಸಲಾಲ್ಹ(ಒಮಾನ್): 3 ಬಾರಿ ಚಾಂಪಿಯನ್ ಭಾರತ ತಂಡ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಎಫ್ಐಎಚ್ ಕಿರಿಯರ ವಿಶ್ವಕಪ್‌ಗೂ ಅರ್ಹತೆ ಗಿಟ್ಟಿಸಿಕೊಂಡಿತು.
ಭಾನುವಾರ ರಾತ್ರಿ ನಡೆದ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 17-0 ಗೋಲುಗಳ ಬೃಹತ್ ಗೆಲುವು ಸಾಧಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆದು ವಿಶ್ವಕಪ್ನಲ್ಲೂ ಸ್ಥಾನ ಖಚಿತಪಡಿಸಿಕೊಂಡಿತು. ಭಾನುವಾರದ ಪಂದ್ಯದಲ್ಲಿ ಭಾರತ ಪರ ಅಂಗದ್ಬಿರ್ ಸಿಂಗ್ 4 ಗೋಲು ಬಾರಿಸಿದರು. ಸೆಮಿಫೈನಲ್ ಪಂದ್ಯಗಳು ಮೇ 31ರಂದು ನಡೆಯಲಿವೆ.