ಜಗತ್ತಿಗೆ ನಾನ್ಯಾರು ಎಂದು ಹೇಳುವ ಅಗತ್ಯವಿಲ್ಲ: ವಿರಾಟ್ ಖಡಕ್ ಉತ್ತರ

By Web Desk  |  First Published Dec 26, 2018, 11:44 AM IST

ಸದ್ಯ ನಡೆಯುತ್ತಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೈದಾನದಲ್ಲಿ ಕೊಹ್ಲಿ ವರ್ತಿಸುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಆಸ್ಪ್ರೇಲಿಯಾದ ಮಾಧ್ಯಮಗಳು ಭಾರತೀಯ ನಾಯಕನನ್ನು ಹಿಗ್ಗಾಮುಗ್ಗಾ ಟೀಕಿಸಿವೆ.


ಮೆಲ್ಬರ್ನ್‌(ಡಿ.26): ಜಗತ್ತಿಗೆ ‘ನಾನು ಯಾರು?’ ಎಂಬುದನ್ನು ಬ್ಯಾನರ್‌ ಹಿಡಿದು ಪ್ರಚಾರ ಮಾಡುವ ಅಗತ್ಯವಾಗಲಿ ಅಥವಾ ಎಲ್ಲರೂ ನನ್ನನ್ನು ಇಷ್ಟಪಡಬೇಕು ಎಂಬ ಬಯಕೆ ನನಗೆ ಇಲ್ಲ. ಸಾಧ್ಯವಾದಷ್ಟು ಭಾರತ ತಂಡಕ್ಕೆ ಉತ್ತಮ ಕಾಣಿಕೆ ನೀಡಬೇಕೆಂಬುದಷ್ಟೇ ನನ್ನ ಉದ್ದೇಶ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಗುಣಗಾನ ಮಾಡಿದ ಆಸಿಸ್ ಮಾರಕ ವೇಗಿ..!

ಸದ್ಯ ನಡೆಯುತ್ತಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೈದಾನದಲ್ಲಿ ಕೊಹ್ಲಿ ವರ್ತಿಸುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಆಸ್ಪ್ರೇಲಿಯಾದ ಮಾಧ್ಯಮಗಳು ಭಾರತೀಯ ನಾಯಕನನ್ನು ಹಿಗ್ಗಾಮುಗ್ಗಾ ಟೀಕಿಸಿವೆ. ಆಸ್ಪ್ರೇಲಿಯಾ ಹಾಗೂ ಭಾರತದ ಕೆಲ ಮಾಜಿ ಕ್ರಿಕೆಟಿಗರು ಸಹ ಕೊಹ್ಲಿ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಇವೆಲ್ಲದ್ದಕ್ಕೂ ವಿರಾಟ್‌ ಖಡಕ್‌ ಉತ್ತರ ನೀಡಿದ್ದಾರೆ. 

ಮೆಲ್ಬರ್ನ್ ಟೆಸ್ಟ್: ದ್ರಾವಿಡ್‌ ದಾಖಲೆ ಮುರೀತಾರಾ ವಿರಾಟ್‌?

Tap to resize

Latest Videos

‘ಎಲ್ಲರಿಗೂ ತಮ್ಮದೇ ವೈಯಕ್ತಿಕ ಆಯ್ಕೆಗಳಿರುತ್ತವೆ. ಹೀಗಾಗಿ ಎಲ್ಲರೂ ನನ್ನನ್ನು ಇಷ್ಟಪಡಬೇಕು ಎಂದೇನಿಲ್ಲ. ಅಭಿಮಾನಿಗಳು ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಸದ್ಯ ನಡೆಯುತ್ತಿರುವ ಟೆಸ್ಟ್‌ ಸರಣಿ ನನಗೆ ಮಹತ್ವದ್ದಾಗಿದೆ. ತಂಡವನ್ನು ಗೆಲ್ಲಿಸುವುದಷ್ಟೇ ನನ್ನ ಕೆಲಸ’ ಎಂದು ಹೇಳಿದ್ದಾರೆ.

ಕೊಹ್ಲಿ ಒಬ್ಬ ಜೆಂಟಲ್‌ಮನ್‌! ಗವಾಸ್ಕರ್ ಕಾಲೆಳೆದ ಶಾಸ್ತ್ರಿ

click me!