
ಕರಾಚಿ(ಡಿ.25): ಶೀಘ್ರದಲ್ಲೇ ತಾವು ನಿವೃತ್ತಿಯಾಗುವ ಬಗ್ಗೆ ಹರಡಿರುವ ವದಂತಿಗಳನ್ನು ಅಲ್ಲಗಳೆದಿರುವ ಪಾಕಿಸ್ತಾನದ ಹಿರಿಯ ಆಲ್ರೌಂಡರ್ ಶಾಹೀದ್ ಅಫ್ರಿದಿ, ತಾವು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತಷ್ಟು ಕಾಲ ಮುಂದುವರಿಯುವುದಾಗಿ ಘೋಷಿಸಿದ್ದಾರೆ.
ಇದೇವೇಳೆ ಸದ್ಯಕ್ಕೆ ನಿವೃತ್ತಿಯ ಯೋಚನೆ ಇಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ, ಅಫ್ರಿದಿಯವರು ತಮ್ಮ ಬೀಳ್ಕೊಡುಗೆ ಪಂದ್ಯವೊಂದನ್ನು ಆಯೋಜಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮನವಿ ಸಲ್ಲಿಸಿದ್ದರೆಂದು ಹೇಳಲಾಗಿತ್ತು.
‘‘ನಾನು 20 ವರ್ಷಗಳ ಕಾಲ ಪಾಕಿಸ್ತಾನದ ಪರವಾಗಿ ಕ್ರಿಕೆಟ್ ಆಡಿದ್ದೇನೆ. ನನಗಾಗಿ ಪಂದ್ಯ ಆಯೋಜಿಸಲು ನಾನು ಯಾರನ್ನೂ ಕೇಳುವುದಿಲ್ಲ. ಜನರು ಕೊಟ್ಟ ಅಭಿಮಾನವೇ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ’’ ಎಂದು ಬೂಮ್ ಬೂಮ್ ಖ್ಯಾತಿಯ ಅಫ್ರಿದಿ ಪಿಸಿಬಿಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.