ಐಸಿಸಿ ವಾರ್ಷಿಕ ಟೆಸ್ಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ

By suvarna web deskFirst Published Dec 22, 2016, 6:17 AM IST
Highlights

ಕೊಹ್ಲಿಯ ಪ್ರತಿ ಸ್ಪರ್ಧಿಗಳಾದ ಕೇನ್ ವಿಲಿಯಮ್ಸನ್ ಮತ್ತು ಜೋರೂಟ್ ಅವರನ್ನ ಆಯ್ಕೆ ಮಾಡಿರುವ ಐಸಿಸಿ ವಿರಾಟ್ ಕೊಹ್ಲಿಯವರನ್ನ ತಂಡದಿಂದ ಕೈಬಿಟ್ಟಿದೆ. ಜೋರೂಟ್ ಇರುವ ಿಂಗ್ಲೆಂಡ್ ತಂಡ ಮತ್ತು ವಿಲಿಯಮ್ಸನ್ ಇರುವ ನ್ಯೂಜಿಲೆಂಡ್ ತಂಡಗಳನ್ನ ಬಗ್ಗುಬಡಿದು ಭಾರತ ಸರಣಿ ಜಯಿಸಿದೆ. ಈ ಎರಡೂ ಸರಣಿಗಳಲ್ಲಿ ವಿರಾಟ್ ವಿರಾಟ್ ರೂಪ ಪ್ರದರ್ಶಿಸಿದ್ದಾರೆ. ಆದರೆ, ಐಸಿಸಿ ಗಮನಕ್ಕೆ ಮಾತ್ರ ಿದು ಬಂದಿಲ್ಲ.

ದುಬೈ(ಡಿ,22): ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾದ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ  ಸತತ 18 ಪಂದ್ಯಗಳನ್ನ ಗೆದ್ದು ಇಡೀ ವಿಶ್ವಕ್ಕೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ನಾಯಕತ್ವದಲ್ಲಿಯೇ ಭಾರತ ತಂಡ ವಿಶ್ವದ ನಂಬರ್ ಒನ್ ಸ್ಥಾನ ಅಲಂಕರಿಸಿದೆ. ಆದರೆ, ಐಸಿಸಿಗೆ ಮಾತ್ರ ಕೊಹ್ಲಿ ಸಾಧನೆ ಕಣ್ಣಿಗೆ ಬಿದ್ದಂತಿಲ್ಲ. 2016ರ ವಾರ್ಷಿಕ ಟೆಸ್ಟ್ ತಂಡವನ್ನ ಪ್ರಕಟಿಸಿರುವ ಐಸಿಸಿ ಕೊಹ್ಲಿಯನ್ನ 11ರ ಪಟ್ಟಿಯಿಂದ ಕೈಬಿಟ್ಟಿದೆ.  ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಕೊಹ್ಲಿಯ ಪ್ರತಿ ಸ್ಪರ್ಧಿಗಳಾದ ಕೇನ್ ವಿಲಿಯಮ್ಸನ್ ಮತ್ತು ಜೋರೂಟ್ ಅವರನ್ನ ಆಯ್ಕೆ ಮಾಡಿರುವ ಐಸಿಸಿ ವಿರಾಟ್ ಕೊಹ್ಲಿಯವರನ್ನ ತಂಡದಿಂದ ಕೈಬಿಟ್ಟಿದೆ. ಜೋರೂಟ್ ಇರುವ ಿಂಗ್ಲೆಂಡ್ ತಂಡ ಮತ್ತು ವಿಲಿಯಮ್ಸನ್ ಇರುವ ನ್ಯೂಜಿಲೆಂಡ್ ತಂಡಗಳನ್ನ ಬಗ್ಗುಬಡಿದು ಭಾರತ ಸರಣಿ ಜಯಿಸಿದೆ. ಈ ಎರಡೂ ಸರಣಿಗಳಲ್ಲಿ ವಿರಾಟ್ ವಿರಾಟ್ ರೂಪ ಪ್ರದರ್ಶಿಸಿದ್ದಾರೆ. ಆದರೆ, ಐಸಿಸಿ ಗಮನಕ್ಕೆ ಮಾತ್ರ ಿದು ಬಂದಿಲ್ಲ.

ಐಸಿಸಿ ಪ್ರಕಟಿಸಿರುವ ವಾರ್ಷಿಕ ಟೆಸ್ಟ್ ತಂಡ ಇಂತಿದೆ:

- ಡೇವಿಡ್ ವಾರ್ನರ್

- ಅಲಿಸ್ಟರ್ ಕುಕ್

- ಕೇನ್ ವಿಲಿಯಮ್ ಸನ್

- ಜೋ ರೂಟ್

- ಆಡಮ್ ವೋಗ್ಸ್

- ಜಾನಿ ಬೇರ್ಸ್` ಟೋ

- ಬೆನ್ ಸ್ಟೋಕ್ಸ್

- ರವಿಚಂದ್ರನ್ ಅಶ್ವಿನ್

- ರಂಗನಾ ಹೆರಾತ್

- ಮಿಶೆಲ್ ಸ್ಟಾರ್ಕ್

- ಡೇಲ್ ಸ್ಟೈನ್

- ಸ್ಟೀವ್ ಸ್ಮಿತ್

The International Cricket Council's (ICC) Test team for the year 2016 does not think Virat Kohli did enough to make the cut. Two of his closest competitors, Kane Williamson of New Zealand and Joe Root of England make it to the XI. The only Indian in the line-up is Ravichandran Ashwin.

click me!