
ಲಂಡನ್(ಫೆ.27): ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ ತಮ್ಮ ಸಾರ್ವಕಾಲಿಕ ಕನಸಿನ ತಂಡವನ್ನು ಅನಾವರಣಗೊಳಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕನ್ನಡಿಗ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಇಂಗ್ಲೆಂಡ್ ನಾಯಕನ ಸಾರ್ವಕಾಲಿಕ ಕನಸಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸ್ಪಿನ್ ಮಾಂತ್ರಿಕರಾದ ಶೇನ್ ವಾರ್ನ್, ಮುತ್ತಯ್ಯಾ ಮುರುಳಿಧರನ್ ಅವರು ಮಾರ್ಗನ್ ಕನಸಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಆರಂಭಿಕರನ್ನಾಗಿ ಆಲಿಸ್ಟರ್ ಕುಕ್ ಹಾಗೂ ಜಾಕ್ ಕಾಲಿಸ್ ಅವರನ್ನು ಆಯ್ಕೆ ಮಾಡಿಕೊಂಡರೆ, ಮಧ್ಯಮ ಕ್ರಮಾಂಕದಲ್ಲಿ ಪಾಂಟಿಂಗ್, ಲಾರ, ಎಬಿಡಿ ಮತ್ತು ಸಂಗಾಕ್ಕರ ಸ್ಥಾನ ಪಡೆದಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಆಗಿ ಮಾಹಿ ಕಾರ್ಯ ನಿರ್ವಹಿಸಿದರೆ ಎಂಟನೇ ಕ್ರಮಾಂಕದಲ್ಲಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ತ್ರಿವಳಿ ವೇಗಿಗಳಾಗಿ ಆ್ಯಂಡರ್'ಸನ್, ಡೇಲ್ ಸ್ಟೇನ್, ಮಿಚೆಲ್ ಜಾನ್'ಸನ್ ಆಯ್ಕೆಯಾಗಿದ್ದಾರೆ.
ಮಾರ್ಗನ್ ಕನಸಿನ ತಂಡದ ಕ್ರಮಾಂಕ ಹೀಗಿದೆ:
1. ಆಲಿಸ್ಟರ್ ಕುಕ್
2. ಜಾಕ್ ಕಾಲಿಸ್
3. ರಿಕಿ ಪಾಂಟಿಂಗ್
4. ಬ್ರಿಯಾನ್ ಲಾರ
5. ಎಬಿ ಡಿವಿಲಿಯರ್ಸ್
6. ಕುಮಾರ್ ಸಂಗಕ್ಕರ
7. ಮಹೇಂದ್ರ ಸಿಂಗ್ ಧೋನಿ
8. ಅನಿಲ್ ಕುಂಬ್ಳೆ
9. ಜೇಮ್ಸ್ ಆ್ಯಂಡರ್'ಸನ್
10. ಡೇಲ್ ಸ್ಟೇನ್
11. ಮಿಚೆಲ್ ಜಾನ್'ಸನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.