ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸತತ 2ನೇ ಜಯ

By Suvarna Web DeskFirst Published Feb 26, 2017, 1:43 PM IST
Highlights

ನಿನ್ನೆ ಧೋನಿ ನೇತೃತ್ವದ ಜಾರ್ಖಂಡ್ ಪಡೆ ವಿರುದ್ಧ ಜಯ ಸಾಧಿಸಿದ್ದ ಕರ್ನಾಟಕಕ್ಕೆ ಇದು ಸತತ 2ನೇ ಗೆಲುವಾಗಿದೆ. ಡಿ ಗುಂಪಿನಲ್ಲಿ ಎಂಟು ಅಂಕಗಳೊಂದಿಗೆ ಹೈದರಾಬಾದ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ.

ಕೋಲ್ಕತಾ(ಫೆ. 26): ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಇಲ್ಲಿಯ ಜಾದವಪುರ್ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಡಿ ಪಂದ್ಯದಲ್ಲಿ ಸರ್ವಿಸಸ್ ತಂಡವನ್ನು ಕರ್ನಾಟಕ 4 ವಿಕೆಟ್'ಗಳಿಂದ ಪರಾಭವಗೊಳಿಸಿದೆ. ಗೆಲ್ಲಲು ಸರ್ವಿಸಸ್ ಒಡ್ಡಿದ 232 ರನ್ ಗುರಿಯನ್ನು ಕರ್ನಾಟಕ ಇನ್ನೂ 6 ಓವರ್ ಬಾಕಿ ಇರುವಂತೆಯೇ ಮೆಟ್ಟಿ ನಿಂತಿತು. ಪವನ್ ದೇಶಪಾಂಡೆ, ರಾಬಿನ್ ಉತ್ತಪ್ಪ, ಅನಿರುದ್ಧ್ ಜೋಷಿ ಮತ್ತು ಜಗದೀಶ್ ಸುಚಿತ್ ಅವರು ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಿನ್ನೆ ಧೋನಿ ನೇತೃತ್ವದ ಜಾರ್ಖಂಡ್ ಪಡೆ ವಿರುದ್ಧ ಜಯ ಸಾಧಿಸಿದ್ದ ಕರ್ನಾಟಕಕ್ಕೆ ಇದು ಸತತ 2ನೇ ಗೆಲುವಾಗಿದೆ. ಡಿ ಗುಂಪಿನಲ್ಲಿ ಎಂಟು ಅಂಕಗಳೊಂದಿಗೆ ಹೈದರಾಬಾದ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದೆ. ರಾಜ್ಯದ ತಂಡವು ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದ್ದು, ಹೈದರಾಬಾದ್, ಜಮ್ಮು-ಕಾಶ್ಮೀರ, ಛತ್ತೀಸ್'ಗಡ ಮತ್ತು ಸೌರಾಷ್ಟ್ರ ತಂಡಗಳ ಸವಾಲನ್ನು ಎದುರಿಸಲಿದೆ.

ಸ್ಕೋರು ವಿವರ:

ಸರ್ವಿಸಸ್ 50 ಓವರ್ 231/7
(ದಿವೇಶ್ ಪಠಾಣಿಯಾ 49, ಸೂರಜ್ ಯಾದವ್ ಅಜೇಯ 44, ಶಮ್'ಶೇರ್ ಯಾದವ್ 37, ಅಭಿಜಿತ್ ಸಾಳ್ವಿ 30 ರನ್ - ಪ್ರಸಿದ್ಧ್ ಕೃಷ್ಣ 39/3, ಅನಿರುದ್ಧ್ ಜೋಷಿ 32/2)

ಕರ್ನಾಟಕ 44.1 ಓವರ್ 232/6
(ಪವನ್ ದೇಶಪಾಂಡೆ 73, ರಾಬಿನ್ ಉತ್ತಪ್ಪ 51, ಅನಿರುದ್ಧ್ ಜೋಷಿ ಅಜೇಯ 50, ಜಗದೀಶ್ ಸುಚಿತ್ ಅಜೇಯ 24 ರನ್ - ಸೂರಜ್ ಯಾದವ್ 37/2)

ಫೋಟೋ: ರಾಬಿನ್ ಉತ್ತಪ್ಪ ಅವರ ಫೈಲ್ ಫೋಟೋ

click me!