ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯರಾಗಿ ಮರು ಆಯ್ಕೆ

By Naveen Kodase  |  First Published Jul 25, 2024, 1:27 PM IST

ನೀತಾ ಅವರು 2016ರಲ್ಲಿ ಮೊದಲ ಬಾರಿ ರಿಯೋ ಒಲಿಂಪಿಕ್ಸ್‌ ವೇಳೆ ಸಮಿತಿಗೆ ಆಯ್ಕೆಯಾಗಿದ್ದರು. ‘ಐಒಎ ಸದಸ್ಯೆಯಾಗಿ ಆಯ್ಕೆಯಾಗಿದ್ದು ವೈಯಕ್ತಿಕ ಮೈಲುಗಲ್ಲು ಮಾತ್ರವಲ್ಲ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವ ಸಂಕೇತ’ ಎಂದು ನೀತಾ ಪ್ರತಿಕ್ರಿಯಿಸಿದ್ದಾರೆ.


ಪ್ಯಾರಿಸ್‌: ರಿಲಯನ್ಸ್‌ ಫೌಂಡೇಶನ್‌ ಸಂಸ್ಥಾಪಕಿ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ)ಯ ಸದಸ್ಯೆಯಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಒಲಿಂಪಿಕ್ಸ್‌ಗೂ ಮುನ್ನ ಪ್ಯಾರಿಸ್‌ನಲ್ಲಿ ನಡೆದ ಐಒಸಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಶೇ.100ರಷ್ಟು ಮತಗಳನ್ನು ಪಡೆಯುವ ಮೂಲಕ ಮರು ಆಯ್ಕೆ ಆಗಿದ್ದಾರೆ. 

ನೀತಾ ಅವರು 2016ರಲ್ಲಿ ಮೊದಲ ಬಾರಿ ರಿಯೋ ಒಲಿಂಪಿಕ್ಸ್‌ ವೇಳೆ ಸಮಿತಿಗೆ ಆಯ್ಕೆಯಾಗಿದ್ದರು. ‘ಐಒಎ ಸದಸ್ಯೆಯಾಗಿ ಆಯ್ಕೆಯಾಗಿದ್ದು ವೈಯಕ್ತಿಕ ಮೈಲುಗಲ್ಲು ಮಾತ್ರವಲ್ಲ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವ ಸಂಕೇತ’ ಎಂದು ನೀತಾ ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

undefined

ಪ್ಯಾರಿಸ್‌ನಲ್ಲಿ ನಡಾಲ್‌ ಕ್ರೇಜ್‌: ಸೆಲ್ಫಿ ಕ್ಲಿಕ್ಕಿಸಿದ ಭಾರತೀಯ ಅಥ್ಲೀಟ್ಸ್‌

ಪ್ಯಾರಿಸ್‌: ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ ಈಗ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ವಿಶ್ವದ ವಿವಿಧ ಭಾಗಗಳಿಂದ ಕ್ರೀಡಾ ಗ್ರಾಮಕ್ಕೆ ಆಗಮಿಸುತ್ತಿರುವ ಕ್ರೀಡಾಪಟುಗಳು ಸ್ಪೇನ್‌ನ ಸ್ಟಾರ್‌ ಟೆನಿಸಿಗನ ಜೊತೆ ಫೋಟೋಗಳನ್ನು ಕ್ಲಿಕ್ಕಿಸಲು ಮುಗಿಬೀಳುತ್ತಿದ್ದಾರೆ. 

ಕಿವೀಸ್ ಮಹಿಳಾ ಫುಟ್ಬಾಲಿಗರ ಅಭ್ಯಾಸಕ್ಕೆ ಕೆನಡಾದ ಡ್ರೋನ್..! ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ವಿವಾದ

ಭಾರತದ ಕೆಲ ಅಥ್ಲೀಟ್‌ಗಳು ಕೂಡಾ ನಡಾಲ್‌ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬ್ಯಾಡ್ಮಿಂಟನ್‌ ತಾರೆ ಸಾತ್ವಿಕ್‌ ಸಾಯಿರಾಜ್‌, ಟೇಬಲ್‌ ಟೆನಿಸ್‌ ಪಟುಗಳಾದ ಶರತ್‌ ಕಮಾಲ್‌ ಹಾಗೂ ಜಿ.ಸತ್ಯನ್ ನಡಾಲ್‌ ಜೊತೆ ಫೋಟೋ ತೆಗೆಸಿದ್ದಾರೆ. ಇದೇ ವೇಳೆ ಯುವ ಟೆನಿಸ್‌ ತಾರೆ ಕಾರ್ಲೊಸ್‌ ಆಲ್ಕರಜ್‌ ಜೊತೆಗೆ ಭಾರತದ ಟಿಟಿ ತಾರೆ ಐಹಿಕಾ ಮುಖರ್ಜಿ ಕೂಡಾ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

25 ವರ್ಷದ ಮಹಿಳೆ ಮೇಲೆ ಗ್ಯಾಂಪ್ ರೇಪ್‌..! ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ

ವಿಶ್ವ ನಂಬರ್‌ 1 ಟೆನಿಸಿಗ ಸಿನ್ನರ್‌ ಒಲಿಂಪಿಕ್ಸ್‌ಗೆ ಇಲ್ಲ

ಪ್ಯಾರಿಸ್‌: ಹಾಲಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಚಾಂಪಿಯನ್‌, ವಿಶ್ವ ನಂಬರ್‌ 1 ಟೆನಿಸಿಗ ಯಾನಿಕ್ ಸಿನ್ನರ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ. ಇಟಲಿಯ 22 ವರ್ಷ ಸಿನ್ನರ್‌ ಬಾಯಿಯ ಗಾಯಕ್ಕೆ ತುತ್ತಾಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ ಆಡದಿರಲು ನಿರ್ಧರಿಸಿದ್ದಾರೆ.
 

click me!