25 ವರ್ಷದ ಮಹಿಳೆ ಮೇಲೆ ಗ್ಯಾಂಪ್ ರೇಪ್‌..! ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ

25 ವರ್ಷದ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಈ ಅವಘಡ ಸಂಭವಿಸಿದ್ದು, ಸಹಾಯಕ್ಕಾಗಿ ಹತ್ತಿರದಲ್ಲೇ ಇದ್ದ ಕೆಬಾಬ್ ಶಾಪ್‌ಗೆ ಬಂದು ರಕ್ಷಣೆ ಪಡೆದಿದ್ದಾರೆ. ಆಗ ಆಕೆಯ ಉಡುಪು ಹರಿದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Australian Woman gang raped in Paris CCTV shows her asking for help at kebab shop kvn

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಆಸ್ಟ್ರೇಲಿಯಾ ಮೂಲದ ಮಹಿಳೆಯ ಮೇಲೆ ಐವರು ಬರ್ಬರವಾಗಿ ಗ್ಯಾಂಗ್‌ ರೇಪ್ ಮಾಡಿರುವ ಆತಂಕಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜುಲೈ 20ರ ಮಧ್ಯರಾತ್ರಿ ಈ ದುರ್ಘಟನೆ ನಡೆದಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ.

25 ವರ್ಷದ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಈ ಅವಘಡ ಸಂಭವಿಸಿದ್ದು, ಸಹಾಯಕ್ಕಾಗಿ ಹತ್ತಿರದಲ್ಲೇ ಇದ್ದ ಕೆಬಾಬ್ ಶಾಪ್‌ಗೆ ಬಂದು ರಕ್ಷಣೆ ಪಡೆದಿದ್ದಾರೆ. ಆಗ ಆಕೆಯ ಉಡುಪು ಹರಿದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಭಾರತದ ಮೇಲೆ ಕಿಡಿಕಾರುವ ಪಾಕ್ ಆಟಗಾರನ ಪ್ರೀತಿ ಬಲೆಗೆ ಬಿದ್ದ ನಮ್ಮ ದೇಶದ ಪ್ಲೈಟ್ ಇಂಜಿನಿಯರ್..!

ಸಂತಸ್ತ ಮಹಿಳೆಯು ಶುಕ್ರವಾರ ಅಂದರೆ ಜುಲೈ 19ರ ರಾತ್ರಿ ಮೌಲಿನ್ ರೋಗ್ ಕ್ಯಾಬರ್ಟ್‌ನ ಬಾರ್ಸ್ & ಕ್ಲಬ್ಸ್‌ನಲ್ಲಿ ಮದ್ಯಪಾನ ಸೇವಿಸಿ, ಹೊರ ಬರುವ ಸಂದರ್ಭದಲ್ಲಿ ಆಕೆಯನ್ನು ಅನಿರ್ದಿಷ್ಟ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾಗಿ 25 ವರ್ಷದ ಮಹಿಳೆ ಆರೋಪಿಸಿದ್ದಾರೆ.

ಇನ್ನು ಫ್ರೆಂಚ್ ಪೊಲೀಸರ ಬಳಿ ದೂರು ನೀಡುವ ಸಂದರ್ಭದಲ್ಲಿ ಆ ಮಹಿಳೆ, ನೋಡುವುದಕ್ಕೆ ಆಫ್ರಿಕಾ ಮೂಲದವರಂತೆ ಇದ್ದು, ಬೆಳಗಿನ ಜಾವ 5 ಗಂಟೆಯವರೆಗೂ ಗ್ಯಾಂಗ್ ರೇಪ್ ನಡೆಸಿದ್ದಾರೆ. ಇದಾದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು  ಕೆಬಾಬ್ ಶಾಪ್‌ನಲ್ಲಿ ಆಶ್ರಯ ಪಡೆದಿದ್ದಾಗಿ ತಿಳಿಸಿದ್ದಾರೆ ಎಂದು ಡೇಲಿ ಮೇಲ್ ವರದಿ ಮಾಡಿದೆ.

ಸಿಸಿಟಿವಿ ವಿಡಿಯೋದಲ್ಲಿ ಆ ಮಹಿಳೆಯು ಓಡೋಡಿ ಬರುವುದು, ಭಯಭೀತರಾಗಿರುವುದು, ಸಹಾಯಕ್ಕಾಗಿ ಅಲ್ಲಿರುವ ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಳ್ಳುವ ದೃಶ್ಯಾವಳಿಗಳು ಸೆರೆಯಾಗಿವೆ. ಇದೇ ವೇಳೆ ಓರ್ವ ಗಂಡಸು ಅಲ್ಲಿಗೆ ಬಂದಾಗ, ಆ ಮಹಿಳೆಯು ನನ್ನನ್ನು ಹಿಂಸೆ ಮಾಡಿದ ವ್ಯಕ್ತಿಗಳಲ್ಲಿ ಈತನೂ ಒಬ್ಬ ಎಂದು ಕೈ ಸನ್ನೆ ಮೂಲಕ ತೋರಿಸುವುದು ಕೂಡಾ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಆ ಶಂಕಿತ ವ್ಯಕ್ತಿಯು ಆಹಾರಕ್ಕಾಗಿ ಆರ್ಡರ್ ಮಾಡುವ ಮೊದಲು ಆ ಮಹಿಳೆಯ ಬೆನ್ನನ್ನು ತಟ್ಟುತ್ತಾನೆ. ಆಗ ಆತನನ್ನು ಆಕೆ ಗುರುತಿಸಿ, ಆರೋಪಿಸಿದಾಗ, ಶಾಪ್‌ನ ಸಿಬ್ಬಂದಿಯೊಬ್ಬರು ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಈ ದೃಶ್ಯಾವಳಿಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸೆರೆಯಾಗಿದೆ.

ಇದಾಗುತ್ತಿದ್ದಂತೆಯೇ ಶಾಪ್ ಓನರ್ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾರೆ. ಆಗ ಫ್ರೆಂಚ್ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ಸಂತೈಸುತ್ತಾರೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನ ಇಬ್ಬರು ಪೊಲೀಸ್ ಸಿಬ್ಬಂದಿ ಆಕೆಯ ಜತೆ ಸಮಾಲೋಚನೆ ಕೂಡಾ ನಡೆಸುತ್ತಾರೆ.

ಗ್ಯಾಂಗ್‌ ರೇಪ್‌ನಿಂದ ಕಂಗಾಲಾಗಿ ಹೋಗಿದ್ದ ಆ ಮಹಿಳೆಯು ಪೊಲೀಸರು ಪ್ರಶ್ನಿಸಿದರೂ, "ದಿಗ್ಭ್ರಮೆಗೊಂಡು ಒಂದೇ ಒಂದು ಫ್ರೆಂಚ್ ಪದವನ್ನು ಮಾತನಾಡಲು ಸಾಧ್ಯವಾಗಲಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಈ ದುರ್ಘಟನೆ ಎಲ್ಲಿ ನಡೆಯಿತು ಎಂದು ಹೇಳಲು ಆಕೆಗೆ ಸಾಧ್ಯವಾಗಲಿಲ್ಲ ಎಂದು ಡೇಲಿ ಮೇಲ್ ವರದಿ ಮಾಡಿದೆ.

ಈಗಾಗಲೇ ಫ್ರೆಂಚ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ. ಸದ್ಯ ಆ ಸಂತ್ರಸ್ತ ಮಹಿಳೆಯು ಪ್ಯಾರಿಸ್‌ನಲ್ಲಿಯೇ ಉಳಿದುಕೊಂಡಿದ್ದು, ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು ಈ ಆಘಾತಕಾರಿ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆಸ್ಟ್ರೇಲಿಯಾ ಒಲಿಂಪಿಕ್ ಟೀಮ್ ಮುಖ್ಯಸ್ಥ ಅನ್ನಾ ಮೇರೆಸ್, ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ತಮ್ಮ ದೇಶದ ಅಥ್ಲೀಟ್‌ಗಳು ಮತ್ತಷ್ಟು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಇದೇ ಜುಲೈ 26ರಂದು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.
 

Latest Videos
Follow Us:
Download App:
  • android
  • ios