ಮಾಜಿ ವಿಶ್ವ ಎಫ್‌1 ಚಾಂಪಿಯನ್‌ ನಿಕ್ಕಿ ನಿಧನ

ಫಾರ್ಮುಲಾ 1 ವಿಶ್ವ ಚಾಂಪಿಯನ್‌ ಆಸ್ಟ್ರಿಯಾದ ನಿಕ್ಕಿ ಲಾಡಾ ಮಂಗಳವಾರ ಸ್ವಿಜರ್‌ಲೆಂಡ್‌ನ ಝ್ಯರಿಚ್‌ನಲ್ಲಿ ನಿಧನರಾಗಿದ್ದಾರೆ.


ಲಂಡನ್‌(ಮೇ.22): 3 ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್‌ ಆಸ್ಟ್ರಿಯಾದ ನಿಕ್ಕಿ ಲಾಡಾ ಮಂಗಳವಾರ ಸ್ವಿಜರ್‌ಲೆಂಡ್‌ನ ಝ್ಯರಿಚ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. 

ಹಲವು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 8 ತಿಂಗಳ ಹಿಂದಷ್ಟೇ ಅವರು ಶ್ವಾಸಕೋಶದ ಕಸಿ ಮಾಡಿಸಿಕೊಂಡಿದ್ದರು. 1975, 1977 ಹಾಗೂ 1984ರಲ್ಲಿ ಅವರು ವಿಶ್ವ ಚಾಂಪಿಯನ್‌ ಆಗಿದ್ದರು. ಎಫ್‌ 1 ಇತಿಹಾಸದಲ್ಲಿ ಫೆರಾರಿ ಹಾಗೂ ಮೆಕ್‌ಲಾರೆನ್‌ ತಂಡಗಳೊಂದಿಗೆ ವಿಶ್ವ ಚಾಂಪಿಯನ್‌ ಆದ ಏಕೈಕ ಚಾಲಕ ಎನ್ನುವ ದಾಖಲೆ ನಿಕ್ಕಿ ಹೆಸರಿನಲ್ಲಿದೆ.

Latest Videos

1976ರಲ್ಲಿ ಜರ್ಮನ್ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್’ನಲ್ಲಿ ಭಾಗವಹಿಸಿದ್ದ ನಿಕ್ಕಿ ಕಾರು ಭೀಕರವಾಗಿ ಹೊತ್ತಿ ಉರಿದಿತ್ತು. ಈ ಸಂದರ್ಭದಲ್ಲಿ ನಿಕ್ಕಿ ತೀವ್ರವಾದ ಗಾಯಕ್ಕೆ ತುತ್ತಾಗಿದ್ದರು. ಇದರ ಹೊರತಾಗಿಯೂ ರೇಸ್’ಗೆ ಗುಡ್’ಬೈ ಹೇಳದೇ ಕಮ್’ಬ್ಯಾಕ್ ಮಾಡಿದ್ದನ್ನು ಹಲವು ಅವರ ಅಭಿಮಾನಿಗಳು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. 

click me!