ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಧೋನಿ!

By Web Desk  |  First Published May 21, 2019, 9:14 PM IST

ಟೀಂ ಇಂಡಿಯಾ ಮಾತ್ರವಲ್ಲಿ, ವಿಶ್ವಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿ ಅತ್ಯಂತ ಫಿಟ್ ಕ್ರಿಕೆಟಿಗ. ಧೋನಿ ಫಿಟ್ನೆಸ್ ಎಲ್ಲರಿಗೂ ಮಾದರಿ. ಇದೀಗ ಸ್ವತಃ ಧೋನಿ ತಮ್ಮ ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ್ದಾರೆ. 
 


ಮುಂಬೈ(ಮೇ.21): ವಿಶ್ವಕ್ರಿಕೆಟ್‌ನಲ್ಲಿ ಫಿಟ್ನೆಸ್ಟ್ ಕ್ರಿಕೆಟಿಗರಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಧೋನಿ ವಯಸ್ಸು 37 ದಾಟಿದರೂ ಫಿಟ್ನೆಸ್ ವಿಚಾರದಲ್ಲಿ ಯುವಕರು ಕೂಡ ನಾಚುತ್ತಾರೆ. ವಿಕೆಟ್ ನಡುವಿನ ಓಟದಲ್ಲಿ ಧೋನಿಯನ್ನು ಹಿಂದಿಕ್ಕಿಲು ಯಾರಿಗೂ ಸಾಧ್ಯವಿಲ್ಲ. ಇದೀಗ ಧೋನಿಯ  ಫಿಟ್ನೆಸ್ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಇಂಗ್ಲೆಂಡ್ ಪ್ರಯಾಣಕ್ಕೂ ಮುನ್ನ ಕೊಹ್ಲಿ ಸುದ್ದಿಗೋಷ್ಠಿ!

Tap to resize

Latest Videos

ಧೋನಿ ಸದಾ ಫಿಟ್ ಆಗಿರಲು ಇಬ್ಬರು ಕಾರಣ ಎಂದಿದ್ದಾರೆ. ಟೀಂ ಇಂಡಿಯಾ ಟ್ರೈನರ್ ರಾಮ್ಜಿ ಶ್ರೀನಿವಾಸನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರೈನರ್ ಗ್ರೆಗೊರಿ ಅಲನ್ ಕಿಂಗ್ ತಮ್ಮ ಫಿಟ್ನೆಸ್ ರಸಹ್ಯದ ಹಿಂದಿರುವ ಶಕ್ತಿ ಎಂದು ಧೋನಿ ಹೇಳಿದ್ದಾರೆ. ಇವರ ಮಾರ್ಗದರ್ಶನದಿಂದಲೇ ತಾನು ಫಿಟ್ ಆಗಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡ ಪ್ರಕಟಿಸಿದ ಸ್ಟೀವ್ ವ್ಹಾ! 

ಸದ್ಯ ಟೀಂ ಇಂಡಿಯಾದ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ. ಕಾರಣ ಎಲ್ಲರೂ ಯೋ ಯೋ ಟೆಸ್ಟ್ ಪಾಸ್ ಮಾಡಲೇಬೇಕು. ವಿರಾಟ್ ಕೊಹ್ಲಿ ಹಾಗೂ  ಮಾಜಿ ಕೋಚ್ ಅನಿಲ್ ಕುಂಬ್ಳೆ ತಂಡಕ್ಕೆ ಆಯ್ಕೆಯಾಗೋ ಕ್ರಿಕೆಟಿಗರಿಗೆ ಯೋ ಯೋ ಟೆಸ್ಟ್ ಕಡ್ಡಾಯ ಮಾಡಿದ್ದರು. 

click me!