
RCB ಯ ಇನ್'ಸೈಡರ್, ತಂಡದ ಸದಸ್ಯರ ಕಾಲೆಳೆಯುತ್ತಾ ಇಡೀ ಸೀಜನ್'ನಲ್ಲಿ ಅಭಿಮಾನಿಗಳನ್ನು ರಂಜಿಸುವ ಮಿ. ನಾಗ್ಸ್ ಇದೀಗ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇವರ ಮಾತುಗಳು ಕೇಳಿದವರಿಗೆ ಶಾಕ್ ಣನೀಡಿದಂತಿವೆ. ಅಷ್ಟಕ್ಕೂ ನಾಗ್ಸ್ ಜಹೇಳಿದ್ದೇನು ಅಂತೀರಾ? ಇಲ್ಲಿದೆ ಉತ್ತರ
ವಾಸ್ತವವಾಗಿ RCBಯ ಆಟಗಾರರ ಜಾಹೀರಾತಿನ ಶೂಟ್ ಒಂದು ನಡೆಯುತ್ತಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಮಿ. ನಾಗ್ಸ್ ಅಲ್ಲಿ ನಿಂತಿದ್ದ ಫೋಟೋಗ್ರಾಫರ್ ಬಳಿ 'ವಿರಾಟ್ ಇಲ್ಲವಲ್ಲ?' ಎಂದು ಕೇಳುತ್ತಾರೆ ಇದಕ್ಕೆ ಪ್ರತ್ಯುತ್ತರ ಎಂಬಂತೆ ಅವರು ಇಲ್ಲ ಎನ್ನುತ್ತಾರೆ. ಇಷ್ಟು ಹೇಳಿದ್ದೇ ತಡ 'ನಾನೇ ಹೊಸ ವಿರಾಟ್, ಪ್ಲೀಸ್ ಬನ್ನಿ.. ನಿಮ್ಮ ಜೀವನದ ಬಹುದೊಡ್ಡ ದಿನದಂದು ನಿಮಗೆ ಶುಭಾಷಯ ಕೋರುತ್ತೇನೆ. ಯಾಕೆಂದರೆ ಸೂಪರ್ ಸ್ಟಾರ್ ಇಂದು ಶೂಟ್'ಗಾಗಿ ಬಂದಿದ್ದಾರೆ ಎಂದು ತನ್ನನ್ನು ತಾನು ತೋರಿಸುತ್ತಾರೆ'. ಇದನ್ನು ಕೇಳಿದ ಫೋಟೋಗ್ರಾಫರ್ ತಬಬಿಬ್ಬಾಗಿದ್ದಾರೆ. ಈತ ಯಾರು? ಏನು ಮಾತನಾಡುತ್ತಿದ್ದಾನೆ ಎಂದು ಅರ್ಥವಾಗದೆ ದಂಗಾಗಿದ್ದಾರೆ.
ಇಲ್ಲಿ ಮಿ. ನಾಗ್ಸ್ ನಾನೇಹೊಸ ವಿರಾಟ್ ಎಂದು ತನ್ನನ್ನು ಪರಿಚಯಿಸಿದಾಗ ಫೋಟೋಗ್ರಾಫರ್ ಮುಖದಲ್ಲಿದ್ದ ಆ ಭಾವನೆ ವೀಕ್ಷಕರನ್ನು ನಗೆಗಡಲಲ್ಲಿ ತೀಲಿಸುವುದರಲ್ಲಿ ಅನುಮಾನವಿಲ್ಲ.
ಇದಾದ ಬಳಿಕ RCB ಮನೆಯಲ್ಲಿ ಶ್ರೀನಾಥ್ ಅರವಿಂದ್'ರವರ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿ ಕೇಕ್ ಕೂಡಾ ಕಟ್ ಮಾಡಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.