ಲಂಕಾ ಪ್ರವಾಸಕ್ಕೂ ಮುನ್ನ ಹೊಸ ಕೋಚ್..?

By Suvarna Web DeskFirst Published Jun 22, 2017, 5:19 PM IST
Highlights

‘ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಮನಸ್ತಾಪವನ್ನು ಸರಿಪಡಿಸಲು ಬಿಸಿಸಿಐ ಎಲ್ಲಾ ಪ್ರಯತ್ನಗಳನ್ನು ನಡೆಸಿತು. ಆದರೆ ಪ್ರಯತ್ನಗಳೆಲ್ಲಾ ವಿಫಲವಾದವು' ಎಂದು ಶುಕ್ಲಾ ಹೇಳಿದ್ದಾರೆ.

ಮುಂಬೈ (ಜೂ.22) ಮುಂದಿನ ತಿಂಗಳು ಕೊನೆ ವಾರದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ತೆರಳಲಿದ್ದು, ಅದಕ್ಕೂ ಮುನ್ನ ನೂತನ ಕೋಚ್‌ ನೇಮಕ ಮಾಡಲಾಗುವುದು ಎಂದು ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ.

‘ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಮನಸ್ತಾಪವನ್ನು ಸರಿಪಡಿಸಲು ಬಿಸಿಸಿಐ ಎಲ್ಲಾ ಪ್ರಯತ್ನಗಳನ್ನು ನಡೆಸಿತು. ಆದರೆ ಪ್ರಯತ್ನಗಳೆಲ್ಲಾ ವಿಫಲವಾದವು' ಎಂದು ಶುಕ್ಲಾ ಹೇಳಿದ್ದಾರೆ. ಅಲ್ಲದೇ ಕುಂಬ್ಳೆ ಕೆಳಗಿಳಿಯಲು ಕೊಹ್ಲಿ ಒಬ್ಬರೇ ಕಾರಣ ಎನ್ನುವುದನ್ನು ಒಪ್ಪಲು ತಾವು ಸಿದ್ಧರಿಲ್ಲ ಎಂದು ಶುಕ್ಲಾ ಹೇಳಿದ್ದಾರೆ. 

ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾವು ಮೂರು ಟೆಸ್ಟ್, ಐದು ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನು ಆಡಲಿದೆ.

ಶಾಸ್ತ್ರಿಗೆ ಪಟ್ಟ..?

ಒಂದುವೇಳೆ ಬಿಸಿಸಿಐ ಸಲಹಾ ಸಮಿತಿ ಒಪ್ಪಿದರೆ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನಕ್ಕೆ ಪರಿಗಣಿಸಲು ಸಿದ್ಧ ಎಂದು ಬಿಸಿಸಿಐ ಆಡಳಿತ ಸಮಿತಿ ಹೇಳಿದೆ.

ರವಿಶಾಸ್ತ್ರಿ ಹಾಗೂ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ ರವಿಶಾಸ್ತ್ರಿ ಕೋಚ್ ಹುದ್ದೆಗೆ ಈ ಬಾರಿ ಅರ್ಜಿಸಲ್ಲಿಸಿಲ್ಲ.

click me!