Spain Cricket Team: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ: ಆಸ್ಟ್ರೇಲಿಯಾದ ಆಲ್-ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಸ್ಪೇನ್!

Published : Aug 16, 2026, 12:24 PM IST
spain cricket team

ಸಾರಾಂಶ

ಫುಟ್‌ಬಾಲ್‌ಗೆ ಹೆಸರುವಾಸಿಯಾದ ಸ್ಪೇನ್, ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದೆ. ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಫಿನ್ಲೆಂಡ್ ತಂಡವನ್ನು ಸೋಲಿಸುವ ಮೂಲಕ, ಸತತ 21ನೇ ಗೆಲುವು ದಾಖಲಿಸಿ ಆಸ್ಟ್ರೇಲಿಯಾದ 23 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದಿದೆ.

ಫಿಫಾ ವಿಶ್ವಕಪ್ 2026 ಗೆಲುವು ಪಡೆದ ನಂತರ ಸ್ಪೇನ್ ಕ್ರಿಕೆಟ್‌ನಲ್ಲೂ ಇತಿಹಾಸ ನಿರ್ಮಿಸಿದೆ. ಫುಟ್‌ಬಾಲ್ ಜಗತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಈ ದೇಶ, ಈಗ ಕ್ರಿಕೆಟ್‌ನಲ್ಲೂ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಸ್ಪೇನ್ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಲ್ ಟೈಮ್ ರೆಕಾರ್ಡ್ ನಿರ್ಮಿಸಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಸೇರಿದ್ದ 23 ವರ್ಷಗಳ ಹಿಮದಿನ ದಾಖಲೆಯನ್ನು ಬ್ರೇಕ್ ಮಾಡಿದೆ.

ಆಸೀಸ್ ದಾಖಲೆ ಉಡೀಸ್!

ಸ್ಪೇನ್ ತಂಡ ಸತತವಾಗಿ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡ 23 ವರ್ಷಗಳ ಹಿಂದಿನ ದಾಖಲೆಯನ್ನು ಸ್ಪೇನ್ ಬ್ರೇಕ್ ಮಾಡಿ ಇತಿಹಾಸ ನಿರ್ಮಿಸಿದೆ. ಗುರುವಾರ 2026 ಟಿ20 ವಿಶ್ವಕಪ್ ಯುರೋಪ್ ಸಬ್ ರೀಜನಲ್ ಕಾಲ್ವಿಫೈಯರ್ ಸಿನಲ್ಲಿ ಸ್ಪೇನ್, ಫಿನ್ಲೆಂಡ್ ತಂಡವನ್ನು 08 ವಿಕೆಟ್‌ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಫಿನ್ಲೆಂಡ್ 131 ರನ್ ಗಳಿಸಿದರೆ, ಸ್ಪೇನ್ ಕೇವಲ ಎರಡು ವಿಕೆಟ್ ನಷ್ಟಕ್ಕೆ ಈ ಗುರಿಯನ್ನು ಮುಟ್ಟಿತ್ತು.

ಫಿನ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಟಿ20 ಅಂತರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಸ್ಪೇನ್ ಸತತವಾಗಿ 21ನೇ ಗೆಲುವು ಪಡೆದುಕೊಂಡಿತು. 2026ರಲ್ಲಿ ಸ್ಪೇನ್ ಇದೇ ಮೊದಲ ಟಿ20 ಪಂದ್ಯವನ್ನು ಆಡಿದೆ. 2025ರಲ್ಲಿ ಸತತವಾಗಿ 20 ಗೆಲುವುಗಳನ್ನು ಪಡೆದುಕೊಂಡಿದ್ದ ಸ್ಪೇನ್, ಹೊಸ ವರ್ಷದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಪಡೆದು ದಾಖಲೆ ನಿರ್ಮಿಸಿದೆ. ಸ್ಪೇನ್ ತಮ್ಮ ಈ ವಿಜಯದ ಓಟವನ್ನು 2023ರ ಫೆಬ್ರವರಿಯಲ್ಲಿ ಐಲ್ ಆಫ್ ಮ್ಯಾನ್ ವಿರುದ್ಧ ಆರಂಭ ಮಾಡಿತ್ತು. ಈ ಬಳಿಕ ಕ್ರೋರೆಷಿಯಾ, ಚೆಕ್ ರಿಪಬ್ಲಿಕ್, ಗ್ರೀಸ್, ಸೈಪ್ರಸ್‌, ಫಿನ್ಲೆಂಡ್ ಸೇರಿದಂತೆ ಯುರೋಪಿ ತಂಡಗಳನ್ನು ಸತತವಾಗಿ ಸೋಲಿಸಿದೆ.

ಐಸಿಸಿ ಕಾರ್ಯಕ್ರಮದ ಮಹತ್ವದ ಫಲಿತಾಂಶ

2003-04ರಲ್ಲಿ ಆಸ್ಟ್ರೇಲಿಯಾ ಸತತವಾಗಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡು ದಾಖಲೆ ನಿರ್ಮಿಸಿತ್ತು. ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಈ ಘಟನೆಯನ್ನು ಸಾಧಿಸಿತ್ತು. 2003 ವಿಶ್ವಕಪ್ ಗೆಲ್ಲುವ ಮುನ್ನ ರಿಕಿ ಪಾಂಟಿಂಗ್ ಮುಂದಾಳತ್ವದಲ್ಲಿ ಆಸ್ಟ್ರೇಲಿಯಾ 17 ಏಕದಿನ ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿತ್ತು. ಆ ಬಳಿಕ ವೆಸ್ಟ್‌ಇಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದು ವಿಶ್ವದಾಖಲೆ ನಿರ್ಮಿಸಿತ್ತು. ಈಗ ಸ್ಪೇನ್ 21 ಅಂತರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ.

ಸ್ಪೇನ್ ತಂಡ 2024ರಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗ್ರೀಸ್ ತಂಡವನ್ನು ಸೋಲಿಸಿ ಸತತ 14 ಗೆಲುವು ದಾಖಲಿಸಿತ್ತು. 2019ರಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ಅರ್ಹತೆ ಪಡೆದುಕೊಂಡ ಬಳಿಕ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಅವಧಿಯಲ್ಲಿ ಸ್ಪೇನ್ ತಂಡ 50 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 41 ಗೆಲುವು ಪಡೆದರೆ ಕೇವಲ 08 ಪಂದ್ಯಗಳಲ್ಲಿ ಮಾತ್ರ ಸೋಲುಂಡಿದೆ.

ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಗುರುತು ಸಾಧಿಸಲು ಸ್ಪೇನ್ ತಂಡಕ್ಕೆ ಬಹಳ ಸಮಯ ಬೇಕಾಯ್ತು. ಸ್ಪೇನ್ 1992ರಲ್ಲಿ ಮೊದಲ ಬಾರಿಗೆ ಐಸಿಸಿ ಸದಸ್ಯತ್ವ ರಾಷ್ಟ್ರವಾಗಿ ಸ್ಥಾನ ಪಡೆದರು, 2017ರ ಅವಧಿಯಲ್ಲಿ ಅಸೋಸಿಯೇಟ್ ಸದಸ್ಯ ರಾಷ್ಟ್ರವಾಗಿ ಸ್ಥಾನ ಖಚಿತಪಡಿಸಿಕೊಂಡಿತ್ತು. ವಿಶೇಷ ಎಂದರೆ, ಸ್ಪೇನ್‌ನಲ್ಲಿ 1809ರಲ್ಲಿಯೇ ಕ್ರಿಕೆಟ್ ಪಂದ್ಯ ಆಡಿದ ದಾಖಲೆಗಳು ಇದೆ. ಫುಟ್‌ಬಾಲ್‌ಗೆ ಖ್ಯಾತಿಯಾಗಿರುವ ಬಾರ್ಸಿಲೋನಾ, ಮ್ಯಾಡ್ರಿಡ್ ನಂತರ ನಗರದಲ್ಲೂ 1980ರ ವರೆಗೂ ಕ್ರಿಕೆಟ್ ಕ್ಲಬ್‌ಗಳು ಇತ್ತು ಅನ್ನೋದು ಗಮನಿಸಬೇಕಾದ ಅಂಶವಾಗಿದೆ.

ಸ್ಪೇನ್ ತಂಡದ ಇತ್ತೀಚಿನ ಪ್ರದರ್ಶನ ಐಸಿಸಿ ಕ್ರಿಕೆಟ್ ಅಭಿವೃದ್ಧಿ ಕಾರ್ಯಕ್ರಮದ ಪಾತ್ರ ಬಹಳ ಮುಖ್ಯವಾಗಿದೆ. ಸರಿಸುಮಾರು ಎರಡು ದಶಕಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಸ್ಪೇನ್ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಂಡದ ಪ್ರದರ್ಶನದ ಮೇಲೆ ಅದರ ಪ್ರಭಾವ ಸ್ಪಷ್ಟವಾಗಿ ಕಾಣುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

BCCI Centre of Excellence: ಬೆಂಗಳೂರಲ್ಲಿದೆ ಭಾರತದ ಕ್ರಿಕೆಟ್‌ ಫ್ಯಾಕ್ಟ್ರಿ; ₹500 ಕೋಟಿ ವೆಚ್ಚ
IND vs SL, 1st Test: 30 ಟೆಸ್ಟ್, 30 ವೆನ್ಯೂ! ಸಚಿನ್ ಕ್ಲಬ್‌ಗೆ ಯಶಸ್ವಿ ಜೈಸ್ವಾಲ್ ಎಂಟ್ರಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್