ಕೊಹ್ಲಿ ವಿರುದ್ಧ ಮುಗಿಬಿದ್ದ ಕ್ರಿಕೆಟ್ ಅಭಿಮಾನಿಗಳು: ಟೀಂ ಇಂಡಿಯಾದ ಆಟಗಾರರ ನಡುವೆಯೂ ಒಡಕು

Published : Jun 22, 2017, 08:09 AM ISTUpdated : Apr 11, 2018, 12:59 PM IST
ಕೊಹ್ಲಿ ವಿರುದ್ಧ ಮುಗಿಬಿದ್ದ ಕ್ರಿಕೆಟ್ ಅಭಿಮಾನಿಗಳು: ಟೀಂ ಇಂಡಿಯಾದ ಆಟಗಾರರ ನಡುವೆಯೂ ಒಡಕು

ಸಾರಾಂಶ

ಕೋಚ್​ ಸ್ಥಾನಕ್ಕೆ ದಿಡೀರ್ ರಾಜೀನಾಮೆ ನೀಡಿರೋದಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕಾರಣ ನೀಡಿದ್ದಾರೆ. ತಾವು ರಾಜಿನಾಮೆ ನೀಡಲು ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ ಕಾರಣ ಅಂತಾ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯ ಬಹಿರಂಗವಾಗ್ತಿದಂತೆ ಕೊಹ್ಲಿ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.

ಮುಂಬೈ(ಜೂ.22): ಕೋಚ್​ ಸ್ಥಾನಕ್ಕೆ ದಿಡೀರ್ ರಾಜೀನಾಮೆ ನೀಡಿರೋದಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕಾರಣ ನೀಡಿದ್ದಾರೆ. ತಾವು ರಾಜಿನಾಮೆ ನೀಡಲು ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ ಕಾರಣ ಅಂತಾ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯ ಬಹಿರಂಗವಾಗ್ತಿದಂತೆ ಕೊಹ್ಲಿ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.

ಅನಿಲ್ ಕುಂಬ್ಳೆ ಟ್ವೀಟರ್​'ನಲ್ಲಿ ತಾವು ಬಿಸಿಸಿಐಗೆ ಸಲ್ಲಿಸಿದ ಪತ್ರ ಪೋಸ್ಟ್ ಮಾಡುತ್ತಿದಂತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ಸುರಿಮಳೆಯಾಗ್ತಿವೆ. ದಿಗ್ಗಜ ಕ್ರಿಕೆಟಿಗನನ್ನೇ ಅವಮಾನ ಮಾಡಿದ್ದಾರೆ ಅಂತ ಕೊಹ್ಲಿ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಕೆಲವ್ರು ಬಿಸಿಸಿಐ ಅನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ಯಂತ ಮೃದು ಸ್ವಭಾವದ ಕೋಚ್ ಬೇಕು ಎನ್ನುವಂತಹ ಆಟಗಾರರನ್ನು ಹಾಗೂ ಕುಂಬ್ಳೆಯಂತಹ ಶಿಸ್ತಿನ ಕೋಚ್ ವಿರುದ್ಧ ದೂರು ನೀಡುವವರನ್ನು ತಂಡದಿಂದಲೇ ಕೈಬಿಡಬೇಕೆಂದು ಗವಾಸ್ಕರ್ ಹೇಳಿಕೊಂಡಿದ್ದಾರೆ. ಇನ್ನು ಶೂಟರ್ ಅಭಿನವ್ ಬಿಂದ್ರಾ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ. ನನಗಿಷ್ಟವಾಗದ ಕೋಚ್ ಜೊತೆ ನಾನು 20 ವರ್ಷ ಕೆಲ್ಸ ಮಾಡಿದೆ ಎಂದಿದ್ದಾರೆ.

ಹೊಸ ಕೋಚ್‌ ನೇಮಿಸುವ ಉದ್ದೇಶದಿಂದ ಬಿಸಿಸಿಐ ಮತ್ತಷ್ಟು ಅರ್ಜಿಗಳನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ. ಮೇ ತಿಂಗಳಲ್ಲಿ ನೂತನ ಕೋಚ್ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಿತ್ತು. ಐವರು ಅರ್ಜಿ ಸಲ್ಲಿದಿದ್ದರು. ಆದರೆ ಕುಂಬ್ಳೆ ದಿಢೀರ್‌ ಆಗಿ ರಾಜೀನಾಮೆ ನೀಡಿದ್ದರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಸಲು 10 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಇನ್ನು ಸದ್ಯ ಬ್ಯಾಟಿಂಗ್ ಕೊಚ್ ಆಗಿರುವ ಸಂಜಯ್ ಬಂಗಾರ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗುವ ಎಲ್ಲಾ ಸಾಧ್ಯತೆಗಳಿವೆ. ರವಿಶಾಸ್ತ್ರಿ ಸಹ ಕೋಚ್ ರೇಸ್​ನಲ್ಲಿದ್ದಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕೋಚ್ ನೇಮಿಸುವುದಾಗಿ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿಕೊಂಡಿದ್ದಾರೆ.

ಕುಂಬ್ಳೆ ರಾಜೀನಾಮೆ ನೀಡಿದ ಮೇಲೆ ಟೀಂ ಇಂಡಿಯಾ ಆಟಗಾರರಲ್ಲೂ ಒಡಕು ಮೂಡಿದೆ ಎನ್ನಲಾಗಿದೆ. ಕೆಲ ಆಟಗಾರರು ಕುಂಬ್ಳೆ ಪರ ಇದ್ದರೆ, ಕೆಲವರು ಕೊಹ್ಲಿ ಪರವಾಗಿದ್ದಾರೆ. ಇದು ವೆಸ್ಟ್ ಇಂಡೀಸ್​ ವಿರುದ್ಧದ ಸರಣಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್
ಐಪಿಎಲ್ ಹರಾಜಿನಲ್ಲಿ ಜಾಕ್‌ಪಾಟ್‌; 8 ಕೋಟಿಗಾಗಿ ಹನಿಮೂನ್ ತ್ಯಾಗಕ್ಕೆ ರೆಡಿಯಾದ ಈ ಸ್ಟಾರ್ ಕ್ರಿಕೆಟರ್!