ಟಾಸ್ ವೇಳೆ ಹೆಡ್ ಇಲ್ಲವೇ ಟೇಲ್ ಬೀಳುವುದನ್ನು ನೋಡಿರುತ್ತೇವೆ. ಆದರೆ ಅಂಡರ್-19 ಪಂದ್ಯವೊಂದರಲ್ಲಿ ಟಾಸ್ ಅಚ್ಚರಿಯ ವಿದ್ಯಾಮಾನಕ್ಕೆ ಸಾಕ್ಷಿಯಾಗಿದೆ. ಅಷ್ಟುಕ್ಕೂ ಏನಾಯ್ತು ನೀವೇ ನೋಡಿ...
ನವದೆಹಲಿ(ಜು.10): ಕ್ರಿಕೆಟ್‌ನಲ್ಲಿ ಏನು ಬೇಕಿದ್ದರೂ ಸಾಧ್ಯ ಎನ್ನುತ್ತಾರೆ. ಈ ಮಾತಿಗೆ ಸರಿ ಹೊಂದುವಂತಹ ಪ್ರಸಂಗವೊಂದು ಮಂಗಳವಾರ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ಅಂಡರ್-19 ಪೂರ್ವ ಪ್ರದೇಶಗಳ ಟೂರ್ನಿಯಲ್ಲಿ ನಡೆಯಿತು.
This must be the first time😂
Today at the toss of ACC u19 asia cup qualifiers between Nepal and Hongkong. pic.twitter.com/3aOyrpq58z
ಹಾಂಕಾಂಗ್ ಹಾಗೂ ನೇಪಾಳ ನಡುವಿನ ಪಂದ್ಯಕ್ಕೂ ಮುನ್ನ ನಡೆದ ಟಾಸ್ ವೇಳೆ, ನಾಣ್ಯ ಒಂದು ಕಡೆ ಬೀಳದೆ ನೆಟ್ಟಗೆ ನಿಂತು ಬಿಟ್ಟಿತು. ಈ ಪ್ರಸಂಗ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿತು. ಬಳಿಕ 2ನೇ ಬಾರಿ ಟಾಸ್ ನಡೆಸಲಾಯಿತು.
ಟಾಸ್ ಗೆದ್ದ ನೇಪಾಳ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 6 ವಿಕೆಟ್ ಜಯ ಸಹ ಸಾಧಿಸಿತು. ನಾಣ್ಯದ ಫೋಟೋವನ್ನು ಎಸಿಸಿ ಟ್ವೀಟ್ ಮಾಡಿದ್ದು, ಭಾರಿ ವೈರಲ್ ಆಗಿದೆ.