ವೆಯ್ಟ್‌ಲಿಫ್ಟ್ ಚಾಂಪಿಯನ್‌ಶಿಪ್; ಮೀರಾಬಾಯಿಗೆ ಚಿನ್ನ!

By Web Desk  |  First Published Jul 9, 2019, 5:17 PM IST

ಚೀನಾದಲ್ಲಿ ಆಯೋಜಿಸಲಾದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪಪ್ ಟೂರ್ನಿಯಲ್ಲಿ ಭಾರತದ ಪದಕ ಸಂಖ್ಯೆ 13ಕ್ಕೇರಿದೆ. ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲೋ ಮೂಲಕ ಇತಿಹಾಸ ರಚಿಸಿದ್ದಾರೆ. 


ಚೀನಾ(ಜು.09): ಮಾಜಿ ವಿಶ್ವಚಾಂಪಿಯನ್, ಭಾರತದ ವೆಯ್ಟ್ ಲಿಫ್ಟರ್ ಮೀರಾ ಬಾಯಿ ಚಾನು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚೀನಾದಲ್ಲಿ ನಡೆದ ಕಾಮನ್‌ವೆಲ್ತ್ ವೆಯ್ಟ್‌ಲಿಫ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮೀರಾ ಬಾಯಿ ಚಾನು  ಒಟ್ಟು 191 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಒಟ್ಟು 13 ಪದಕ ಬಾಚಿಕೊಂಡಿದೆ.

ಇದನ್ನೂ ಓದಿ: ವಾರದಲ್ಲಿ 2 ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್!

Tap to resize

Latest Videos

ಸೀನಿಯರ್ ಮಹಿಳಾ ವಿಭಾಗದಲ್ಲಿ(49kKG) ಚಿನ್ನ ಗೆಲ್ಲೋ ಮೂಲಕ ಮೀರಾ ಬಾಯಿ, 2020ರ ಟೊಕಿಯೋ ಒಲಿಂಪಿಕ್‌ಗೆ ಅರ್ಹತೆ ಹಾದಿ ಸುಗಮಗೊಳಿಸಿದ್ದಾರೆ. ಕಾಮನ್‌ವೆಲ್ತ್ ವೆಯ್ಟ್‌ಲಿಫ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ  ಭಾರತ 8 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಒಟ್ಟು 13 ಪದಕ ಗೆದ್ದುಕೊಂಡಿದೆ.

ಇದನ್ನೂ ಓದಿ: ಕುಂತೊ ಅಥ್ಲೆಟಿಕ್ಸ್: ಚಿನ್ನ ಗೆದ್ದ ಭಾರತದ ಮೊಹಮ್ಮದ್ ಅನಾಸ್!

ಎಪ್ರಿಲ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಟೂರ್ನಿಯಲ್ಲಿ ಮೀರಾ ಬಾಯಿ ಚಿನ್ನದ ಪದಕ ಮಿಸ್ ಮಾಡಿಕೊಂಡಿದ್ದರು. ಇದೀಗ  84kg + 107 kg ಭಾರ ಎತ್ತಿದ ಮೀರಾ ಭಾಯಿ ಹೊಸ ಇತಿಹಾಸ ರಚಿಸಿದ್ದಾರೆ. ಮೀರಾ ಬಾಯಿ ಚಾನು ಸಾಧನೆಗೆ ಕ್ರೀಡಾ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


 

click me!