ಭಾರತದ ಕಳಪೆ ಪ್ರದರ್ಶನಕ್ಕೆ ಕೊಹ್ಲಿ ಕಾರಣರೇ? ಇಲ್ಲಿವೆ ಮಾರ್ಕ್ ವಾ ನೀಡುವ ಕಾರಣಗಳು

Published : Mar 05, 2017, 12:45 PM ISTUpdated : Apr 11, 2018, 12:44 PM IST
ಭಾರತದ ಕಳಪೆ ಪ್ರದರ್ಶನಕ್ಕೆ ಕೊಹ್ಲಿ ಕಾರಣರೇ? ಇಲ್ಲಿವೆ ಮಾರ್ಕ್ ವಾ ನೀಡುವ ಕಾರಣಗಳು

ಸಾರಾಂಶ

ಕೊಹ್ಲಿಯವರು ಬ್ಯಾಟಿಂಗ್ ಮಾಡುವಾಗ ಬಹಳ ನಕರಾತ್ಮಕವಾಗಿ ಯೋಚಿಸುತ್ತಿದ್ದಾರೆ, ಚಂಚಲವಾಗಿಬಿಟ್ಟಿದ್ದಾರೆ. ಅವರ ಈ ಮನೋಭಾವವು ಇತರ ಆಟಗಾರರ ಮೇಲೆ ಪರಿಣಾಮ ಬೀರಿದೆ. ಇದರಿಂದ ಅವರ ಬ್ಯಾಟಿಂಗ್ ಕೂಡ ನಕರಾತ್ಮಕವಾಗಿದೆ ಎಂದು ಮಾರ್ಕ್ ವಾ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಮಾ. 05): ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾರತ ಹೀನಾಯ ಪ್ರದರ್ಶನ ನೀಡುತ್ತಿದೆ. ಟೀಮ್ ಇಂಡಿಯಾ ಮೊದಲ ಟೆಸ್ಟ್'ನಲ್ಲಿನ ತನ್ನ ಕಳಪೆ ಆಟವನ್ನು ಎರಡನೇ ಪಂದ್ಯದಲ್ಲೂ ಮುಂದುವರಿಸಿದೆ. ಭಾರತದ ಬ್ಯಾಟಿಂಗ್ ಆಧಾರ ಸ್ತಂಭ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ವೈಫಲ್ಯ ತಂಡದ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ತವರಿನಲ್ಲಿ ಹುಲಿಗಳಂತಿರುವ ಟೀಮ್ ಇಂಡಿಯಾಗೆ ಯಾಕಿಂಥ ಸ್ಥಿತಿ ಬಂತು? ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಭಾರತದ ಕಳಪೆ ಪ್ರದರ್ಶನಕ್ಕೆ ಕಾರಣಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಭಾರತದ ಬ್ಯಾಟುಗಾರರು ಸರಿಯಾಗಿ ಆಡದೇ ಇರಲು ವಿರಾಟ್ ಕೊಹ್ಲಿಯೇ ಕಾರಣವಂತೆ.

ಕೊಹ್ಲಿಯವರು ಬ್ಯಾಟಿಂಗ್ ಮಾಡುವಾಗ ಬಹಳ ನಕರಾತ್ಮಕವಾಗಿ ಯೋಚಿಸುತ್ತಿದ್ದಾರೆ, ಚಂಚಲವಾಗಿಬಿಟ್ಟಿದ್ದಾರೆ. ಅವರ ಈ ಮನೋಭಾವವು ಇತರ ಆಟಗಾರರ ಮೇಲೆ ಪರಿಣಾಮ ಬೀರಿದೆ. ಇದರಿಂದ ಅವರ ಬ್ಯಾಟಿಂಗ್ ಕೂಡ ನಕರಾತ್ಮಕವಾಗಿದೆ ಎಂದು ಮಾರ್ಕ್ ವಾ ಅಭಿಪ್ರಾಯಪಟ್ಟಿದ್ದಾರೆ.

ವಾರ್ಕ್ ವಾ ಹೇಳಿದ್ದೇನು?

* ಚೆಂಡು ಬೌನ್ಸ್ ಆಗಿ ಥೈ(ತೊಡೆ) ಪ್ಯಾಡ್ ಮೇಲೆ ಬಡಿಯುವ ಮುನ್ನ ಕೊಹ್ಲಿಯ ಮನಃಸ್ಥಿತಿ ಗೊತ್ತಾಯಿತು. ಲೆಗ್'ಸೈಡ್'ನಲ್ಲಿ ಇಬ್ಬರು ಫೀಲ್ಡರ್'ಗಳಿದ್ದುದು ಕೊಹ್ಲಿಯ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಭಾರತದ ಶ್ರೇಷ್ಠ ಬ್ಯಾಟುಗಾರನಿಗೆ ಇಂತಹ ಫೀಲ್ಡಿಂಗ್ ರಚನೆ ಇದ್ದರೆ ಭೂರಿ ಭೋಜನ ಇದ್ದಂತೆ. ಬೌನ್ಸ್ ಆಗಿ ತೊಡೆಯತ್ತ ಬರುವ ಚೆಂಡನ್ನು ಕ್ಲೀನಾಗಿ ಟಕ್ ಮಾಡಬಿಡುತ್ತಾರೆ. ಆದರೆ, ಕೊಹ್ಲಿ ಚಂಚಲತೆಗೊಳಗಾಗಿದ್ದಾರೆ. ಏಕಾಗ್ರತೆ ಕಳೆದುಕೊಂಡಿದ್ದಾರೆ.

* ಬ್ಯಾಟ್ ಸುತ್ತ ಫೀಲ್ಡರ್ಸ್ ಇದ್ದಾರೆಂಬ ಕಾರಣಕ್ಕೆ ಕೊಹ್ಲಿ ನಕರಾತ್ಮಕವಾಗಿ ಯೋಚಿಸಲು ಆರಂಭಿಸಿದರು. ಚೆಂಡು ಬೌನ್ಸ್ ಆದರೆ ಇನ್ಸೈಡ್ ಎಡ್ಜ್ ಆಗಬಹುದೆಂಬ ಭೀತಿ ಅವರನ್ನ ಆವರಿಸಿತು. ಒಬ್ಬ ಬ್ಯಾಟುಗಾರನಾಗಿ ನೀವು ಆ ರೀತಿ ಯೋಚಿಸಲು ಸಾಧ್ಯವಿಲ್ಲ.

* ಕೊಹ್ಲಿ ಕನಸು ಕಾಣುತ್ತಲೇ ರನ್'ಗಳನ್ನು ಗಳಿಸಬಲ್ಲರು. ಆದರೆ, ಅವರ ನಕರಾತ್ಮಕ ಯೋಚನೆಯು ಇತರ ಆಟಗಾರರ ಮೇಲೂ ಪ್ರಭಾವ ಬೀರಿದೆ. ಬಹುತೇಕ ಆಟಗಾರರು ಇಂದು ಕ್ರೀಸ್'ನಲ್ಲಿ ಅನಿಶ್ಚಿತ ಸ್ಥಿತಿಯಲ್ಲಿದ್ದಂತೆ ಕಂಡು ಬಂದರು. ತಾವು ಔಟ್ ಆದ ರೀತಿ ಬಗ್ಗೆ ಅವರಿಗೆ ನಿರಾಶೆ ಆಗಿರುತ್ತದೆ.

* ಈ ಪಂದ್ಯದಲ್ಲಿ ಇನ್ನಷ್ಟು ಗಮನದಿಂದ ಆಡುವುದು ಅಗತ್ಯ ಎಂದು ಕೊಹ್ಲಿ ಹೇಳಿದ್ದರು. ಆದರೆ, ಹೇಗೆ ಆಡಬಾರದು ಎಂಬುದಕ್ಕೆ ಕೊಹ್ಲಿಯೇ ಒಳ್ಳೆಯ ಉದಾಹರಣೆ ಆಗಿಬಿಟ್ಟಿದ್ದಾರೆ. ಇವರು ಕೊಹ್ಲಿಯಾ ಎಂಬ ಅನುಮಾನ ಶುರುವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೀದಿಗೆ ಬಿದ್ದ ಬಾಕ್ಸರ್‌ ಮೇರಿ ಕೋಮ್‌ ದಾಂಪತ್ಯ ಕಲಹ; ಆಕೆಗೆ ಆ ಇಬ್ಬರ ಜತೆ ಅಕ್ರಮ ಸಂಬಂಧವಿತ್ತು ಎಂದ ಮಾಜಿ ಪತಿ!
ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!