
ದುಬೈ(ಮಾ.05): ವಿಶ್ವದ ನಂ.1 ಟೆನಿಸಿಗ, ಬ್ರಿಟನ್'ನ ಆ್ಯಂಡಿ ಮರ್ರೆ ಮೊಟ್ಟಮೊದಲ ಬಾರಿಗೆ ದುಬೈ ಓಪನ್'ನಲ್ಲಿ ಚಾಂಪಿಯನ್ ಆಗಿದ್ದಾರೆ.
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಅವರು ಸ್ಪೇನ್ ಆಟಗಾರ ಫೆರ್ನಾಂಡೊ ವಾರ್ಡೆಸ್ಕೊ ಎದುರು 6-3, 6-2 ಎರಡು ನೇರ ಸೆಟ್'ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಈ ಋುತುವಿನಲ್ಲಿ ಅವರು ಮೊದಲ ಪ್ರಶಸ್ತಿ ಜಯಿಸಿದರಲ್ಲದೆ, ಒಟ್ಟಾರೆ ವೃತ್ತಿಬದುಕಿನ 45ನೇ ಟ್ರೋಫಿಗೆ ಮುತ್ತಿಕ್ಕಿದರು.
ಅಂದಹಾಗೆ ವಾರ್ಡೆಸ್ಕೊ ಎದುರು 12-1ರ ಗೆಲುವಿನ ದಾಖಲೆ ಬರೆದಿರುವ ಮರ್ರೆ, ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿಧಾನಗತಿ ಆಟದಿಂದ ಅಚ್ಚರಿ ಮೂಡಿಸಿದರು. ಆದರೆ, ಕ್ರಮೇಣ ಆಟದಲ್ಲಿ ಹಿಡಿತ ಸಾಧಿಸಿದ ಅವರು 3-3 ಮುನ್ನಡೆ ಪಡೆದು, ಇದೇ ಹಾದಿಯಲ್ಲಿ ಮೊದಲ ಸೆಟ್ ಗೆದ್ದರೆ, ಎರಡನೇ ಸೆಟ್'ನಲ್ಲಿ ಸುಲಭ ಗೆಲುವು ದಾಖಲಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.