ಖೇಲ್ ರತ್ನ, ಅರ್ಜುನಕ್ಕೆ ನೀರಜ್ ಚೋಪ್ರಾ ಹೆಸರು

 |  First Published Apr 28, 2018, 10:27 AM IST

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ 20 ವರ್ಷ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಶಿಫಾರಸು ಮಾಡಿದೆ. ಇದರ ಜತೆಗೆ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೂ ಶಿಫಾರಸು ಮಾಡಿರುವುದಾಗಿ ಎಎಫ್‌’ಐ ತಿಳಿಸಿದೆ.


ನವದೆಹಲಿ(ಏ.28]: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ 20 ವರ್ಷ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಶಿಫಾರಸು ಮಾಡಿದೆ. ಇದರ ಜತೆಗೆ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೂ ಶಿಫಾರಸು ಮಾಡಿರುವುದಾಗಿ ಎಎಫ್‌’ಐ ತಿಳಿಸಿದೆ. 

ನೀರಜ್ ಜತೆ ಜಾವೆಲಿನ್ ಥ್ರೋ ಪಟು ಅನ್ನು ರಾಣಿ ಹಾಗೂ 4 ಬಾರಿ ಕಾಮನ್‌’ವೆಲ್ತ್ ಪದಕ ವಿಜೇತ ಡಿಸ್ಕಸ್ ಥ್ರೋ ಪಟು ಸೀಮಾ ಪೂನಿಯಾ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಪಿ.ಟಿ. ಉಷಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಅಥ್ಲೆಟಿಕ್ಸ್ ಸಂಸ್ಥೆ ನಾಮ ನಿರ್ದೇಶನ ಮಾಡಿದೆ.

Tap to resize

Latest Videos

20 ವರ್ಷದ ನೀರಜ್ ಇತ್ತೀಚೆಗಷ್ಟೇ ಮುಕ್ತಾಯವಾದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 

click me!