ಅಯ್ಯರ್, ಶಾ ಸಿಡಿಲಬ್ಬರದ ಬ್ಯಾಟಿಂಗ್; ಕೆಕೆಆರ್’ಗೆ ಕಠಿಣ ಗುರಿ

First Published Apr 27, 2018, 10:04 PM IST
Highlights

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಪೃಥ್ವಿ ಶಾ ಹಾಗೂ ಕಾಲಿನ್ ಮನ್ರೋ 6.6 ಓವರ್’ಗಳಲ್ಲಿ 59 ರನ್’ಗಳನ್ನು ಕಲೆ ಹಾಕಿ ಉತ್ತಮ ಆರಂಭ ಒದಗಿಸಿಕೊಟ್ಟರು. ಕೇವಲ 18 ಎಸೆತಗಳಲ್ಲಿ ಮನ್ರೋ 33 ರನ್ ಸಿಡಿಸಿ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಪೃಥ್ವಿ ಶಾ ಕೂಡಿಕೊಂಡ ನಾಯಕ ಶ್ರೇಯಸ್ ಅಯ್ಯರ್ ಮನಮೋಹಕ ಇನಿಂಗ್ಸ್ ಕಟ್ಟಿದರು. 

ನವದೆಹಲಿ[ಏ.27]: ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪೃಥ್ವಿ ಶಾ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ ಡೆಲ್ಲಿ ಡೇರ್’ಡೆವಿಲ್ಸ್ 219 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಪೃಥ್ವಿ ಶಾ ಹಾಗೂ ಕಾಲಿನ್ ಮನ್ರೋ 6.6 ಓವರ್’ಗಳಲ್ಲಿ 59 ರನ್’ಗಳನ್ನು ಕಲೆ ಹಾಕಿ ಉತ್ತಮ ಆರಂಭ ಒದಗಿಸಿಕೊಟ್ಟರು. ಕೇವಲ 18 ಎಸೆತಗಳಲ್ಲಿ ಮನ್ರೋ 33 ರನ್ ಸಿಡಿಸಿ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಪೃಥ್ವಿ ಶಾ ಕೂಡಿಕೊಂಡ ನಾಯಕ ಶ್ರೇಯಸ್ ಅಯ್ಯರ್ ಮನಮೋಹಕ ಇನಿಂಗ್ಸ್ ಕಟ್ಟಿದರು. ಅಂಡರ್ ವಿಶ್ವಕಪ್ ವಿಜೇತ ನಾಯಕ ಪೃಥ್ವಿ ಶಾ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 62 ರನ್ ಸಿಡಿಸಿದರು. ಪಿಯೂಶ್ ಚಾವ್ಲಾ ಬೌಲಿಂಗ್’ನಲ್ಲಿ ಡೊಡ್ಡ ಹೊಡೆತಕ್ಕೆ ಮುಂದಾದಾಗ ಕ್ಲೀನ್ ಬೌಲ್ಡ್ ಆಗಿ ಶಾ ಪೆವಿಲಿಯನ್ ಸೇರಿದರು.
ಪೃಥ್ವಿ ಶಾ ಔಟ್ ಆಗುವ ಮುನ್ನ 14 ಓವರ್ ಮುಕ್ತಾಯಕ್ಕೆ ತಂಡದ ಮೊತ್ತ 127 ರನ್’ಗಳಾಗಿದ್ದವು. ಆ ಬಳಿಕ ಮ್ಯಾಕ್ಸ್’ವೆಲ್ ಜೊತೆ ಇನಿಂಗ್ಸ್ ಮುಂದುವರೆಸಿದ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಕೇವಲ 40 ಎಸೆತಗಳಲ್ಲಿ ಅಯ್ಯರ್ 93 ರನ್ ಸಿಡಿಸಿ ಅಜೇಯರಾಗುಳಿದರು. ಅಯ್ಯರ್ ಸ್ಫೋಟಕ ಇನಿಂಗ್ಸ್’ನಲ್ಲಿ 3 ಬೌಂಡರಿ ಹಾಗೂ 10 ಸಿಕ್ಸರ್’ಗಳು ಸೇರಿದ್ದವು. ಶ್ರೇಯಸ್’ಗೆ ಉತ್ತಮ ಸಾಥ್ ನೀಡಿದ ಮ್ಯಾಕ್ಸ್’ವೆಲ್ 27 ರನ್ ಬಾರಿಸಿ ಕೊನೆಯ ಓವರ್’ನಲ್ಲಿ ರನೌಟ್’ಗೆ ಬಲಿಯಾದರು.
ಸಂಕ್ಷಿಪ್ತ ಸ್ಕೋರ್:
ಡೆಲ್ಲಿ ಡೇರ್’ಡೆವಿಲ್ಸ್: 218/4
ಶ್ರೇಯಸ್ ಅಯ್ಯರ್: 93*
ಪೃಥ್ವಿ ಶಾ: 62
ಆ್ಯಂಡ್ರೆ ರಸೆಲ್: 28/1
[*ವಿವರ ಅಪೂರ್ಣ]
 

click me!