
ನವದೆಹಲಿ: ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋನಲ್ಲಿ ಭಾರತದ ಚಿನ್ನದ ಪದಕದ ಭರವಸೆಯಾಗಿದ್ದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, ಈ ಸೀಸನ್‌ನ ಉಳಿದ ಎಲ್ಲಾ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಪಾದದ ಗಾಯದ ಕಾರಣ, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಸೇರಿದಂತೆ ಮುಂಬರುವ ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿಯುತ್ತಿರುವುದಾಗಿ ನೀರಜ್ ಘೋಷಿಸಿದ್ದಾರೆ. ಲಾಸೇನ್ ಡೈಮಂಡ್ ಲೀಗ್‌ನಲ್ಲಿ 88.05 ಮೀಟರ್ ದೂರ ಜಾವೆಲಿನ್ ಎಸೆದು ಈ ಸೀಸನ್‌ನ ಅತ್ಯುತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ ನೀರಜ್‌ಗೆ ಈ ಗಾಯವಾಗಿದೆ.
ಈ ಸೀಸನ್‌ನಿಂದ ಹೊರಗುಳಿಯುವ ಬಗ್ಗೆ ನೀರಜ್ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಕ್ರೀಡಾಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. "ಕಠಿಣ ಪರಿಶ್ರಮದ ನಂತರ ಲಾಸೇನ್‌ನಲ್ಲಿ ಸೀಸನ್‌ನ ಅತ್ಯುತ್ತಮ ದೂರವನ್ನು ದಾಖಲಿಸಿ, ಮತ್ತೆ ಫಾರ್ಮ್‌ಗೆ ಮರಳುತ್ತಿದ್ದೇನೆ ಎಂದು ನನಗೆ ಅನಿಸಿತ್ತು. ಆದರೆ ದುರದೃಷ್ಟವಶಾತ್, ತರಬೇತಿ ವೇಳೆ ನನ್ನ ಪಾದದ ಲಿಗಮೆಂಟ್‌ಗೆ ಗಾಯವಾಗಿದೆ. ವೈದ್ಯರು ಮತ್ತು ತಂಡದ ಸದಸ್ಯರೊಂದಿಗೆ ಚರ್ಚಿಸಿದ ನಂತರ, ಈ ಸೀಸನ್‌ನ ಉಳಿದ ಪಂದ್ಯಗಳಿಂದ ದೂರವಿರಲು ನಿರ್ಧರಿಸಿದ್ದೇನೆ. ಸರಿಯಾದ ಲಯ ಸಿಗುತ್ತಿರುವ ಸಮಯದಲ್ಲಿ ಈ ರೀತಿ ಆಗಿದ್ದು ನಿರಾಸೆ ತಂದಿದೆ. ಆದರೂ, ಹಿನ್ನಡೆಗಳು ಕ್ರೀಡಾಜೀವನದ ಒಂದು ಭಾಗ. ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆದು, ಇನ್ನಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವುದೇ ನನ್ನ ಮುಂದಿನ ಗುರಿ," ಎಂದು ನೀರಜ್ ಬರೆದುಕೊಂಡಿದ್ದಾರೆ.
— Neeraj Chopra (@Neeraj_chopra1) August 29, 2026
ಈ ನಿರ್ಧಾರದಿಂದಾಗಿ, ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್ ಜೊತೆಗೆ, ಈಗಾಗಲೇ ಅರ್ಹತೆ ಪಡೆದಿದ್ದ ಡೈಮಂಡ್ ಲೀಗ್ ಫೈನಲ್‌ನಿಂದಲೂ ಹೊರಗುಳಿಯಲಿದ್ದಾರೆ. ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಖಚಿತ ಪದಕದ ನಿರೀಕ್ಷೆಗೆ ನೀರಜ್ ಅವರ ಈ ನಿರ್ಧಾರ ದೊಡ್ಡ ಹೊಡೆತ ನೀಡಿದೆ. ಕಳೆದ ಎರಡು ಏಷ್ಯನ್ ಗೇಮ್ಸ್‌ಗಳಲ್ಲೂ ನೀರಜ್ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.
ನವದೆಹಲಿ: ಮುಂದಿನ ತಿಂಗಳು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗಿಯಾಗುತ್ತಿರುವ ಕ್ರಿಕೆಟಿಗರಿಗೆ ಒದಗಿಸಲಾದ ಮೂಲಸೌಕರ್ಯಗಳ ಬಗ್ಗೆ ಬಿಸಿಸಿಐ ತೀವ್ರ ಅತೃಪ್ತಿ ಹೊಂದಿದೆ. ಇದಕ್ಕಾಗಿ ಮುಖ್ಯ ತಂಡದ ಬದಲಿಗೆ ಭಾರತ ‘ಬಿ’ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸುವ ಬಗ್ಗೆಯೂ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ಏಷ್ಯನ್ ಗೇಮ್ಸ್‌ನ ಮಹಿಳಾ ಕ್ರಿಕೆಟ್ ಸೆ.17ರಿಂದ, ಪುರುಷರ ಕ್ರಿಕೆಟ್ ಸೆ.24ರಿಂದ ಆರಂಭಗೊಳ್ಳಲಿದೆ. ಆದರೆ ಕ್ರಿಕೆಟಿಗರಿಗೆ ಗೇಮ್ಸ್ ನಗರದಲ್ಲಿ ಸೌಲಭ್ಯಗಳ ಬಗ್ಗೆ ಬಿಸಿಸಿಐ ಮತ್ತು ಇತರ ಕೆಲ ದೇಶಗಳ ಕ್ರಿಕೆಟ್ ಸಂಸ್ಥೆಗಳು ಅತೃಪ್ತವಾಗಿವೆ ಎಂದು ವರದಿಯಾಗಿದೆ. ಅಲ್ಲಿನ ಪಿಚ್, ಕ್ರಿಕೆಟಿಗರು ಉಳಿದುಕೊಳ್ಳುವ ಕೋಣೆ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದರ ಬಗ್ಗೆ ಪರಿಶೀಲನೆಗೆ ಬಿಸಿಸಿಐ ವೀಕ್ಷಕರನ್ನು ಜಪಾನ್‌ಗೆ ಕಳುಹಿಸಿದ್ದು, ಅವರ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.