ನೀರಜ್‌ ಚೋಪ್ರಾ ಚಿನ್ನ ಗೆದ್ರೂ, ಮತ್ತೆ ಭಾರತ ನೀರಸ ಪ್ರದರ್ಶನ!

By Kannadaprabha NewsFirst Published Aug 29, 2023, 9:44 AM IST
Highlights

ಕಳೆದ ಆವೃತ್ತಿಯಲ್ಲಿ 6 ವಿಭಾಗಗಳಲ್ಲಿ ಭಾರತೀಯರು ಫೈನಲ್‌ಗೆರಿದ್ದರು. ಆದರೆ ಈ ಬಾರಿ 4 ವಿಭಾಗಗಳಲ್ಲಿ ಮಾತ್ರ ಭಾರತ ಪ್ರಶಸ್ತಿ ಸುತ್ತಿಗೇರಿತು. ಜಾವೆಲಿನ್‌ನಲ್ಲಿ ನೀರಜ್‌ ಜೊತೆ ಡಿ.ಪಿ.ಮನು(6ನೇ ಸ್ಥಾನ), ಕಿಶೋರ್‌ ಜೆನಾ(5ನೇ ಸ್ಥಾನ), 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌, ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆಲ್ಡ್ರಿನ್‌ ಹಾಗೂ ಪುರುಷರ ರಿಲೇ ತಂಡ ಫೈನಲ್‌ ಗೇರಿತ್ತು.

ಬುಡಾಪೆಸ್ಟ್‌(ಆ.29): ನೀರಜ್‌ ಚೋಪ್ರಾ ಜಾವೆಲಿನ್‌ನಲ್ಲಿ ಚಿನ್ನ ಗೆದ್ದರೂ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಪರ್ಧಿಗಳ ಪ್ರದರ್ಶನ ಈ ಬಾರಿಯೂ ಸುಧಾರಿಸಿಲ್ಲ. ಕೂಟದ ಇತಿಹಾಸದಲ್ಲಿ ನೀರಜ್‌ರ ಚಿನ್ನ ಸೇರಿ ದೇಶಕ್ಕೆ ಸಿಕ್ಕಿರುವುದು ಕೇವಲ 3 ಪದಕ. 2003ರಲ್ಲಿ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚು ಗೆದ್ದಿದ್ದರು. ಆ ಬಳಿಕ 2022ರಲ್ಲಿ ನೀರಜ್‌ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದ್ದರು.

ಕಳೆದ ಆವೃತ್ತಿಯಲ್ಲಿ 6 ವಿಭಾಗಗಳಲ್ಲಿ ಭಾರತೀಯರು ಫೈನಲ್‌ಗೆರಿದ್ದರು. ಆದರೆ ಈ ಬಾರಿ 4 ವಿಭಾಗಗಳಲ್ಲಿ ಮಾತ್ರ ಭಾರತ ಪ್ರಶಸ್ತಿ ಸುತ್ತಿಗೇರಿತು. ಜಾವೆಲಿನ್‌ನಲ್ಲಿ ನೀರಜ್‌ ಜೊತೆ ಡಿ.ಪಿ.ಮನು(6ನೇ ಸ್ಥಾನ), ಕಿಶೋರ್‌ ಜೆನಾ(5ನೇ ಸ್ಥಾನ), 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌, ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆಲ್ಡ್ರಿನ್‌ ಹಾಗೂ ಪುರುಷರ ರಿಲೇ ತಂಡ ಫೈನಲ್‌ ಗೇರಿತ್ತು. ಪದಕ ಭರವಸೆ ಮೂಡಿಸಿದ್ದ ಅಥ್ಲೀಟ್‌ಗಳಾದ ಅವಿನಾಶ್‌ ಸಾಬ್ಳೆ(3000 ಮೀ. ಸ್ಟೀಪಲ್‌ಚೇಸ್‌), ಮುರಳಿ ಶ್ರೀಶಂಕರ್‌(ಲಾಂಗ್‌ಜಂಪ್‌), ಜ್ಯೋತಿ ಯರ್ರಾಜಿ(ಹರ್ಡಲ್ಸ್‌) ನಿರಾಸೆ ಅನುಭವಿಸಿದರು.

Latest Videos

ಜಾವೆಲಿನ್‌: ಕಿಶೋರ್‌ಗೆ ಒಡಿಶಾ ₹25 ಲಕ್ಷ!

ಭುವನೇಶ್ವರ: ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಪದಕ ಗೆಲ್ಲದಿದ್ದರೂ ಅತ್ಯುತ್ತಮ ಪ್ರದರ್ಶನ ತೋರಿದ ಕಿಶೋರ್‌ ಜೆನಾ ಅವರಿಗೆ ಒಡಿಶಾ ಸರ್ಕಾರ 25 ಲಕ್ಷ ರು. ನಗದು ಬಹುಮಾನ ಘೋಷಿಸಿದೆ. ಭಾನುವಾರ ಕಿಶೋರ್‌ 84.77 ಮೀ. ದೂರಕ್ಕೆ ಜಾವೆಲಿನ್‌ ಎಸೆದು, ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ದಾಖಲಿಸಿ 5ನೇ ಸ್ಥಾನ ಪಡೆದಿದ್ದರು.

ಈ ಪದಕ ಇಡೀ ದೇಶಕ್ಕೆ ಅರ್ಪಣೆ, ನಾವು ಕಷ್ಟ ಪಟ್ಟರೇ ಏನುಬೇಕಾದರೂ ಮಾಡುತ್ತೇವೆ: ನೀರಜ್ ಚೋಪ್ರಾ 'ಚಿನ್ನ'ದಂತ ಮಾತು

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪಾರುಲ್‌ ಚೌಧರಿ

ಬುಡಾಪೆಸ್ಟ್‌(ಹಂಗೇರಿ): ಭಾರತದ ತಾರಾ ಅಥ್ಲೀಟ್‌ ಪಾರುಲ್‌ ಚೌಧರಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಭಾನುವಾರ ಮಧ್ಯರಾತ್ರಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ ಫೈನಲ್‌ನಲ್ಲಿ ಉತ್ತರ ಪ್ರದೇಶದ ಪಾರುಲ್‌ 9 ನಿಮಿಷ 15:31 ಸೆಕೆಂಡ್‌ಗಳಲ್ಲಿ ಕ್ರಮಿಸಿ11ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಆದರೆ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತಾ ಮಟ್ಟ(9:23.00 ನಿಮಿಷ)ವನ್ನು ತಲುಪಲು ಯಶಸ್ವಿಯಾದರು. ಜೊತೆಗೆ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಲಲಿತಾ ಬಾಬರ್‌ 9:19.76 ನಿಮಿಷಗಳಲ್ಲಿ ಕ್ರಮಿಸಿದ್ದು ಈವರೆಗಿನ ದಾಖಲೆಯಾಗಿತ್ತು.

25ರ ಹರಯಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ 5 ಸ್ಟಾರ್ ಅಥ್ಲೀಟ್..!

5ನೇ ಸ್ಥಾನ ಪಡೆದ 4*400 ರಿಲೇ ತಂಡ

ಇದೇ ವೇಳೆ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಭಾರತ ಪುರುಷರ 4*400 ಮೀ. ರಿಲೇ ತಂಡ ಫೈನಲ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಮೊಹಮದ್‌ ಅನಸ್‌ ಯಹ್ಯಾ, ಅಮೊಲ್‌ ಜೇಕಬ್‌, ಮೊಹಮದ್‌ ಅಜ್ಮಲ್‌, ರಾಜೇಶ್‌ ರಮೇಶ್‌ ಅವರಿದ್ದ ತಂಡ 2 ನಿಮಿಷ 59.92 ಸೆಕೆಂಡ್‌ಗಳಲ್ಲಿಕೋಟ ಪೂರ್ತಿಗೊಳಿಸಿತು. ಅಮೆರಿಕ(2:57.31ನಿ.), ಫ್ರಾನ್ಸ್‌(2:58.45 ನಿ.), ಬ್ರಿಟನ್‌(2:58.71 ನಿ.) ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಜಯಿಸಿದವು.

click me!