ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ : ಕರ್ನಾಟಕಕ್ಕೆ ಆಘಾತ

By Web Desk  |  First Published Jan 31, 2019, 8:24 AM IST

ರಾಷ್ಟ್ಪೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಬಲಿಷ್ಠ ತಂಡವಾಗಿ ಗುರಿತಿಸಿಕೊಂಡಿದ್ದ ಕರ್ನಾಟಕ ತಂಡಕ್ಕೆ ಆಘಾತವಾಗಿದೆ. ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ.


ರೋಹಾ(ಜ.30): ಮಹಾರಾಷ್ಟ್ರದ ರೋಹಾದಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಿಂದ ಕರ್ನಾಟಕ ತಂಡ ಹೊರಬಿದ್ದಿದೆ. ಈ ಮೂಲಕ ಚಾಂಪಿಯನ್ ನಿರೀಕ್ಷೆಯಲ್ಲಿದ್ದ ಕರ್ನಾಟಕ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಇಷ್ಟೇ ಅಲ್ಲ ಟೂರ್ನಿಯಿಂದ ಪ್ರಬಲ ತಂಡವೊಂದು ನಿರ್ಗಮಿಸಿದ ಬೇಸರ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇದನ್ನೂ ಓದಿ: ಟಾಪ್ ಯೋಜನೆಗೆ ಪ್ಯಾರಾ ಕ್ರೀಡಾಳುಗಳ ಸೇರ್ಪಡೆ

Tap to resize

Latest Videos

‘ಡಿ’ ಗುಂಪಿನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ನಾಕೌಟ್‌ ಪ್ರವೇಶಿಸಿದ್ದ ಕರ್ನಾಟಕ, ಅಂತಿಮ 16ರ ಸುತ್ತಿನಲ್ಲಿ ಪುದುಚೇರಿ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಭಾರತೀಯ ರೈಲ್ವೇಸ್‌ ವಿರುದ್ಧ 42-53 ಅಂಕಗಳ ಅಂತರದಲ್ಲಿ ಸೋಲುಂಡಿತು. 

ಇದನ್ನೂ ಓದಿ: ಸ್ಪೇನ್ ವಿರುದ್ದ ಭಾರತ ಮಹಿಳಾ ತಂಡಕ್ಕೆ 5-2 ಅಂತರದ ಗೆಲುವು!

ರೈಲ್ವೇಸ್‌ ಪರ ಪ್ರೊ ಕಬಡ್ಡಿಯ ಬೆಂಗಳೂರು ಬುಲ್ಸ್‌ ಆಟಗಾರ ಪವನ್‌ ಕುಮಾರ್‌ ಅತ್ಯಾಕರ್ಷಕ ಪ್ರದರ್ಶನ ತೋರಿದರು. ಮೊದಲ ಸೆಮೀಸ್‌ನಲ್ಲಿ ಮಹಾರಾಷ್ಟ್ರ-ರೈಲ್ವೇಸ್‌ ಮುಖಾಮುಖಿಯಾದರೆ, 2ನೇ ಸೆಮೀಸ್‌ನಲ್ಲಿ ಹರ್ಯಾಣ-ಸವೀರ್‍ಸಸ್‌ ಎದುರಾಗಲಿವೆ. ಗುರುವಾರ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ನಡೆಯಲಿದೆ.

click me!