ಆರ್'ಸಿಬಿಗೆ ಸೋಲೋದು ಬಿಟ್ಟು ಮತ್ತೇನು ಗೊತ್ತಿಲ್ಲ: 15 ಓವರ್'ಗಳಲ್ಲಿ ಆಟ ಮುಗಿಸಿದ ಕೋಲ್ಕತ್ತಾ

By Suvarna Web DeskFirst Published May 7, 2017, 3:58 AM IST
Highlights

ಆರ್'ಸಿಬಿ ನೀಡಿದ 158 ರನ್'ಗಳ ಗುರಿಯನ್ನು  15.1 ಓವರ್'ಗಳಲ್ಲಿ ಪೂರ್ಣಗೊಳಿಸಿದ ಕೋಲ್ಕತ್ತಾ ನೈಟ್'ರೈಡರ್ಸ್ ತಂಡ ಪ್ಲೇ'ಆಫ್ ಕನಸನ್ನು ಬಹುತೇಕ ನನಸು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಯಾವ ಬೌಲರ್'ಗಳನ್ನು ಲೆಕ್ಕಕ್ಕಿಟ್ಟುಕೊಳ್ಳದ ಕೋಲ್ಕತ್ತಾದ ಕ್ರಿಸ್ ಲಿನ್(50:22 ಎಸೆತ: 4 ಸಿಕ್ಸ್'ರ್, 5 ಬೌಂಡರಿ) ಹಾಗೂ ಸುನಿಲ್ ನರೇನ್(54: 17 ಎಸೆತ, 4 ಸಿಕ್ಸ್'ರ್, 6 ಬೌಂಡರಿ) ಭರ್ಜರಿ ಆಟವಾಡುವ ಮೂಲಕ ಕೇವಲ 7.3 ಓವರ್'ಗಳಲ್ಲಿ 107 ರನ್ ಪೇರಿಸಿ ಉದ್ಯಾನ ನಗರಿ ಪ್ರೇಕ್ಷಕರಿಗೆ ಖುಷಿಯ ರಸದೌತಣ ನೀಡಿದರು.

ಬೆಂಗಳೂರು(ಮೇ.07): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10ನೇ ಆವೃತ್ತಿಯಲ್ಲಿ ಸೋಲುಗಳ ಸರಮಾಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಎಷ್ಟೆ ಕಷ್ಟಪಟ್ಟರೂ ಗೆಲುವನ್ನು ತನ್ನ ಕಡೆ ವಾಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 13ನೇ ಪಂದ್ಯವಾಡಿದ ಆರ್'ಸಿಬಿ'ಗೆ  ತವರು ನೆಲದಲ್ಲಿ ಕೊನೆಯ ಪಂದ್ಯವಾಗಿತ್ತು. ಕಡೆಯ ಪಂದ್ಯದಲ್ಲಾದರೂ ಗೆಲ್ಲಲ್ಲಿ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಯಾರ ಆಸೆಯನ್ನು ಬೆಂಗಳೂರು ತಂಡ ಪೂರೈಸಲಿಲ್ಲ.

ಆರ್'ಸಿಬಿ ನೀಡಿದ 158 ರನ್'ಗಳ ಗುರಿಯನ್ನು  15.1 ಓವರ್'ಗಳಲ್ಲಿ ಪೂರ್ಣಗೊಳಿಸಿದ ಕೋಲ್ಕತ್ತಾ ನೈಟ್'ರೈಡರ್ಸ್ ತಂಡ ಪ್ಲೇ'ಆಫ್ ಕನಸನ್ನು ಬಹುತೇಕ ನನಸು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಯಾವ ಬೌಲರ್'ಗಳನ್ನು ಲೆಕ್ಕಕ್ಕಿಟ್ಟುಕೊಳ್ಳದ ಕೋಲ್ಕತ್ತಾದ ಕ್ರಿಸ್ ಲಿನ್(50:22 ಎಸೆತ: 4 ಸಿಕ್ಸ್'ರ್, 5 ಬೌಂಡರಿ) ಹಾಗೂ ಸುನಿಲ್ ನರೇನ್(54: 17 ಎಸೆತ, 4 ಸಿಕ್ಸ್'ರ್, 6 ಬೌಂಡರಿ) ಭರ್ಜರಿ ಆಟವಾಡುವ ಮೂಲಕ ಕೇವಲ 7.3 ಓವರ್'ಗಳಲ್ಲಿ 107 ರನ್ ಪೇರಿಸಿ ಉದ್ಯಾನ ನಗರಿ ಪ್ರೇಕ್ಷಕರಿಗೆ ಖುಷಿಯ ರಸದೌತಣ ನೀಡಿದರು.

ಸುನಿಲ್ ನರೇನ್'ನಿಂದ ಹೊಸ ದಾಖಲೆ

ಕೋಲ್ಕತ್ತಾ ತಂಡದ ಆರಂಭಿಕ ಆಟಗಾರಸುನಿಲ್ ನರೇನ್ 15 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು ಇದೇ ತಂಡದ ಯೂಸಫ್ ಪಠಾಣ್ 2014ರಲ್ಲಿ ಹೈದರಾಬಾದ್ ವಿರುದ್ಧ ಇಷ್ಟೆ ಬಾಲ್'ಗಳಲ್ಲಿ 50 ರನ್ ಸಿಡಿಸಿದ್ದರು

 ಅನಂತರ ಕ್ರೀಸ್'ಗಿಳಿಸದ ಗ್ರ್ಯಾಂಡ್ಹೋಮ್  ಹಾಗೂ ಗಂಭೀರ್ ಪಂದ್ಯದ ಗೆಲುವನ್ನು ಸಂಪೂರ್ಣ ತಮ್ಮ ಕೈವಶ ಮಾಡಿಕೊಂಡರು. ಬೆಂಗಳೂರು ಪರ ಪವನ್ ನೇಗಿ ಹಾಗೂ ಅಂಕಿತ್ ಚೌಧರಿ ಸ್ವಲ್ಪ ಪ್ರತಿರೋಧ ತೋರಿದರೆ ಉಳಿದವರೆಲ್ಲರೂ ದಂಡಿಸಿಕೊಂಡಿದ್ದೆ. ಕನ್ನಡಿಗ ಶ್ರೀನಾಥ್ ಅರವಿಂದ್ ಅಂತೂ ಒಂದೇ ಓವರ್'ನಲ್ಲಿ 26 ರನ್ ಹೊಡೆಸಿಕೊಂಡು ದುಬಾರಿ ಬೌಲರ್ ಎನಿಸಿದರು. ಅಂತಿಮವಾಗಿ ಕೋಲ್ಕತ್ತಾ ನೈಟ್'ರೈಡರ್ಸ್ 4 ವಿಕೇಟ್ ಕಳೆದುಕೊಂಡು 15.1 ಓವರ್'ಗಳಲ್ಲಿ  ಗೆಲುವಿನ ನಗೆ ಚೆಲ್ಲಿತು.

ಟ್ರಾವಿಸ್ ಹೆಡ್ , ಮನ್'ದೀಪ್ ಸಿಂಗ್ ಆಧಾರ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್'ಸಿಬಿ 5 ಓವರ್'ಗಳಾಗುವಷ್ಟರಲ್ಲಿಯೇ ಸ್ಫೋಟಕ ಆಟಗಾರರಾದ  ಗೇಲ್,ವಿರಾಟ್ ಹಾಗೂ ಎಬಿಡಿ ಅವರನ್ನು ಕಳೆದುಕೊಂಡಿತು. ತಂಡವು ಸಾಧರಣ ಮೊತ್ತ ದಾಖಲಿಸಲು ಚೇತರಿಕೆ ನೀಡಿದ್ದೆ  ಮನ'ದೀಪ್ ಸಿಂಗ್(52) ಹಾಗೂ ಟ್ರಾವಿಸ್ ಹೆಡ್(75*). ಇವರಿಬ್ಬರು 4ನೇ ವಿಕೇಟ್ ನಷ್ಟಕ್ಕೆ 105 ಕಲೆ ಹಾಕಿದರು. 47 ಎಸತೆಗಳಲ್ಲಿ  5 ಭರ್ಜರಿ ಸಿಕ್ಸ್'ರ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯರಾಗಿ 75 ರನ್ ಸಿಡಿಸಿದ ಟ್ರಾವಿಸ್ ಹೆಡ್ ಆರ್'ಸಿಬಿ 158 ರನ್ ದಾಖಲಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆಲ್'ರೌಂಡ್ ಆಟವಾಡಿದ ಸುನೀಲ್ ನರೇನ್ ಪಂದ್ಯ ಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು.

ಸ್ಕೋರ್

ಆರ್'ಸಿಬಿ: 158/6 (20/20 )

ಮನ್'ದೀಪ್ :52, ಟ್ರಾವಿಸ್ ಹೆಡ್: 75

ಕೋಲ್ಕತ್ತಾ ನೈಟ್' ರೈಡರ್ಸ್: 159/4(15.1/20)   

ಲಿನ್:50, ಸುನಿಲ್ ನರೇನ್: 54

ಪಂದ್ಯ ಶ್ರೇಷ್ಠ: ಸುನಿಲ್ ನರೇನ್

click me!