ಡೆಲ್ಲಿ 66ಕ್ಕೆ ಸರ್ವಪತನ; ಪ್ಲೇಆಫ್ ತಲುಪಿದ ಮುಂಬೈ

By Suvarna Web deskFirst Published May 6, 2017, 6:16 PM IST
Highlights

ಕಳೆದೆರೆಡು ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನಟ್ಟಿ ಗೆಲುವು ಸಾಸಿದ್ದ ಡೆಲ್ಲಿ, ಮತ್ತೊಮ್ಮೆ ಅದೇ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಔಟಾದರು. ಗುಜರಾತ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ರಿಶಬ್ ಪಂತ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಕರುಣ್ ನಾಯರ್ 21 ರನ್ ಗಳಿಸಿ ತಂಡದ ಪರ ಗರಿಷ್ಠ ಮೊತ್ತ ದಾಖಲಿಸಿದ ಆಟಗಾರ ಅನಿಸಿಕೊಂಡರು. ಸ್ಪಿನ್ನರ್‌ಗಳಾದ ಹಭರ್ಜನ್ ಸಿಂಗ್ ಹಾಗೂ ಕರ್ಣ್ ಶರ್ಮಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

ನವದೆಹಲಿ(ಮೇ.06): ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 10ನೇ ಆವೃತ್ತಿಯಲ್ಲಿ ಅಕೃತವಾಗಿ ಪ್ಲೇ-ಆ್ ಪ್ರವೇಶಿಸಿದೆ. ಫಿರೋಜ್ ಶಾ ಕೋಟ್ಲಾ ಮೈದಾನ ಶನಿವಾರ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 146 ರನ್‌ಗಳ ಭರ್ಜರಿ ಗೆಲುವು ಸಾಸಿದ ಮುಂಬೈ, ಈ ಆವೃತ್ತಿಯಲ್ಲಿ 9ನೇ ಜಯದ ನಗೆ ಬೀರಿತು. ಮೊದಲು ಬ್ಯಾಟಿಂಗ್ 212 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದ ಮುಂಬೈ ಆನಂತರ ಡೆಲ್ಲಿ ತಂಡವನ್ನು 13.4 ಓವರ್‌ಗಳಲ್ಲಿ ಕೇವಲ 66 ರನ್‌ಗಳಿಗೆ ಆಲೌಟ್ ಮಾಡಿತು.

ಕಳೆದೆರೆಡು ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನಟ್ಟಿ ಗೆಲುವು ಸಾಸಿದ್ದ ಡೆಲ್ಲಿ, ಮತ್ತೊಮ್ಮೆ ಅದೇ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಔಟಾದರು. ಗುಜರಾತ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ರಿಶಬ್ ಪಂತ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಕರುಣ್ ನಾಯರ್ 21 ರನ್ ಗಳಿಸಿ ತಂಡದ ಪರ ಗರಿಷ್ಠ ಮೊತ್ತ ದಾಖಲಿಸಿದ ಆಟಗಾರ ಅನಿಸಿಕೊಂಡರು. ಸ್ಪಿನ್ನರ್‌ಗಳಾದ ಹಭರ್ಜನ್ ಸಿಂಗ್ ಹಾಗೂ ಕರ್ಣ್ ಶರ್ಮಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೂ ಮುನ್ನ ವೆಸ್ಟ್‌ಇಂಡೀಸ್ ಆಟಗಾರರ ಆರ್ಭಟದ ನೆರವಿನಿಂದಾಗಿ ಮುಂಬೈ ಬೃಹತ್ ಮೊತ್ತ ಕಲೆಹಾಕಿತು. ಲೆಂಡ್ಲ್ ಸಿಮನ್ಸ್ ಹಾಗೂ ಕಿರೊನ್ ಪೊಲಾರ್ಡ್ ಡೆಲ್ಲಿ ಡೇರ್‌ಡೆವಿಲ್ಸ್ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದರು. ಮೊದಲ ವಿಕೆಟ್‌ಗೆ ಸಿಮನ್ಸ್ ಹಾಗೂ ಪಾರ್ಥೀವ್ 79 ರನ್ ಜೊತೆಯಾಟವಾಡಿದರು. ಸಿಮನ್ಸ್ 43 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರೆ, 35 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಿಡಿಸಿ 63 ರನ್ ಗಳಿಸಿದ ಪೊಲ್ಲಾರ್ಡ ಅಜೇಯರಾಗಿ ಉಳಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 14 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿಗಳೊಂದಿಗೆ 29 ರನ್ ಚಚ್ಚಿದರು

ಸಂಕ್ಷಿಪ್ತ ಸ್ಕೋರ್: . ಮುಂಬೈ 20 ಓವರ್‌ಗಳಲ್ಲಿ 212/3 (ಸಿಮನ್ಸ್ 66, ಪೊಲಾರ್ಡ್ 63, ರಬಾಡ 1-33),

ಡೆಲ್ಲಿ 13.4 ಓವರ್‌ಗಳಲ್ಲಿ 66/10 (ಕರುಣ್ 21, ಕರ್ಣ್ ಶರ್ಮಾ 3-11)

ಪಂದ್ಯಶ್ರೇಷ್ಠ: ಲೆಂಡ್ಲ್ ಸಿಮನ್ಸ್

click me!