ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

By Web DeskFirst Published Mar 13, 2019, 4:01 PM IST
Highlights

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದಿಗ್ಗಜ ಕ್ರಿಕೆಟಿಗರಲ್ಲಿ ಮನವಿ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ಅನಿಲ್ ಕುಂಬ್ಳೆ ಸೇರಿದಂತೆ ಸ್ಟಾರ್ ಕ್ರಿಕೆಟಿಗರಲ್ಲಿ ಮೋದಿ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಮೋದಿ ಮಾಡಿದ  ಮನವಿಯೇನು? ಇಲ್ಲಿದೆ ವಿವರ.
 

ನವದೆಹಲಿ(ಮಾ.13): ಟೀಂ ಇಂಡಿಯಾ ಕ್ರಿಕೆಟಿಗರು 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಸದ್ದಿಲ್ಲದೇ ತಯಾರಿ ಆರಂಭಿಸಿದ್ದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು 2019ರ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದೆ. ಲೋಕ ಸಮರದ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ಮೋದಿ, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರ ನೆರವು ಕೇಳಿದ್ದಾರೆ.

ಇದನ್ನೂ ಓದಿ: ಲೋಕಸಮರದ ದಿನಾಂಕ ಪ್ರಕಟ: ಮತದಾನಕ್ಕೆ ಸಜ್ಜಾಯಿತು ದೇಶ!

ಮೋದಿ ನೆರವು ಕೇಳಿರುವುದು ತಮಗೆ ಅಥವಾ ಬಿಜೆಪಿಗಾಗಿ ಅಲ್ಲ. ಬದಲಾಗಿ ಚುನಾವಣೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಲಿ ಹಾಗೂ ಮಾಜಿ ಕ್ರಿಕೆಟಿಗರಲ್ಲಿ ಮೋದಿ ಮನವಿ ಮಾಡಿದ್ದಾರೆ. ಎಲ್ಲರೂ ಮತದಾನ ಮಾಡುವಂತೆ ಮತದಾರರಲ್ಲಿ ಅರಿವು ಮೂಡಿಸಿ ಎಂದು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

ಮತದಾನ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ರೋಹಿತ್ ಶರ್ಮಾ, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್ ಬಳಿ ಮೋದಿ ಮನವಿ ಮಾಡಿದ್ದಾರೆ. 17ನೇ ಲೋಕಸಭಾ ಚುನಾವಣೆ ಎಪ್ರಿಲ್ 11 ರಿಂದ ಮೇ 19ರ ವರೆಗೆ ನಡೆಯಲಿದೆ. ಚುನಾವಣೆಯಲ್ಲಿ ಮತದಾರರು ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಕ್ರಿಕೆಟಿಗರ ಜೊತೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಗೂ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ಗೂ ಮನವಿ ಮಾಡಿದ್ದಾರೆ.

 

Dear , and ,
You are always setting outstanding records on the cricketing field but this time, do inspire the 130 crore people of India to set a new record of high voter turnout in the upcoming elections.
When this happens, democracy will be the winner!

— Narendra Modi (@narendramodi)

 

Dear , and - your heroic deeds on the cricket pitch have inspired millions.

Come, it is time to inspire people once again, this time to vote in record numbers.

— Narendra Modi (@narendramodi)

 

When Didi, and say something, the nation takes note!

I humbly request these remarkable personalities to inspire more citizens to come out and vote in the 2019 elections.

A vote is a great way to make the people's voice heard.

— Narendra Modi (@narendramodi)

 

click me!