ಕ್ಲೇ ಕೋರ್ಟ್'ನಲ್ಲಿ ಮತ್ತೊಮ್ಮೆ ಕಿಂಗ್ ಆಗಿ ಮೆರೆದಾಡಿದ ನಡಾಲ್

By Suvarna Web DeskFirst Published Jun 11, 2017, 10:00 PM IST
Highlights

ಒಂದೇ ಗ್ರ್ಯಾಂಡ್‌'ಸ್ಲಾಂನಲ್ಲಿ 10 ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ನಡಾಲ್ ಪಾತ್ರರಾದರು.

ಪ್ಯಾರಿಸ್(ಜೂ.11): ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದ ಕಿಂಗ್ ಆಫ್ ಕ್ಲೇ ಕೋರ್ಟ್ ರಾಫೆಲ್ ನಡಾಲ್ ದಾಖಲೆಯ 10ನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಭಾರೀ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ ಎಡಗೈ ಆಟಗಾರ ನಡಾಲ್ ಟೂರ್ನಿಯ ಆರಂಭದಿಂದಲೂ ಒಂದೂ ಸೆಟ್ ಸೋಲದೇ  ಏಕಪಕ್ಷೀಯವಾಗಿತ್ತು. ಇದಕ್ಕೆ ಕಾರಣ, ಸ್ಪಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಎದುರು ನಡಾಲ್ ವೃತ್ತಿ ಜೀವನದ 15ನೇ ಗ್ರಾಂಡ್'ಸ್ಲಾಮ್ ತಮ್ಮದಾಗಿಸಿಕೊಂಡರು.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ನಡಾಲ್ 6-2, 6-3, 6-1 ಸೆಟ್‌'ಗಳ ಅಂತರದಲ್ಲಿ ಗೆದ್ದು ಬೀಗಿದರು. 2015ರಲ್ಲಿ ಚಾಂಪಿಯನ್ ಆಗಿದ್ದ ವಾವ್ರಿಂಕಾ, 2ನೇ ಫ್ರೆಂಚ್ ಓಪನ್ ಗೆಲ್ಲುವ ಕನಸು ನುಚ್ಚು ನೂರಾಯಿತು.

18 ಗ್ರ್ಯಾಂಡ್‌'ಸ್ಲಾಂ ಗೆದ್ದಿರುವ ರೋಜರ್ ಫೆಡರರ್ ನಂತರ ಅತಿಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆಗೆ ನಡಾಲ್ ಪಾತ್ರರಾಗಿದ್ದಾರೆ. ಅಲ್ಲದೇ 14 ಗ್ರ್ಯಾಂಡ್‌ಸ್ಲಾಂ ಗೆದ್ದಿದ್ದ ಅಮೆರಿಕದ ದಿಗ್ಗಜ ಪೀಟ್ ಸ್ಯಾಂಪರಾಸ್ ದಾಖಲೆಯನ್ನು ನಡಾಲ್ ಮುರಿದರು. ಒಂದೇ ಗ್ರ್ಯಾಂಡ್‌'ಸ್ಲಾಂನಲ್ಲಿ 10 ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ನಡಾಲ್ ಪಾತ್ರರಾದರು.

15 ಕೋಟಿ ಬಹುಮಾನ: ಈ ಬಾರಿ ಪಂದ್ಯಾವಳಿಯ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲಾಗಿತ್ತು. ಚಾಂಪಿಯನ್ ಪಟ್ಟ ಅಲಂಕರಿಸಿದ ನಡಾಲ್ ಬರೋಬ್ಬರಿ 15.13 ಕೋಟಿ ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು. ಇದೇ ವೇಳೆ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ವಾವ್ರಿಂಕಾ 7.64 ಕೋಟಿ ಬಹುಮಾನ ಪಡೆದರು.

click me!