ತಾರಾ ರೆಸ್ಲರ್‌ ಬಜರಂಗ್‌ ಪೂನಿಯಾ ಮತ್ತೆ ಸಸ್ಪೆಂಡ್‌..!

By Kannadaprabha NewsFirst Published Jun 24, 2024, 12:20 PM IST
Highlights

ಡೋಪ್‌ ಪರೀಕ್ಷೆಗೆ ಮೂತ್ರದ ಮಾದರಿ ನೀಡದ ಕಾರಣಕ್ಕೆ ಏ.23ರಂದು ನಾಡಾ ಬಜರಂಗ್‌ರನ್ನು ಅಮಾನತುಗೊಳಿಸಿತ್ತು. ಬಳಿಕ ಅವರ ಮೇಲೆ ಕುಸ್ತಿಯ ಜಾಗತಿಕ ಆಡಳಿತ ಸಂಸ್ಥೆಯೂ ನಿಷೇಧ ಹೇರಿತ್ತು. ಆದರೆ ನಾಡಾ ಬಜರಂಗ್‌ಗೆ ಅಮಾನತು ಆದೇಶದ ನೋಟಿಸ್‌ ಜಾರಿಗೊಳಿಸದ ಕಾರಣಕ್ಕೆ ಡೋಪಿಂಗ್ ನಿಗ್ರಹ ಘಟಕದ ಶಿಸ್ತು ಸಮಿತಿತು ಅಮಾನತನ್ನು ಹಿಂಪಡೆದಿತ್ತು.

ನವದೆಹಲಿ: ಭಾರತದ ತಾರಾ ಕುಸ್ತಿಪಟು ಬಜರಂಗ್‌ ಪೂನಿಯಾ ಮತ್ತೊಮ್ಮೆ ಅಮಾನತುಗೊಂಡಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಭಾನುವಾರ ಬಜರಂಗ್‌ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. 

ಡೋಪ್‌ ಪರೀಕ್ಷೆಗೆ ಮೂತ್ರದ ಮಾದರಿ ನೀಡದ ಕಾರಣಕ್ಕೆ ಏ.23ರಂದು ನಾಡಾ ಬಜರಂಗ್‌ರನ್ನು ಅಮಾನತುಗೊಳಿಸಿತ್ತು. ಬಳಿಕ ಅವರ ಮೇಲೆ ಕುಸ್ತಿಯ ಜಾಗತಿಕ ಆಡಳಿತ ಸಂಸ್ಥೆಯೂ ನಿಷೇಧ ಹೇರಿತ್ತು. ಆದರೆ ನಾಡಾ ಬಜರಂಗ್‌ಗೆ ಅಮಾನತು ಆದೇಶದ ನೋಟಿಸ್‌ ಜಾರಿಗೊಳಿಸದ ಕಾರಣಕ್ಕೆ ಡೋಪಿಂಗ್ ನಿಗ್ರಹ ಘಟಕದ ಶಿಸ್ತು ಸಮಿತಿತು ಅಮಾನತನ್ನು ಹಿಂಪಡೆದಿತ್ತು. ಭಾನುವಾರ ಬಜರಂಗ್‌ಗೆ ನಾಡಾ ನೋಟಿಸ್‌ ಜಾರಿಗೊಳಿಸಿದೆ. ಸದ್ಯ ಅವರಿಗೆ ಜುಲೈ 11ರ ವರೆಗೂ ಮೇಲ್ಮನವಿಗೆ ಅವಕಾಶವಿದೆ.

Latest Videos

T20 World Cup 2024: ಅಮೆರಿಕ ಹೊರದಬ್ಬಿ ಸೆಮೀಸ್‌ಗೆ ಇಂಗ್ಲೆಂಡ್ ಲಗ್ಗೆ..!

ಆರ್ಚರಿ ವಿಶ್ವಕಪ್‌: ನಾಲ್ಕು ಪದಕ ಗೆದ್ದ ಭಾರತೀಯರು

ಅಂಟಾಲ್ಯ(ಟರ್ಕಿ): ಆರ್ಚರಿ ವಿಶ್ವಕಪ್‌ 3ನೇ ಹಂತದ ಸ್ಪರ್ಧೆಯಲ್ಲಿ ಭಾರತ 4 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಭಾನುವಾರ ಭಾರತಕ್ಕೆ 2 ಕಂಚಿನ ಪದಕ ಲಭಿಸಿತು. 

ಧೀರಜ್‌ ಬೊಮ್ಮದೇವರ ಹಾಗೂ ಭಾಜನ್‌ ಕೌರ್‌ ಅವರಿದ್ದ ರೀಕರ್ವ್‌ ಮಿಶ್ರ ತಂಡ ಮೆಕ್ಸಿಕೋದ ಅಲೆಜಾಂಡ್ರ ವೆಲೆನ್ಸಿಯಾ ಹಾಗೂ ಮಾಟಿಯಸ್‌ ಗ್ರಾಂಡೆ ವಿರುದ್ಧ 5-3 ಅಂತರದಲ್ಲಿ ಗೆದ್ದು 3ನೇ ಸ್ಥಾನ ಪಡೆದುಕೊಂಡಿತು. ವೈಯಕ್ತಿಕ ವಿಭಾಗದಲ್ಲೂ ಧೀರಜ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದಕ್ಕೂ ಮುನ್ನ ಶನಿವಾರ ಜ್ಯೋತಿ ಸುರೇಖಾ, ಅದಿತಿ ಸ್ವಾಮಿ ಹಾಗೂ ಪರ್‌ನೀತ್‌ ಕೌರ್‌ ಅವರನ್ನೊಳಗೊಂಡ ಮಹಿಳಾ ಕಾಂಪೌಂಡ್‌ ತಂಡ ಚಿನ್ನ ಗೆದ್ದಿದ್ದರೆ, ವೈಯಕ್ತಿಕ ವಿಭಾಗದಲ್ಲಿ ಪ್ರಿಯಾನ್ಸ್‌ ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು.

T20 World Cup 2024 ಭಾರತ vs ಆಸೀಸ್‌: ಸೆಮೀಸ್‌ ರೇಸ್‌ ಗೆಲ್ಲೋರ್‍ಯಾರು?

ಮಾಜಿ ಒಲಿಂಪಿಯನ್ಸ್‌ಗೆ ಆರೋಗ್ಯ ವಿಮೆ, ಪಿಂಚಣಿ ನೀಡಲು ಐಒಎ ಚಿಂತನೆ!

ನವದೆಹಲಿ: ಭಾರತದ ಎಲ್ಲಾ ಮಾಜಿ ಒಲಿಂಪಿಯನ್‌ಗಳಿಗೆ ವೈದ್ಯಕೀಯ ಆರೋಗ್ಯ ವಿಮೆ ಮತ್ತು ಪಿಂಚಣಿ ನೀಡಲು ಭಾರತೀಯ ಒಲಿಂಪಿಕ್ ಸಂಸ್ಥೆ​​(ಐಒಎ) ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸ್ವತಃ ಐಒಎ ಮುಖ್ಯಸ್ಥೆ ಮಾತನಾಡಿದ್ದು, ಎಲ್ಲಾ ಮಾಜಿ ಒಲಿಂಪಿಯನ್‌ಗಳಿಗೆ ಆರೋಗ್ಯ ವಿಮೆ, ಪಿಂಚಣಿ ನೀಡುವ ಯೋಜನೆಯಿದೆ ಎಂದಿದ್ದಾರೆ. 

ಉಷಾ ಅವರು ಈ ಬಗ್ಗೆ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಿದ್ದು, ಶೀಘ್ರದಲ್ಲೇ ಚರ್ಚೆ ನಡೆಯಲಿದೆ. ಹಲವು ಮಾಜಿ ಅಥ್ಲೀಟ್‌ಗಳು ಹಣಕಾಸಿನ ತೊಂದರೆ ಹಾಗೂ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಐಒಎ ಹೊಸ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.

click me!