ದಸರಾ ಕ್ರೀಡಾಕೂಟ: ಮೈಸೂರು ಸಮಗ್ರ ಚಾಂಪಿಯನ್‌

By Kannadaprabha NewsFirst Published Oct 5, 2019, 12:12 PM IST
Highlights

2019ನೇ ಸಾಲಿನ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಆತಿಥೇಯ ಮೈಸೂರು ತಂಡ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮೈಸೂರು[ಅ.05]: ಕರ್ನಾಟಕ ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಮೈಸೂರು ತಂಡ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ: ಚಂದನ್ ನಡೆಗೆ ನೆಟ್ಟಿಗರು ಗರಂ

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕೊನೆಯ ದಿನವಾದ ಶುಕ್ರವಾರ ನಡೆದ ಕ್ರೀಡಾಕೂಟದಲ್ಲಿ 213 ಅಂಕಗಳಿಸುವ ಮೂಲಕ ಮೈಸೂರು ದಸರಾ ಸಿಎಂ ಕಪ್‌ ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಡಿವೈಇಎಸ್‌ ಬೆಂಗಳೂರಿನ ಶಶಿಕಾಂತ್‌ ಹಾಗೂ ಮಹಿಳಾ ವಿಭಾಗದಲ್ಲಿ ಫ್ಯೂಜನ್‌ ಸ್ಪೋರ್ಟ್ಸ್ ಕ್ಲಬ್‌ನ ಇಂಚರ ಶ್ರೇಷ್ಠ ಅಥ್ಲೀಟ್‌ ಪ್ರಶಸ್ತಿ ಪಡೆದರು. 

ಅರ್ಜುನನ ಮೇಲೆ ದಸರಾ ಅಂಬಾರಿ ಈ ವರ್ಷವೇ ಕಡೆ?

ಕೊನೆಯ ದಿನದ ಕೂಟದಲ್ಲಿ ಪುರುಷರ ವಿಭಾಗದ ಹೈ ಜಂಪ್‌ನಲ್ಲಿ ಬೆಂಗಳೂರಿನ ಚೇತನ್‌ 2.13 ಮೀ. ಎತ್ತರ ಜಿಗಿಯುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದರು.

ದಸರಾ ಕ್ರೀಡಾಕೂಟ ಉದ್ಘಾಟಿಸಿದ ಪಿವಿ ಸಿಂಧು!

ಉಳಿದಂತೆ 200 ಮೀ. ಓಟದಲ್ಲಿ ಮೈಸೂರಿನ ರೋಹಿತ್‌ ಚಿನ್ನ ಗೆದ್ದರೆ, 10,000 ಮೀ. ಓಟದಲ್ಲಿ ಬೆಂಗಳೂರಿನ ಲಕ್ಷ್ಮಣ ಸ್ವರ್ಣ ಗೆದ್ದರು. 4*400 ಮೀ. ಓಟ​ದಲ್ಲಿ ಬೆಂಗ​ಳೂರು ತಂಡ ಮೊದಲ ಸ್ಥಾನ ಪಡೆಯಿತು. ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ಮೈಸೂರಿನ ಪಾರ್ವತಿ ಎಂ. ನಾಯಕ್‌, 200 ಮೀ. ಓಟದಲ್ಲಿ ಬೆಳಗಾವಿಯ ಪದ್ಮಿನಿ ಚಿನ್ನ ಜಯಿ​ಸಿ​ದರು.

ದಾವ​ಣ​ಗೆರೆಯ ಕಿರಣ್‌ಗೆ ದಸರಾ ಕಂಠೀ​ರವ ಪ್ರಶ​ಸ್ತಿ

ಫ್ರೀಸ್ಟೈಲ್‌ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರಿನ ಪ್ರವೀಣ್‌ ಎಂ. ಚಿಕ್ಕಳ್ಳಿ ದಸರಾ ಕುಮಾರ ಪ್ರಶಸ್ತಿ ಗೆದ್ದರು. ಹಳಿಯಾಲದ ಲೀನಾ ಸಿದ್ಧಿ ದಸರಾ ಕಿಶೋರಿ, ಧಾರವಾಡದ ಸದಾಶಿವ ನಲವಡೆ ದಸರಾ ಕೇಸರಿ, ದಾವಣಗೆರೆಯ ಕಿರಣ್‌ ದಸರಾ ಕಂಠೀರವ ಪ್ರಶಸ್ತಿ ಮುಡಿ​ಗೇ​ರಿ​ಸಿ​ಕೊಂಡರು.
 

click me!