4ನೇ ಪಂದ್ಯದಲ್ಲಾದ ರೋಹಿತ್ ಶರ್ಮಾ ರನೌಟ್ ಹಿಂದಿದೆ ಬಹುದೊಡ್ಡ ಮಿಸ್ಟರಿ..!

Published : Sep 30, 2017, 02:07 PM ISTUpdated : Apr 11, 2018, 12:46 PM IST
4ನೇ ಪಂದ್ಯದಲ್ಲಾದ ರೋಹಿತ್ ಶರ್ಮಾ ರನೌಟ್ ಹಿಂದಿದೆ ಬಹುದೊಡ್ಡ ಮಿಸ್ಟರಿ..!

ಸಾರಾಂಶ

ಟೀಂ ಇಂಡಿಯಾದ ನಾಯಕ ವಿರಾಟ್​​​​ ಕೊಹ್ಲಗೂ ಉಪನಾಯಕ ರೋಹಿತ್​​​ ಶರ್ಮಾನಿಗೂ  ಒಂದಾಣಿಕೆಯೇ ಇಲ್ಲ. ಇಬ್ಬರಿಗೂ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗೋದೆ ಇಲ್ಲ. ಒಬ್ಬರ ಯಶಸ್ಸನ್ನ ಮತ್ತೊಬ್ಬರು ಸಹಿಸೋದೇ ಇಲ್ಲ. ಅರ್ರೆ ಯಾಕೀಗೆ ಹೇಳಿದ್ದಾರಪ್ಪ ಅಂದ್ಕೋತಿದ್ದೀರಾ..? ಈ ಸ್ಟೋರಿ ನೋಡಿ ನಿಮಗೇ ತಿಳಿಯುತ್ತದೆ.

ಕೊಹ್ಲಿಗೂ ರೋಹಿತ್​ ಶರ್ಮಾ ನಡುವೆ ಏನೋ ನಡೆಯುತ್ತಿದೆ, ಒಬ್ಬರಿಗೆ ಮತ್ತೊಬ್ಬರನ್ನ ಕಂಡ್ರೆ ಆಗೋದೆ ಇಲ್ಲ, ಅದು ಮೊನ್ನೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಜಗ್ಗಜಾಹಿರಾಯ್ತು. 300 ಪ್ಲಸ್​​ ರನ್​ ಅನ್ನ ಚೇಸ್​​ ಮಾಡುವ ವೇಳೆ ಅದ್ಭುತವಾಗಿ ಬ್ಯಾಟ್​​ ಮಾಡುತ್ತಿದ್ದ ರೋಹಿತ್​​​​'ರನ್ನ ಕೊಹ್ಲಿ ಕ್ರೀಸ್​​'ಗೆ ಇಳಿಯುತ್ತಿದಂತೆ ರನೌಟ್ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು. ಆ ರನೌಟ್​​ ಹೇಗಿತ್ತು ಅಂದ್ರೆ ಕೊಹ್ಲಿಯೇ, ನಿನ್ನ ಜೊತೆ ನನಗೆ ಬ್ಯಾಟಿಂಗ್​ ಮಾಡಲು ಇಷ್ಟವಿಲ್ಲ, ನೀನು ಇಲ್ಲಿಂದ ಹೊರಡು ಎನ್ನುವಂತಿತ್ತು. ಆ ಪರಿ ಇತ್ತು ಮೊನ್ನೆಯ ರನೌಟ್​​.​​​

ಮೊನ್ನೆಯ ರನೌಟ್​​'ನಿಂದ ಪಂದ್ಯದ ಸ್ಥಿತಿ ಬದಲಾಗಿದಂತೂ ಸುಳ್ಳಲ್ಲ. ಆದ್ರೆ ಇವರಿಬ್ಬರ ನಡುವೆ ಒಂದಾಣಿಕೆ ಇಲ್ಲದೆ ಒಬ್ಬರಿಗೊಬ್ಬರು ರನೌಟ್​​ ಬಲೆಗೆ ಬಿದ್ದಿರೋದು ಇದೇ ಮೊದಲೇನಲ್ಲ. 2011ರಿಂದಿಚೆಗೆ ಇವರಿಬ್ಬರ ನಡುವೆ ನಡೆದಿರೋ ರನೌಟ್​​ಗಳ ಸಂಖೆ ಬರೊಬ್ಬರಿ 6. ಒಮ್ಮೆ ಕೊಹ್ಲಿ ರೋಹಿತ್​ರನ್ನ ಔಟ್​​ ಮಾಡಿದ್ರೆ ಮತ್ತೊಮ್ಮೆ ರೋಹಿತ್​​​ ಕೊಹ್ಲಿಯನ್ನ ಔಟ್​​ ಆಗುವಂತೆ ಮಾಡಿದ್ದಾರೆ.

ಅಂದು ಕೊಹ್ಲಿ ಶತಕ ವಂಚಿತನಾಗುವಂತೆ ಮಾಡಿದ್ದ ಹಿಟ್​​ ಮ್ಯಾನ್​​

ಇವರಿಬ್ಬರ ನಡುವಿನ ರನೌಟ್​​​ ವಾರ್​​ ಶುರುವಾಗಿದ್ದು 2011ರಲ್ಲಿ. ಅಂದು ಟೀಂ ಇಂಡಿಯಾ ವಿಂಡೀಸ್​​ ಟೂರ್​​ ಕೈಗೊಂಡಿದ್ದಾಗ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ದಾಖಲಿಸೋ ಹುಮ್ಮಸಿನಲ್ಲಿದ್ರು. 93 ರನ್​ಗಳಿಸಿ ಅದ್ಭುತವಾಗಿ ಬ್ಯಾಟ್​​ ಬೀಸುತಿರುವಾಗ್ಲೆ ಶರ್ಮಾ ಕೊಹ್ಲಿಯನ್ನ ರನೌಟ್​​ ಮಾಡಿಸಿಬಿಟ್ರು. ಕೊಹ್ಲಿಯನ್ನ ಶತಕವಂಚಿತನ್ನಾಗಿ ಮಾಡಿದ್ರು.

ಕೊಹ್ಲಿಯನ್ನ ರನೌಟ್​​ ಮಾಡಿಸಿ ದ್ವಿಶತಕ ಸಿಡಿಸಿದ್ದ ರೋಹಿತ್​​

ಕೊಹ್ಲಿಯನ್ನ ಮೊದಲ ಬಾರಿ ರನೌಟ್​​ ಮಾಡಿಸಿ ಸರಿಯಾಗಿ 2 ವರ್ಷದ ನಂತರ ಮತ್ತೆ ರೋಹಿತ್​​ ಕೊಹ್ಲಿಗೆ ಶಾಕ್​ ಕೊಟ್ಟಿದ್ರು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯನ್ನ ಶೂನ್ಯಕ್ಕೆ ರನೌಟ್​​ ಮಾಡಿಸಿದ್ರು. ಆದ್ರೆ ಅಂದು ಶರ್ಮಾ ಡಬಲ್​ ಸೆಂಚುರಿ ಸಿಡಿಸಿ ಎಲ್ಲರನ್ನ ಸಮಧಾನ ಪಡಿಸಿದ್ರು.

ಕೊಹ್ಲಿಯನ್ನ ರನೌಟ್​​ ಮಾಡಿಸಿದ್ರೆ ದ್ವಿಶತಕ ಸಿಡಿಸೋ ಚಾನ್ಸ್​​ ಸಿಗುತ್ತಾ..?

ಇದೊಂದು ಮಾತು ರೋಹಿತ್​ ವಿಷ್ಯದಲ್ಲಿ ನಿಜವಾಗಿದೆ. ಕಾರಣ 2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಮತ್ತೆ ವಿರಾಟ್'​​​ರನ್ನ ಔಟ್​​ ಮಾಡಿಸಿದ್ರು. ಮತ್ತೆ ಶತಕದಂಚಿನಲ್ಲಿದ್ದ ಕೊಹ್ಲಿಯನ್ನ ರನೌಟ್​​ ಮಾಡಿಸಿ ಪೆವಿಲಿಯನ್'​ಗೆ ಕಳುಹಿಸಿದ್ರು. ಆದ್ರೆ ಅಂದು ಶರ್ಮಾ ದಾಖಲೆಯ 264 ವೈಯಕ್ತಿಕ ರನ್​ಗಳಿಸಿ ವಿಶ್ವದ ಮನಗೆದ್ದಿದ್ರು.

2016ರಲ್ಲೂ ಕೊಹ್ಲಿಗೆ ಮತ್ತೆ ಶಾಕ್​​

ಇನ್ನೂ ಕಳೆದ ವರ್ಷ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಿದ್ದಾಗ ಮತ್ತೆ ರೋಹಿತ್​ ಕಣ್ಣು ಕೊಹ್ಲಿ ಮೇಲೆ ಬಿದ್ದುಬಿಟ್ಟಿತ್ತು. ಉತಮ್ಮವಾಗಿ ಆಡುತ್ತಿದ್ದ ಕೊಹ್ಲಿಯನ್ನ ರನೌಟ್​​ ಮಾಡಿಸಿದ್ರು. ವಿಚಿತ್ರ ಅಂದ್ರೆ ಕೊಹ್ಲಿ ಓಟಾದ ಬಳಿಕ ರೋಹಿತ್​​ ಕೂಡ ರನೌಟ್​​ಗೆ ಬಲಿಯಾಗಿದ್ರು.

2017ರ ಚಾಂಪಿಯನ್ಸ್​​ ಟ್ರೋಫಿಯಲ್ಲಿ ಸೇಡು ತೀರಿಸಿಕೊಂಡ ಕೊಹ್ಲಿ

4 ಬಾರಿ ರೋಹಿತ್​'ನಿಂದಾಗಿ ಔಟ್​​ ಆಗಿದ್ದ ವಿರಾಟ್​​ ಕೊಹ್ಲಿ ಮೊದಲ ಬಾರಿಗೆ ತಿರುಗಿ ಬಿದ್ದಿದ್ದು ಚಾಂಪಿಯನ್ಸ್​​ ಟ್ರೋಫಿಯಲ್ಲಿ. ಪಾಕಿಸ್ತಾನ ವಿರುದ್ಧದ ಲೀಗ್​ ಪಂದ್ಯದಲ್ಲಿ ಕೊಹ್ಲಿ, ಶರ್ಮಾರನ್ನ ಔಟ್​​ ಮಾಡಿಸುವ ಮೂಲಕ ಕಳೆದ 4 ಬಾರಿ ರೋಹಿತ್​ ಮಾಡಿದ್ದ ದ್ರೋಹಕ್ಕೆ ಪ್ರತ್ಯುತ್ತರ ನೀಡಿದ್ರು.

ಇದಾದ ನಂತರ ಮೊನ್ನೆ ಅಂದ್ರೆ 4ನೇ ಪಂದ್ಯದಲ್ಲಿ ಮತ್ತೆ ಕೊಹ್ಲಿ ರೋಹಿತ್​ಗೆ ಶಾಕ್​ ಕೊಟ್ಟಿದ್ರು. ಆದ್ರೆ ರೋಹಿತ್​ ಇನ್ನೂ 4-2 ಅಂತರದಿಂದ ರನೌಟ್​​ ಮಾಡಿಸೋದ್ರಲ್ಲಿ ಮುಂದಿದ್ದಾರೆ. ಇದೇ ಕಾರಣಕ್ಕೆ ನಾವು ಮೊದಲೇ ಹೇಳಿದ್ದು ಕೊಹ್ಲಿಗೂ ರೋಹಿತ್​ ಶರ್ಮಾಗೂ ಆಗಿಬರ್ತಿಲ್ಲ ಅಂತ. ಒಂದು ರನ್​ಗಳಿಸುವಾಗ ಸರಿಯಾಗಿ ಜಡ್ಜ್​ ಮಾಡಲಾಗದೆ ಹೀಗೆ ಪರಸ್ಪರ ಔಟ್​​ ಮಾಡಿಸಿ ತಂಡದ ಗೆಲುವಿನ ಫಲಿತಾಂಶದ ಮೇಲೆ ಪರಿಣಾಮ ಬಿರುವಂತೆ ಮಾಡೋದು ಎಷ್ಟು ಸರಿ. ಇನ್ಮುಂದಾದ್ರೂ ಇವರಿಬ್ಬರು ಬುದ್ಧಿ ಕಲಿಯಲಿ. ಸರಿಯಾಗಿ ರನ್​ ಕದಿಯೋದನ್ನ ಕಲಿಯಲಿ ಎಂಬುದಷ್ಟೇ ನಮ್ಮ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್-19 ಏಷ್ಯಾಕಪ್‌: ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!
ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ