ಟೀಂ ಇಂಡಿಯಾ ಅದ್ಭುತವಾಗಿ ಕ್ರಿಕೆಟ್ ಆಡುತ್ತಿದೆ

By Suvarna Web DeskFirst Published Sep 30, 2017, 1:16 PM IST
Highlights

ಸತತ 9 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬೆಂಗಳೂರಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ರೇಕ್ ಹಾಕಿತ್ತು. ಇನ್ನು ಸರಣಿಯ ಕೊನೆಯ ಏಕದಿನ ಪಂದ್ಯವು ಅಕ್ಟೋಬರ್ 01ರಂದು ನಾಗಪುರದಲ್ಲಿ ನಡೆಯಲಿದೆ.

ನವದೆಹಲಿ(ಸೆ.30): ಆಸ್ಟ್ರೇಲಿಯಾ ಕ್ರಿಕೆಟ್ ಮಾಜಿ ನಾಯಕ ಮೈಕಲ್ ಕ್ಲಾರ್ಕ ಟೀಂ ಇಂಡಿಯಾದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಸೋತಿದ್ದರು ಟೀಂ ಇಂಡಿಯಾದ ಪ್ರದರ್ಶನವನ್ನು ಕೊಂಡಾಡಿದ್ದಾರೆ.

'ಪ್ರಸ್ತುತ ಸಂದರ್ಭದಲ್ಲಿ ಟೀಂ ಇಂಡಿಯಾ ಅದ್ಭುತವಾಗಿ ಆಡುತ್ತಿದೆ. ಯಾರಾದರೂ ಇದು ಕೆಟ್ಟ ತಂಡ ಎಂದು ಹೇಳಿದರೆ, ಅವರ ತಲೆಯಲ್ಲಿ ಏನು ಇದೆ ಎಂದು ಹೇಳಲು ಸಾಧ್ಯವಿಲ್ಲ' ಎಂದು ಕ್ಲಾರ್ಕ್ ಹೇಳಿದ್ದಾರೆ.

ಟೀಂ ಇಂಡಿಯಾ ಈಗಾಗಲೇ 4-1 ಅಂತರ ಮುನ್ನಡೆ ಕಾಯ್ದುಕೊಳ್ಳುವುದು ಮಾತ್ರವಲ್ಲದೇ ಸರಣಿಯನ್ನೂ ಜಯಿಸಿದೆ. 'ಭಾರತ 5-0 ಅಂತರದಲ್ಲಿ ಸರಣಿಯನ್ನು ಜಯಿಸಿಬೇಕಿತ್ತು ಎಂದು ನೀವು ಬಯಸಬಹುದು. ಆದರೆ ನೀವು ಯಾವಾಗಲೂ ಎಲ್ಲಾ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರತಿ ಪಂದ್ಯದಲ್ಲೂ ಶತಕ ಅಥವಾ 5 ವಿಕೆಟ್ ಪಡೆಯಲು ಸಾಧ್ಯವಿಲ್ಲ' ಎಂದು ಟೀಂ ಇಂಡಿಯಾ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಸತತ 9 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬೆಂಗಳೂರಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ರೇಕ್ ಹಾಕಿತ್ತು. ಇನ್ನು ಸರಣಿಯ ಕೊನೆಯ ಏಕದಿನ ಪಂದ್ಯವು ಅಕ್ಟೋಬರ್ 01ರಂದು ನಾಗಪುರದಲ್ಲಿ ನಡೆಯಲಿದೆ.

click me!