
ಯುವಿ ಹಾಗೂ ಹೇಜಲ್ ಮದುವೆ ಕಾರ್ಯಕ್ರಮದಲ್ಲಿ ಧೋನಿ, ವಿರಾಟ್, ಅನುಷ್ಕಾರಂತಹ ಕ್ರಿಕೆಟ್ ಹಾಗೂ ಸಿನಿಮಾ ಜಗತ್ತಿನ ಹಲವಾರು ಗಣ್ಯರು ಕಂಡುಬಂದಿದ್ದರು. ಆದರೆ ಇವರೆಲ್ಲರ ನಡುವೆ ಕ್ರಿಕೆಟ್ ಹಾಗೂ ಸಿನಿಮಾ ಜಗತ್ತಿನ ನಂಟೇ ಇರದ ಮಹಿಳೆಯೊಬ್ಬರು ಕಂಡು ಬಂದಿದ್ದರು. ಈಕೆ ಕ್ರಿಕೆಟ್ ಜಗತ್ತಿನ 'ಮಿಸ್ಟ್ರಿ ಗರ್ಲ್'(ರಹಸ್ಯ ಯುವತಿ) ಎಂಬ ಹೆಸರಿನಿಂದಲೇ ಪ್ರಖ್ಯಾತಿ ಪಡೆದಿದ್ದಾಳೆ. ಈ ಮಿಸ್ಟ್ರಿ ಗರ್ಲ್ ಬೇರೆ ಯಾರು ಆಗಿರದೆ ಈವರೆಗೆ ಹಲವಾರು ಯುವ ಕ್ರಿಕೆಟಿಗರೊಂದಿಗೆ ಸಂಬಂಧ ಹೊಂದಿದ್ದಾಳೆಂದು ಸುದ್ದಿ ಮಾಡಿದ್ದ ಯುವತಿಯೇ ಆಗಿದ್ದಾಳೆ.
ಈ ಮೊದಲು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್'ನೊಂದಿಗಿದ್ದ ಈ ರಹಸ್ಯ ಯುವತಿಯ ಫೋಟೋಗಳೂ ಕಂಡು ಬಂದಿದ್ದವು. ಹಾಗಾದರೆ ಈ ಯುವತಿಗೆ ಕ್ರಿಕೆಟ್ ದಿಗ್ಗಜರೊಂದಿಗಿರುವ ನಂಟೇನು ಈವರೆಗೆ ಈಕೆಯೊಂದಿಗೆ ಯಾವೆಲ್ಲಾ ಕ್ರಿಕೆಟಿಗರಿದ್ದರು? ಇಲ್ಲಿದೆ ವಿವರ
ಕೆಲ ದಿನಗಳ ಹಿಂದಷ್ಟೇ ಈ ಸುಂದರಿ ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ ಮದುವೆ ಕಾರ್ಯಕ್ರಮಕ್ಕೂ ತಲುಪಿದ್ದಳು. ಈಕೆ ಯುವಿಯೊಂದಿಗಿದ್ದ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ. ಟೀಂ ಇಂಡಿಯಾದ ನಾಯಕರೊಂದಿಗೂ ಈಕೆ ಕಂಡು ಬಂದಿದ್ದಳು. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಈ ಕ್ರಿಕೆಟ್ ಗಣ್ಯರೊಂದಿಗೆ ಕಂಡು ಬರುವ ಈಕೆ ಯಾರೆಂಬ ಪ್ರಶ್ನೆ ಬಹುತೇಕರನ್ನು ಕಾಡಲಾರಂಭಿಸಿದೆ.
ಈ ಮಿಸ್ಟ್ರಿ ಗರ್ಲ್'ನ ಹೆಸರು ಸೃಷ್ಠಿ ಚಮೋಲಾ. ಇತ್ತೀಚೆಗಷ್ಟೇ ಸೃಷ್ಠ ಹಾಗೂ ಹಾರ್ದಿಕ್ ಪಾಂಡ್ಯಾ ನಡುವೆ ಸಂಬಂಧವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಪಾಂಡ್ಯಾ ಮೊದಲಿನಿಂದಲೂ ಇಂಡಿಯನ್ ಮಾಡೆಲ್ 'ಲಿಸಾ ಶರ್ಮಾ'ಳೊಂದಿಗೆ ಡೇಟ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ವಿಜಯ್ ಮಲ್ಯರೊಂದಿಗೆ RCB ಯ ಯುನಿಫಾರ್ಮ್ ಧರಿಸಿ ತೆಗೆಸಿದ ಫೋಟೋಗಳೂ ವೈರಲ್ ಆಗಿದ್ದವು.
ಅಚ್ಚರಿಗೀಡು ಮಾಡುವ ವಿಚಾರವೆಂದರೆ ಈಕೆ ಓರ್ವ ಶ್ರೀಮಂತ ಉದ್ಯಮಿಯ ಮಗಳು. ಹೀಗಿದ್ದರೂ ಈಕೆಗೆ ಕ್ರಿಕೆಟ್ ದಿಗ್ಗಜರೊಂದಿಗೆ ಸಂಬಂಧವಿದೆ ಎಂಬ ಸುದ್ದಿಗಳು ಯಾಕೆ ಹರಿದಾಡುತ್ತಿವೆ ಎಂಬುವುದು ಯಕ್ಷ ಪ್ರಶ್ನೆ.
ಈಕೆ ಕೇವಲ ಟೀಂ ಇಂಡಿಯಾದ ಆಟಗಾರರೊಂದಿಗಷ್ಟೇ ಅಲ್ಲದೆ ವಿದೇಶೀ ಕ್ರಿಕೆಟಿಗರೊಂದಿಗೂ ತೆಗೆಸಿದ್ದ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ ಈಕೆಯ ತಂದೆ ಓರ್ವ ಪ್ರಖ್ಯಾತ ಕ್ರಿಕೆಟಿಗ 'ಮುನಾಫ್ ಪಟೇಲ್'ನ ಬಿಸ್'ನೆಸ್ ಪಾರ್ಟ್'ನರ್ ಆಗಿದ್ದಾರೆ.
ಸೃಷ್ಠಿಗೆ ಕ್ರಿಕೆಟ್'ನೊಂದಿಗಿರುವ ಕನೆಕ್ಷನ್ ಮುನಾಫ್ ಪಟೇಲ್'ನಿಂದಾಗಿ ಎಂಬುವುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ದೇಶೀ ಹಾಗೂ ವಿದೇಶೀ ಆಟಗಾರರೊಂದಿಗೆ ಈಕೆಗಿರುವ ಒಟನಾಟದ ಹಿಂದಿನ ರಹಸ್ಯ ಮಾತ್ರ ಇನ್ನೂ ನಿಗೂಢ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.