ರಾಷ್ಟ್ರೀಯ ತಂಡದಲ್ಲಿ ಮೇರಿ ಕೋಮ್ ಆಡುವ ನಿರ್ಧಾರ

By Suvarna Web DeskFirst Published Dec 9, 2016, 2:48 PM IST
Highlights

ರಿಯೊ ಒಲಿಂಪಿಕ್‌'ನಲ್ಲಿ ಅರ್ಹತೆ ಪಡೆಯುವಲ್ಲಿ ವಿಫಲವಾದ ಸಂದರ್ಭದಲ್ಲಿ ಬಾಕ್ಸಿಂಗ್‌'ನಿಂದ ದೂರ ಉಳಿಯುವ ಯೋಚನೆಯಲ್ಲಿದ್ದ ಮೇರಿ, ಇದೀಗ ಮತ್ತೆ ಅಖಾಡಕ್ಕಿಳಿಯುವ ಯೋಚನೆಯಲ್ಲಿದ್ದಾರೆ.

ಗುವಾಹತಿ(ಡಿ.09): ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್, ಭಾರತದ ಪರ ಲೈಟ್ ಫ್ಲೈವೇಟ್ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ರಿಯೊ ಒಲಿಂಪಿಕ್‌'ನಲ್ಲಿ ಅರ್ಹತೆ ಪಡೆಯುವಲ್ಲಿ ವಿಫಲವಾದ ಸಂದರ್ಭದಲ್ಲಿ ಬಾಕ್ಸಿಂಗ್‌'ನಿಂದ ದೂರ ಉಳಿಯುವ ಯೋಚನೆಯಲ್ಲಿದ್ದ ಮೇರಿ, ಇದೀಗ ಮತ್ತೆ ಅಖಾಡಕ್ಕಿಳಿಯುವ ಯೋಚನೆಯಲ್ಲಿದ್ದಾರೆ.

ಈ ವಿಭಾಗವನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) 2020ರ ಟೊಕಿಯೊ ಒಲಿಂಪಿಕ್ಸ್‌ಗೆ ಅನ್ವಯವಾಗುವಂತೆ ಎರಡು ಭಾಗಗಳಾಗಿ ವಿಂಗಡಿಸಿದೆ. ‘‘ ಲೈಟ್ ಫ್ಲೈವೇಟ್ ವಿಭಾಗ ನನ್ನ ನಿಜವಾದ ಸ್ಪರ್ಧೆಯನ್ನು ತೋರಿಸಲು ನೆರವಾಗಲಿದೆ. ಈ ವಿಭಾಗದಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೋಳ್ಳಲಿದ್ದೇನೆ. ಆದರೆ ಇದಕ್ಕಾಗಿ ನನ್ನ ದೇಹವನ್ನು ಹುರಿಗೊಳಿಸಿಲ್ಲ’’ ಎಂದು ಮೇರಿ ಕೋಮ್ ಹೇಳಿದರು.

click me!