ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಬಿಸಿಸಿಐ ಪ್ರಕರಣದ ತನಿಖೆಗೆ ಮುಂದಾಗಿದೆ. ಆರೋಪ ಸಾಬೀತಾದರೆ 2 ವರ್ಷ ನಿಷೇಧ ಹಾಗೂ ಕ್ರಿಮಿನಲ್ ಕೇಸ್ ದಾಖಲಾಗೋ ಭೀತಿ ಎದುರಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ(ಜೂ.12): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಲೀಗ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯುವ ವೇಗಿ ರಸಿಕ್ ಸಲಾಂ ದಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. 17ನೇ ವಯಸ್ಸಿನಲ್ಲಿ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಕೀರ್ತಿಗೆ ರಸಿಕ್ ಪಾತ್ರರಾಗಿದ್ದರು. ಇದೀಗ ರಸಿಕ್ ಸಲಾಂ ದಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಪಾಕಿಸ್ತಾನ ಅಭಿಮಾನಿಗಳು ಭಾರತೀಯರಂತೆ ತಪ್ಪು ಮಾಡಲ್ಲ-ಸರ್ಫರಾಜ್ ಅಹಮ್ಮದ್!
undefined
ಜಮ್ಮು ಮತ್ತು ಕಾಶ್ಮೀರದ ವೇಗಿ ರಸಿಕ್ ಸಲಾಂ ಇದೀಗ ಕಡಿಮೆ ವಯಸ್ಸಿಗಾಗಿ ಸುಳ್ಳು ಪ್ರಮಾಣ ಪತ್ರ ನೀಡಿದ ಆರೋಪ ಎದುರಿಸುತ್ತಿದ್ದಾರೆ. ರಸಿಕ್ ಸಲಾಂ ಎಸ್ಎಸ್ಎಲ್‌ಸಿ ಅಂಕಪಟ್ಟಿಯಲ್ಲಿ ಇರೋ ವಯಸ್ಸು ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಸಲ್ಲಿಸಿದ ವಯಸ್ಸು ತಾಳೆ ಆಗುತ್ತಿಲ್ಲ. ಹೀಗಾಗಿ ರಸಿಕ್ ಸಲಾಂ ವಯಸ್ಸು ಬದಲಿಸಿದ್ದಾರೆ ಎಂದು ಜಮ್ಮು ಕ್ರಿಕೆಟ್ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!
ಜಮ್ಮ ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಪ್ರಕರಣವನ್ನು ಬಿಸಿಸಿಐಗೆ ವಹಿಸಿದೆ. ಇದೀಗ ಬಿಸಿಸಿಐ ರಸಿಕ್ ಸಲಾಂ ದಾರ್ ವಯಸ್ಸು ಬದಲಿಸಿದ ಆರೋಪದ ಕುರಿತು ತನಿಖೆ ನಡೆಸಲಿದೆ. ವಯಸ್ಸು ಬದಲಿಸಿದ ಆರೋಪ ಸಾಬೀತಾದರೆ ಕನಿಷ್ಠ 2 ವರ್ಷ ನಿಷೇಧ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಲಾಗುತ್ತೆ. ಮುಂಬೈ ಇಂಡಿಯನ್ಸ್ ಪರ ಒಂದು ಪಂದ್ಯ ಆಡಿ ಮನೆಮಾತಾಗಿದ್ದ ರಸಿಕ್ ಸಲಾಂ ದಾರ್ ಇದೀಗ ವಯಸ್ಸು ಬದಲಿಸಿದ ಆರೋಪದಲ್ಲಿ ಅಪಖ್ಯಾತಿಗೆ ಗುರಿಯಾಗಿದ್ದಾರೆ.