ಕೋಲ್ಕತ್ತಾ ವಿರುದ್ಧ ಮುಂಬೈ'ಗೆ 9 ರನ್ ಜಯ:10 ಜಯ ದಾಖಲಿಸಿದ ರೋಹಿತ್ ಪಡೆ

Published : May 13, 2017, 01:46 PM ISTUpdated : Apr 11, 2018, 12:34 PM IST
ಕೋಲ್ಕತ್ತಾ ವಿರುದ್ಧ ಮುಂಬೈ'ಗೆ 9 ರನ್ ಜಯ:10 ಜಯ ದಾಖಲಿಸಿದ ರೋಹಿತ್ ಪಡೆ

ಸಾರಾಂಶ

ಎರಡೂ ಇಂಡಗಳು ಈಗಾಗಲೇ ಪ್ಲೇ'ಆಫ್ ಪ್ರವೇಶಿಸಿ ಆಗಿತ್ತು. ಒಂದು ವೇಳೆ ಕೋಲ್ಕತ್ತಾ ಈ ಪಂದ್ಯದಲ್ಲಿ ಗೆದ್ದಿದ್ದರೆ ಎರಡನೇ ಸ್ಥಾನದಲ್ಲಿರುತ್ತಿತ್ತು. ಮುಂಬೈ ಸ್ಥಾನ ಬದಲಾಗುತ್ತಿರಲಿಲ್ಲ

ಕೋಲ್ಕತಾ(ಮೇ.14): ಸಾವಾಲಿಲ್ಲದ್ದ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 9 ರನ್'ಗಳ ಜಯಗಳಿಸಿದೆ.

ಎರಡೂ ಇಂಡಗಳು ಈಗಾಗಲೇ ಪ್ಲೇ'ಆಫ್ ಪ್ರವೇಶಿಸಿ ಆಗಿತ್ತು. ಒಂದು ವೇಳೆ ಕೋಲ್ಕತ್ತಾ ಈ ಪಂದ್ಯದಲ್ಲಿ ಗೆದ್ದಿದ್ದರೆ ಎರಡನೇ ಸ್ಥಾನದಲ್ಲಿರುತ್ತಿತ್ತು. ಮುಂಬೈ ಸ್ಥಾನ ಬದಲಾಗುತ್ತಿರಲಿಲ್ಲ. ಟಾಸ್ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ಆರಂಭದಲ್ಲಿಯೇ ಸಿಮನ್ಸ್ ವಿಕೇಟ್ ಕಳೆದುಕೊಂಡಿತು.  ನಾಯಕ ರೋಹಿತ್ ಶರ್ಮಾ ಹಾಗೂ ಸೌರಭ್ ತಿವಾರಿ  8.2 ಓವರ್'ಗಳಲ್ಲಿ 69 ರನ್ ಸಾಧಾರಣ ಮೊತ್ತ ಕಲೆ ಹಾಕಿದರು.

ಶರ್ಮಾ ಔಟಾದಾಗ  ಬಿರುಸಿನ ಆಟವಾಡುವ ಮೂಲಕ ತಿವಾರಿಗೆ ಜೊತೆಯಾದರು ಅಂಬಾಟಿ ರಾಯುಡು ಇವರಿಬ್ಬರ ಜೊತೆಯಾಟದಿಂದ ಮುಂಬೈ ತಂಡ 20 ಓ'ವರ್'ಗಳಲ್ಲಿ  5 ವಿಕೇಟ್ ನಷ್ಟಕ್ಕೆ 173 ಸಾಧಾರಣ ಮೊತ್ತ ಕಲೆ ಹಾಕಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಾಯುಡು 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸ್'ರ್'ನೊಂದಿಗೆ 63 ರನ್ ಚಚ್ಚಿದರೆ, ತಿವಾರಿ 43 ಚಂಡುಗಳಲ್ಲಿ 9 ಬೌಂಡರಿಗಳೊಂದಿಗೆ 52 ರನ್ ಗಳಿಸಿದರು. . ಕೋಲ್ಕತಾ ಪರ ಟ್ರೆಂಟ್ ಬೋಲ್ಟ್ 2, ಕುಲದೀಪ್ ಮತ್ತು ರಜಪೂತ್ ತಲಾ 1 ವಿಕೆಟ್ ಪಡೆದರು.

173 ರನ್'ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ  ಮೊದಲ ಓವರ್'ನಲ್ಲಿಯೇ ಸುನೀಲ್ ನರೇನ್ ವಿಕೇಟ್ ಕಳೆದುಕೊಂಡಿತು. ಪಾಂಡೆ 33 ಎಸೆತಗಳಲ್ಲಿ 33 ರನ್ ಗಳಿಸಿದ್ದು ಬಿಟ್ಟರೆ ಕ್ರಿಸ್ ಲಿನ್ (26),ಗಂಭೀರ್(21),ಯೂಸಫ್ ಪಠಾಣ್(20) ಹಾಗೂ ಗ್ರಾಂಡೋ'ಮೆ(29) ಬಿರುಸಿನ ಬ್ಯಾಟಿಂಗ್ ಮಾಡಿದರೂ ಬೇಗನೆ ವಿಕೇಟ್ ಒಪ್ಪಿಸಿ ಪೆವಿಲಿಯನ್'ಗೆ ತೆರಳಿದರು. ಅಂತಿಮವಾಗಿ 20 ಓವರ್'ಗಳಲ್ಲಿ 8 ವಿಕೇಟ್ ಕಳೆದುಕೊಂಡು 164 ಮಾತ್ರ ಗಳಿಸಲಷ್ಟೆ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್:173/5 (20/20)

ಕೋಲ್ಕತ್ತಾ ನೈಟ್ ರೈಡರ್ಸ್: 164/8(20/20)

ಪಂದ್ಯ ಶ್ರೇಷ್ಠ: ಅಂಬಾಟಿ ರಾಯುಡು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಟೂರ್ನಿಗೂ ಮೊದಲೇ ಅರೆಸ್ಟ್ ಆಗ್ತಾರಾ ಆರ್‌ಸಿಬಿ ವೇಗಿ ಯಶ್ ದಯಾಳ್‌?
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ಹೊರಬಿದ್ದ ವೈಭವ್ ಸೂರ್ಯವಂಶಿ; ಕಾರಣ ತುಂಬಾ ಇಂಟ್ರೆಸ್ಟಿಂಗ್!