ಆಫ್ಘಾನ್ ಕೋಚ್ ಆಗುವ ಊಹಾಪೋಹ ನಿರಾಕರಿಸಿದ ಯೂನಿಸ್ ಖಾನ್

Published : May 13, 2017, 12:26 PM ISTUpdated : Apr 11, 2018, 01:01 PM IST
ಆಫ್ಘಾನ್ ಕೋಚ್ ಆಗುವ ಊಹಾಪೋಹ ನಿರಾಕರಿಸಿದ ಯೂನಿಸ್ ಖಾನ್

ಸಾರಾಂಶ

ಪ್ರಸ್ತುತ ಯೂನಿಸ್ ಖಾನ್ ವೆಸ್ಟ್'ಇಂಡಿಸ್ ವಿರುದ್ಧದ ಅಂತಿಮ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾರೆ.

ಕರಾಚಿ(ಮೇ.13): ನಿವೃತ್ತಿ ಬಳಿಕ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವರದಿಯನ್ನು ನಿರಾಕರಿಸಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌, ಆ ರೀತಿಯ ಯಾವುದೇ ಪ್ರಸ್ತಾಪ ತಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಆಫ್ಘಾನಿಸ್ತಾನ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಯೂನಿಸ್‌ ಖಾನ್‌ ಸಮ್ಮತಿ ಸೂಚಿಸಿದ್ದಾರೆ ಎಂದು ಆಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ಎಸಿಬಿ) ಮುಖ್ಯಸ್ಥ ಆತಿಫ್‌ ಮಶಾಲ್‌ ಗುರುವಾರ ತಿಳಿಸಿದ್ದರು. 
ಆದರೆ ಇದನ್ನು ನಿರಾಕರಿಸಿರುವ ಯೂನಿಸ್‌, ಆಫ್ಘಾನಿಸ್ತಾನದಿಂದ ಆ ರೀತಿಯ ಯಾವುದೇ ಪ್ರಸ್ತಾಪ ಬಂದಿಲ್ಲ , ಭವಿಷ್ಯದ ಬಗ್ಗೆ ನಿವೃತ್ತಿಯ ಬಳಿಕ ಯೋಚಿಸುತ್ತೇನೆ ಎಂದಿದ್ದಾರೆ. 

ಪ್ರಸ್ತುತ ಯೂನಿಸ್ ಖಾನ್ ವೆಸ್ಟ್'ಇಂಡಿಸ್ ವಿರುದ್ಧದ ಅಂತಿಮ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯನ್ ಗೇಮ್ಸ್‌ನ 4 ಕ್ವಾರ್ಟರ್‌ ಫೈನಲ್ ಪಂದ್ಯಗಳು ಮಳೆಯಿಂದ ರದ್ದು; ಭಾರತಕ್ಕೆ ಈಗ ಸೆಮೀಸ್‌ನಲ್ಲಿ ಎದುರಾಳಿ ಯಾರು?
Asian Games 2026: ನೀರಜ್‌ ಚೋಪ್ರಾ ಇಲ್ಲದಿದ್ದರೂ ಜಾವೆಲಿನ್‌ನಲ್ಲಿ ಭಾರತಕ್ಕೆ 2 ಪದಕ; ಮೆಡಲ್‌ ಟ್ಯಾಲಿ 45ಕ್ಕೆ ಏರಿಕೆ!