ಗೆಳತಿ ಜೊತೆ ತೆರಳಿದ ಮುಂಬೈ ಕ್ರಿಕೆಟಿಗನ ಕೊಲೆ!

Published : Jun 07, 2019, 08:45 PM IST
ಗೆಳತಿ ಜೊತೆ ತೆರಳಿದ ಮುಂಬೈ ಕ್ರಿಕೆಟಿಗನ ಕೊಲೆ!

ಸಾರಾಂಶ

ಮುಂಬೈನ ಯುವ ಕ್ರಿಕೆಟಿಗ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆಗೈದಿದ್ದಾರೆ. ಗೆಳತಿ ಜೊತೆ  ತೆರಳಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. 

ಮುಂಬೈ(ಜೂ.07): ಕ್ರಿಕೆಟಿಗರ ಮೇಲಿನ ದಾಳಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಮುಂಬೈನ ಯುವ ಕ್ರಿಕೆಟಿಗನ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿದೆ. ಮುಂಬೈನ ಸ್ಥಳೀಯ ಕ್ರಿಕೆಟಿಗ ರಾಕೇಶ್ ಪನ್ವಾರ್ ಕೊಲೆಯಾದ ದುರ್ದೈವಿ. ರಾಕೇಶ್ ಕೊಲೆಯಿಂದ ಇದೀಗ ಕ್ರಿಕೆಟ್ ಲೋಕ ಬೆಚ್ಚಿ ಬಿದ್ದಿದೆ.

ಇದನ್ನೂ ಓದಿ: ವಿಶ್ವಕಪ್ 2019: ಮಳೆಯಿಂದ ಪಾಕಿಸ್ತಾನ-ಶ್ರೀಲಂಕಾ ಪಂದ್ಯ ರದ್ದು!

ರಾಕೇಶ್ ಪನ್ವಾರ್ ತನ್ನ ಗೆಳತಿ ಜೊತೆ ತೆರಳಿದ್ದ. ಇದೇ ವೇಳೆ ದುಷ್ಕರ್ಮಿಗಳ ಗುಂಪು ರಾಕೇಶ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದೆ ಎಂದು ರಾಕೇಶ್ ಗೆಳೆಯ ಗೋವಿಂದ್ ರಾಥೋಡ್ ಹೇಳಿದ್ದಾರೆ. ರಾಕೇಶ್‌ಗೆ ಕೆಲ ವೈರಿಗಳಿದ್ದರು. ಇದರಲ್ಲಿ ಖಾನ್ ಕುಟುಂಬ ಕೂಡ ಇದೆ ಎಂದು ಗೋವಿಂದ್ ಹೇಳಿದ್ದಾರೆ. ಆದರೆ ಯಾವ ಖಾನ್ ಕುಟುಂಬ ಅನ್ನೋ ವಿಚಾರ ಬಹಿರಂಗವಾಗಿಲ್ಲ.

ಇದನ್ನೂ ಓದಿ: ಕುಡಿಯುವ ನೀರಿನಲ್ಲಿ ಕಾರು ವಾಶ್- ಕೊಹ್ಲಿಗೆ ದಂಡ!

ಭಂಡೂಪ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ಆರಂಭಿಸಿದ್ದಾರೆ. ರಾಕೇಶ್ ಕೊಲೆ ಬಳಿಕ ಕ್ರಿಕೆಟಿಗರಿಗೆ ಭದ್ರತೆ ನೀಡಬೇಕು ಅನ್ನೋ ಕೂಗಿಗೆ ಮತ್ತಷ್ಟು ಬಲ ಬಂದಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವಕಪ್‌ ಗೆದ್ದ ಭಾರತ ಮಹಿಳಾ ಅಂಧರ ಕ್ರಿಕೆಟ್‌ ತಂಡಕ್ಕೆ 5 ಕೋಟಿ ಬಹುಮಾನ ನೀಡಿದ ನೀತಾ ಅಂಬಾನಿ
ವಿಜಯ್ ಹಜಾರೆ ಟ್ರೋಫಿ: ದೇಶಿ ಕ್ರಿಕೆಟ್‌ನಲ್ಲೂ ಗಿಲ್, ಸೂರ್ಯ ಫೇಲ್!